Skip to main content
ವಿಡಿಯೋ
1/2
globalnews

ಇಟಲಿಯಲ್ಲಿ ಪ್ರತಿಭಟನೆಯ ಕಿಚ್ಚು - ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹ

By Shravanthi R
ಇಟಲಿಯಲ್ಲಿ ಪ್ರತಿಭಟನೆಯ ಕಿಚ್ಚು - ಪ್ಯಾಲೆಸ್ಟೀನ್‌ ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹ

ಇಟಲಿಯಲ್ಲಿ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಮಾನ್ಯತೆ ನೀಡುವಂತೆ ಆಗ್ರಹಿಸಿ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಇಟಲಿ ಅಧ್ಯಕ್ಷ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಸ್ಥಾನಮಾನ ನೀಡಲು ನಿರಾಕರಿಸಿದ ನಂತರ ಈ ಪ್ರತಿಭಟನೆ ಭುಗಿಲೆದ್ದಿದೆ.

ಇಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿಯವರು, ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಗುರುತು ನೀಡಲು ನಿರಾಕರಿಸಿದ್ದಾರೆ. ತಮ್ಮ ನಿರಾಕರಣೆಯನ್ನು ವ್ಯಕ್ತಪಡಿಸಿದ್ದರ ಪರಿಣಾಮವಾಗಿ, ಪ್ಯಾಲೆಸ್ಟೀನ್‌ ಪ್ರತ್ಯೇಕ ದೇಶವಾಗಬೇಕೆಂದು ಆಗ್ರಹಿಸಿ ಅಲ್ಲಿನ ಪ್ರತಿಭಟನಾಕಾರರು ಹೋರಾಟ ನಡೆಸಿದ್ದಾರೆ. ಗಾಜಾದಲ್ಲಿ ಇಸ್ರೇಲ್‌ ದಾಳಿಯನ್ನು ಹಾಗೂ ಪ್ಯಾಲೆಸ್ಟೀನ್‌ಗೆ ರಾಷ್ಟ್ರದ ಮಾನ್ಯತೆ ನೀಡದ ಕಾರಣ ಇಟಲಿಯ ಜನರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ. 

ದೇಶದಾತ್ಯಂತ ರಸ್ತೆ ಹಾಗೂ ಬಂದರುಗಳನ್ನು ಬಂದ್‌ ಮಾಡಿ, ತೀವ್ರ ಪ್ರತಿಭಟನೆ ನಡೆಸಿ ಘೋಷಣೆಗಳು ಮೊಳಗಿದೆ ಎನ್ನಲಾಗಿದೆ. ಬೆಂಕಿಯುಂಡೆಯಂಥ ಇಸ್ರೇಲ್‌ ಪ್ಯಾಲೆಸ್ಟೀನ್‌ ನಡುವಿನ ಯುದ್ದ; ಗಾಜಾದ ಮೇಲೆ ಇಸ್ರೇಲ್‌ ದಾಳಿ ನಿರಂತರವಾಗಿ ಮುಂದುವರೆದಿದ್ದು, ಮಕ್ಕಳು, ವಯಸ್ಕರೆನ್ನದೇ ಜನರ ಪ್ರಾಣ ತೆಗೆಯಲಾಗಿದೆ. ಸಾವಿರಾರು ಜನರನ್ನು ‍ಸ್ಥಳಾಂತರಿಸುತ್ತಿರುವ, ಅಲ್ಲಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಇದೀಗ ಈ ಮಧ್ಯೆ ಇಟಲಿಯಲ್ಲಿ ಜನರು ಭುಗಿಲೆದಿದ್ದಾರೆ. Avadhut and His Teachers Paperback – 25 May 2025

ಇಟಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟಿನ್‌ ಬಗ್ಗೆ ತಮ್ಮ ನಿಲುವನ್ನು ತಿಳಿಸಿದ ಮರುಕ್ಷಣವೇ ಜನರು ರೊಚ್ಚಿಗೆದ್ದಿದ್ದಾರೆ. ಅಲ್ಲಿನ ಜನರು ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಬಂದರುಗಳ ಮೇಲೆ ದಾಳಿ ನಡೆಸಿ ಬಂದ್‌ಗೆ ಕರೆ ನೀಡಿದ್ದಾರೆ ಎನ್ನಲಾಗಿದೆ. ಈ ಉಗ್ರ ತಾಂಡವಕ್ಕೆ ಅಲ್ಲಿನ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟಕ್ಕೀಡಾಗಿವೆ. ಪೋಲಿಸರು ಹಾಗೂ ಜನರ ನಡುವಿನ ಸಂಘರ್ಷದಿಂದಾಗಿ ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಫ್ರಾನ್ಸ್-ಯುಎನ್ ಶೃಂಗಸಭೆ: ಪ್ಯಾಲೆಸ್ಟೈನ್ ರಾಷ್ಟ್ರವನ್ನು ಗುರುತಿಸುವಲ್ಲಿ ಯುರೋಪಿಯನ್ ರಾಷ್ಟ್ರಗಳಿಗೆ ಮುನ್ನಡೆ; ಇಸ್ರೇಲ್ & USA ನಿಂದ ವಿರೋಧ