Skip to main content
ವಿಡಿಯೋ
1/2
metro

ಇಬ್ಲೂರು ಜಂಕ್ಷನ್‌ ಟ್ರಾಫಿಕ್ ಜಾಮ್ ನಿವಾರಣೆ: ಸಿದ್ದರಾಮಯ್ಯರಿಂದ ಅಜೀಂ ಪ್ರೇಮ್‌ಜಿ‌ಗೆ ವಿಶೇಷ ಮನವಿ!

By Gireesh Vasishta
ಇಬ್ಲೂರು ಜಂಕ್ಷನ್‌ ಟ್ರಾಫಿಕ್ ಜಾಮ್ ನಿವಾರಣೆ: ಸಿದ್ದರಾಮಯ್ಯರಿಂದ ಅಜೀಂ ಪ್ರೇಮ್‌ಜಿ‌ಗೆ ವಿಶೇಷ ಮನವಿ!

ಸಿಎಂ ಸಿದ್ದರಾಮಯ್ಯ ಇಬ್ಲೂರು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿಪ್ರೋ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನಗಳಿಗೆ ಮಾರ್ಗ ಒದಗಿಸಲು ಅಜೀಂ ಪ್ರೇಮ್‌ಜಿಗೆ ಮನವಿ ಮಾಡಿದ್ದಾರೆ.

ಇಬ್ಲೂರು ಜಂಕ್ಷನ್‌ನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಅವರಿಗೆ ಪತ್ರ ಬರೆದಿದ್ದಾರೆ. ಹೊರ ವರ್ತುಲ ರಸ್ತೆಯ ಕಾರಿಡಾರ್‌ನಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಎಂ ಈ ಮನವಿ ಮಾಡಿದ್ದಾರೆ.

 

ವಿಪ್ರೋ ಕ್ಯಾಂಪಸ್ ಮೂಲಕ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಅವರು ಪ್ರೇಮ್‌ಜಿ ಅವರನ್ನು ಕೋರಿದ್ದಾರೆ. ಈ ಕ್ರಮವು ಇಬ್ಲೂರು ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಸರ್ಕಾರ ಆಶಿಸಿದೆ. ಸಂಚಾರ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಆಸಕ್ತಿ ವಹಿಸಿದ್ದಾರೆ.ಇದನ್ನು ಓದಿ: ನಾಪತ್ತೆ ಪ್ರಕರಣ ಸಂಬಂಧಿತ ಪ್ರದೇಶ ಠಾಣೆ ವ್ಯಾಪ್ತಿಗೆ ಒಳಪಡದು ಎಂದು ದೂರು ನಿರಾಕರಿಸುವಂತಿಲ್ಲ: ಧಾರವಾಡ ಹೈಕೋರ್ಟ್‌ ಪೀಠ ಆದೇಶ

 


ಟ್ರಾಫಿಕ್ ಮತ್ತು ನಗರ ಸಾರಿಗೆ ತಜ್ಞರು ನಡೆಸಿದ ಪ್ರಾಥಮಿಕ ಅಧ್ಯಯನದ ಪ್ರಕಾರ, ವಿಪ್ರೋ ಕ್ಯಾಂಪಸ್ ಮೂಲಕ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದರೆ ಹೊರ ವರ್ತುಲ ರಸ್ತೆಯಲ್ಲಿ ಶೇಕಡಾ 30 ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. ವಿಶೇಷವಾಗಿ ಕಚೇರಿ ಸಮಯಗಳಲ್ಲಿ ಈ ಪರಿಹಾರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.Vogaan Men's Polo Shirt and Shorts Set | Summer Fashion Short Sleeve Solid Zipper 2 Pieces Outfits for Men

 

ಬೆಂಗಳೂರಿನ ಹೊರವಲಯದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇಬ್ಲೂರು ಜಂಕ್ಷನ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಭಾರೀ ಸಂಚಾರ ಸಮಸ್ಯೆ ಸೃಷ್ಟಿಯಾಗಿದೆ.