Skip to main content
ವಿಡಿಯೋ
1/3
general

ಸಾಕುಪ್ರಾಣಿ ವಿಚಾರ ಜಗಳ: ಆಶ್ರಮದ ಮಕ್ಕಳಿಗೆ ತಿನಿಸು ಕೊಡಿಸುವಂತೆ ಆದೇಶಿಸಿದ ದೆಹಲಿ ಹೈಕೋರ್ಟ್; FIR ರದ್ದು

By Gireesh Vasishta
ಸಾಕುಪ್ರಾಣಿ ವಿಚಾರ ಜಗಳ: ಆಶ್ರಮದ ಮಕ್ಕಳಿಗೆ ತಿನಿಸು ಕೊಡಿಸುವಂತೆ ಆದೇಶಿಸಿದ ದೆಹಲಿ ಹೈಕೋರ್ಟ್; FIR ರದ್ದು

ದೆಹಲಿಯ GTB ಆಸ್ಪತ್ರೆ ಬಳಿಯ ಸಂಸ್ಕಾರ್ ಆಶ್ರಮದಲ್ಲಿರುವ ಮಕ್ಕಳಿಗೆ ಪಿಜ್ಜಾ ಜೊತೆಗೆ ಮಜ್ಜಿಗೆ ಪೊಟ್ಟಣಗಳನ್ನು ಹಂಚಬೇಕು ಎಂದು ನ್ಯಾ. ಅರುಣ್ ಮೋಂಗಾ ನಿರ್ದೇಶಿಸಿದರು.

ನವದೆಹಲಿ: ಸಾಕು ಪ್ರಾಣಿ ವಿಚಾರವಾಗಿ ನೆರೆಹೊರೆಯ ಇಬ್ಬರು ವ್ಯಕ್ತಿಗಳು ಪರಸ್ಪರ ಹೂಡಿದ್ದ FIR ಗಳನ್ನು ಈಚೆಗೆ ರದ್ದುಗೊಳಿಸಿದ ದೆಹಲಿ ಹೈಕೋರ್ಟ್‌, ಎರಡೂ ಬದಿಯ ಪಕ್ಷಕಾರರು ಸರ್ಕಾರವು ನಡೆಸುತ್ತಿರುವ ಮಕ್ಕಳ ಆರೈಕೆ ಸಂಸ್ಥೆಯ ಮಕ್ಕಳು ಹಾಗೂ ಸಿಬ್ಬಂದಿಗೆ ಪಿಜ್ಜಾ ಮತ್ತು ಮಜ್ಜಿಗೆ ಕೊಡಿಸಬೇಕೆಂದು ಷರತ್ತು ವಿಧಿಸಿದೆ.. ಅರವಿಂದ್ ಕುಮಾರ್ ಮತ್ತಿತರು ಹಾಗೂ ಸರ್ಕಾರ ಇನ್ನಿತರರ ನಡುವಣ ಪ್ರಕರಣ ಇದಾಗಿದೆ.

ದೆಹಲಿಯ GTB ಆಸ್ಪತ್ರೆ ಬಳಿಯ ಸಂಸ್ಕಾರ್ ಆಶ್ರಮದಲ್ಲಿರುವ ಮಕ್ಕಳಿಗೆ ಪಿಜ್ಜಾ ಜೊತೆಗೆ ಅಮುಲ್‌ನ ಮಜ್ಜಿಗೆ ಪೊಟ್ಟಣಗಳನ್ನು ಹಂಚಬೇಕು. ದೂರುದಾರರಲ್ಲೊಬ್ಬರು ಪಿಜ್ಜಾ ತರಬೇಕು ಅದನ್ನು ಎಲ್ಲಾ ದೂರುದಾರರು ಮತ್ತು ಆರೋಪಿಗಳು ಒಟ್ಟಿಗೆ ನೀಡುವ ಮೂಲಕ ಸಮುದಾಯ ಸೇವೆ ಮಾಡಬೇಕು ಎಂದು ನ್ಯಾಯಮೂರ್ತಿ ಅರುಣ್ ಮೋಂಗಾ ನಿರ್ದೇಶಿಸಿದರು.ಇದನ್ನು ಓದಿ:ಸಾಮಾಜಿಕ & ಶೈಕ್ಷಣಿಕ ಜಾತಿ ಗಣತಿ ವಿಚಾರ: 1.5 ಕೋಟಿ ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದ್ದಾರೆ; ಮಾಜಿ ಸಂಸದ ಮುನಿಸ್ವಾಮಿ ಆಕ್ರೋಶ

ಸಾಕುಪ್ರಾಣಿ ನಿರ್ವಹಣೆ ವಿಚಾರವಾಗಿ ಜಗಳ ನಡೆದ ಹಿನ್ನೆಲೆಯಲ್ಲಿ ಎರಡೂ ಕಡೆಯವರು FIR ದಾಖಲಿಸಿದ್ದರು. ಇಬ್ಬರೂ ಪರಸ್ಪರ ಹಲ್ಲೆ, ಬೆದರಿಕೆ ಹಾಗೂ ಅನುಚಿತ ವರ್ತನೆಯ ಆರೋಪ ಮಾಡಿದ್ದರು. ಆದರೆ  ಅದರ ಬಳಿಕ ಪ್ರಕರಣ ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥವಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women

ಇದು ನೆರೆಹೊರೆಯ ಕಲಹದಿಂದ ಉದ್ಭವಿಸಿದ ಪ್ರಕರಣವಾಗಿದ್ದು ಈಗಾಗಲೇ ಇತ್ಯರ್ಥಗೊಂಡಿದ್ದು, ಕ್ರಿಮಿನಲ್ಪ್ರಕರಣ ಮುಂದುವರೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೂರುದಾರರಲ್ಲಿ ಒಬ್ಬರು ಪಿಜ್ಜಾ (PIZZA) ಮಾರಾಟ ಮಾಡುತ್ತಾರೆ ಎಂಬುದನ್ನು ಅರಿತ ನ್ಯಾಯಾಲಯ ಎರಡೂ ಕಡೆಯವರು ಮಕ್ಕಳಿಗೆ ಪಿಜ್ಜಾ ಹಾಗೂ ಮಜ್ಜಿಗೆಯನ್ನು ಮಕ್ಕಳ ಆರೈಕೆ ಹೊಣೆ ಹೊತ್ತಿರುವ ಸರ್ಕಾರವು ನಡೆಸುತ್ತಿರುವ ಸಂಸ್ಥೆಗೆ ನೀಡುವಂತೆ ಆದೇಶಿಸಿತು. ತನ್ನ ಆದೇಶ ಪಾಲನೆಯಾಗಿದೆಯೇ ಎಂಬುದನ್ನು ತನಿಖಾಧಿಕಾರಿ ಖಚಿತಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. ಒಟ್ಟಿನಲ್ಲಿ ಈ ಕೇಸ್‌ನ ತೀರ್ಪು ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸಿದೆ.