ರಾಜ್ಯ ಸರ್ಕಾರವು ಜಾತಿ ಸಮೀಕ್ಷೆ ನಡೆಸಲು ಬೆಸ್ಕಾಂ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಬೆಂಗಳೂರಿನ ಜನತೆಗೆ ತೀವ್ರ ತೊಂದರೆಯಾಗಿದೆ ಎಂದು ವರದಿಯಾಗಿದೆ. ರಾಜಧಾನಿಯಲ್ಲಿ 2025ರ ಆಗಸ್ಟ್ 23 ರಿಂದ ಮೀಟರ್ ರೀಡರ್‌ಗಳಿಗೆ ಜಿಯೋ ಟ್ಯಾಗಿಂಗ್ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಈ ಮೂಲಕ ಸರ್ಕಾರ ಜಾತಿ ಸಮೀಕ್ಷೆಯ ಹೊಣೆಯನ್ನು ಅವರಿಗೆ ವಹಿಸಿದೆ.
ಈ ನಿರ್ಧಾರದಿಂದಾಗಿ ಮೀಟರ್ ರೀಡರ್‌ಗಳು ಸಕಾಲದಲ್ಲಿ ಮೀಟರ್ ರೀಡಿಂಗ್ ತೆಗೆದು ಬಿಲ್ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕಳೆದ ಎರಡು ತಿಂಗಳಿಂದ ವಿದ್ಯುತ್ ಬಿಲ್‌ನಲ್ಲಿ ದಿಢೀರ್ ಹೆಚ್ಚಳವಾಗಿದ್ದು, ಇದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ 11 ಅಥವಾ 12ರಂದು ವಿದ್ಯುತ್ ಬಿಲ್ ಪಡೆಯುತ್ತಿದ್ದ ಗ್ರಾಹಕರು, ಈಗ ಬಿಲ್ ವಿಳಂಬದಿಂದಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಿದೆ ಎಂದು ದೂರುತ್ತಿದ್ದಾರೆ. ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ಪ ಡೆಯುತ್ತಿದ್ದವರಿಗೂ ಕಳೆದ ಎರಡು ತಿಂಗಳಿಂದ ನೂರಾರು ರೂಪಾಯಿ ಬಿಲ್ ಬರುತ್ತಿದೆ. ಉಚಿತ ವಿದ್ಯುತ್ ಮಿತಿ ಮುಗಿದ ನಂತರ ಹೆಚ್ಚುವರಿ ಶುಲ್ಕಗಳನ್ನು ಸೇರಿಸಿ ಬಿಲ್ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. Blue Heaven Festive Makeup Kit Set | Pack of 8 Makeup Essentials | Complete Makeup Kit Set for women | Ideal for Festive Looks, Gifting & Bridal Makeup | Medium Tone Combo | Pack of 8 | 32.1g+45.5ml
ಮೀಟರ್ ರೀಡರ್‌ಗಳಿಗೆ ಜಾತಿ ಸಮೀಕ್ಷೆಯ ಕೆಲಸ ನೀಡಿ ಒತ್ತಡ ಹೇರಿರುವ ಸರ್ಕಾರ, ಉಚಿತ ವಿದ್ಯುತ್‌ಗೂ ಕತ್ತರಿ ಹಾಕಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಇನ್ನೂರು ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದ್ದರೂ, ಹೆಚ್ಚಿನ ಬಿಲ್ ನೀಡುವ ಮೂಲಕ ಜನರಿಗೆ ಆಘಾತ ನೀಡಲಾಗಿದೆ. ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಬಳಿಕ, ನಿಗದಿತ ಸಮಯದೊಳಗೆ ಬಿಲ್ ವಿತರಿಸಿ, ಹಣ ಸಂಗ್ರಹಿಸಬೇಕಾಗಿದ್ದ ಬೆಸ್ಕಾಂ, ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.