ನವದೆಹಲಿ, ಸೆಪ್ಟೆಂಬರ್ 23: ಹೊಸ ಜಿಎಸ್ಟಿ ದರ ಜಾರಿಗೆ ಬಂದ ನಂತರ ಕಾರುಗಳ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಸೆಪ್ಟೆಂಬರ್ 22, ಸೋಮವಾರದಂದು ಒಂದೇ ದಿನದಲ್ಲಿ ದೇಶಾದ್ಯಂತ ಸಾವಿರಾರು ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಕಾರುಗಳ ಮಾರಾಟ ಸಂಖ್ಯೆ 30,000 ದಾಟಿದೆ ಎಂದು ಅಂದಾಜಿಸಲಾಗಿದೆ, ಆದರೆ ಹ್ಯೂಂಡಾಯ್ ಒಂದೇ ದಿನದಲ್ಲಿ 11,000 ಕಾರುಗಳನ್ನು ಮಾರಾಟ ಮಾಡಿ ಕಳೆದ ಐದು ವರ್ಷಗಳ ದಾಖಲೆಯನ್ನು ಮುರಿದಿದೆ.
ಸರ್ಕಾರವು ಸೆಪ್ಟೆಂಬರ್ 22 ರಂದು ಹೊಸ ಜಿಎಸ್ಟಿ ದರಗಳನ್ನು ಜಾರಿಗೆ ತಂದಿದ್ದು, ಕಾರುಗಳ ಮೇಲಿನ ತೆರಿಗೆ ಶೇ. 28 ರಿಂದ ಶೇ. 18 ಮತ್ತು ಶೇ. 5 ಕ್ಕೆ ಇಳಿಕೆಯಾಗಿದೆ. ಇದರಿಂದಾಗಿ, ವಿಶೇಷವಾಗಿ 1,200 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಕಾರುಗಳ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟಾರೆ, 30 ಲಕ್ಷ ರೂಪಾಯಿಗಳವರೆಗಿನ ಕಾರುಗಳ ಬೆಲೆ ಇಳಿಕೆಯಾಗಿದೆ. ಈ ತೆರಿಗೆ ಇಳಿಕೆಯ ಲಾಭವನ್ನು ಆಟೊಮೊಬೈಲ್ ಕಂಪನಿಗಳು ಗ್ರಾಹಕರಿಗೆ ಸಂಪೂರ್ಣವಾಗಿ ವರ್ಗಾಯಿಸಿವೆ. Blue Heaven Festive Makeup Kit Set | Pack of 8 Makeup Essentials | Complete Makeup Kit Set for women | Ideal for Festive Looks, Gifting & Bridal Makeup | Medium Tone Combo | Pack of 8 | 32.1g+45.5ml
ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಭರ್ಜರಿ ಚಟುವಟಿಕೆ ಕಂಡುಬಂದಿದ್ದು, ಡೀಲರ್‌ಗಳು ದಾಖಲೆಯ ಮಾರಾಟವನ್ನು ದಾಖಲಿಸಿದ್ದಾರೆ. ಮಾರುತಿ ಸುಜುಕಿಯ ಡೀಲರ್‌ಗಳ ಬಳಿ ಒಂದೇ ದಿನದಲ್ಲಿ 80,000 ಗ್ರಾಹಕರು ವಿಚಾರಣೆಗೆ ಭೇಟಿ ನೀಡಿದ್ದಾರೆ. ವಿಶೇಷವಾಗಿ ಸಣ್ಣ ಕಾರುಗಳಿಗೆ ಭಾರೀ ಬೇಡಿಕೆ ಕಂಡುಬಂದಿದೆ. ಪತ್ನಿ ಸ್ನಾನ ಮಾಡುತ್ತಿರುವ ಸಮಯದಲ್ಲಿ ಹಿಂದಿನಿಂದ ಚಾ*ಕು ಇರಿತ: ಫೇಸ್ಬುಕ್ ನಲ್ಲಿ ಲೈವ್ ಬಂದು ತಪ್ಪೊಪ್ಪಿಗೆ
ಆಟೊಮೊಬೈಲ್ ಡೀಲರ್‌ಗಳ ಒಕ್ಕೂಟವಾದ ಎಫ್‌ಎಡಿಎ ಪ್ರಕಾರ, ಸೋಮವಾರ ಶೋರೂಮ್‌ಗಳಿಗೆ ದೊಡ್ಡ ಸಂಖ್ಯೆಯ ಗ್ರಾಹಕರು ಭೇಟಿ ನೀಡಿದ್ದಾರೆ. ಈ ಜಿಎಸ್ಟಿ ಇಳಿಕೆಯಿಂದಾಗಿ ಆಟೊಮೊಬೈಲ್ ಉದ್ಯಮದಲ್ಲಿ ಗರಿಗೆದರಿದ ವಾತಾವರಣ ಸೃಷ್ಟಿಯಾಗಿದ್ದು, ಗ್ರಾಹಕರಿಗೆ ಕಾರು ಖರೀದಿಗೆ ಇದು ಸೂಕ್ತ ಸಮಯವಾಗಿದೆ.