ಶಿವಮೊಗ್ಗ, ಸೆಪ್ಟೆಂಬರ್ 24: ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಪ್ರಿಯಕರನಿಂದಲೇ ಪ್ರೇಯಸಿಯ ಕೊಲೆಯಾದ ಘೋರ ಘಟನೆ ನಡೆದಿದೆ. ಆರೋಪಿಯಾದ ಸೂರ್ಯನು ತನ್ನ ಪ್ರೇಯಸಿ ಸ್ವಾತಿಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಪ್ರಕರಣದಲ್ಲಿ ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಸೂರ್ಯ ಮತ್ತು ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು, ಸ್ವಾತಿ ಪದವಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸೂರ್ಯ ಮದುವೆಗೆ ಒತ್ತಾಯಿಸುತ್ತಿದ್ದನಾದರೂ, ಸ್ವಾತಿಯ ಕುಟುಂಬಸ್ಥರು ಆಕೆಯ ಓದು ಮುಗಿಯುವವರೆಗೆ ಮದುವೆಗೆ ಒಪ್ಪಿರಲಿಲ್ಲ. ಈ ವಿಚಾರದಲ್ಲಿ ಸೆಪ್ಟೆಂಬರ್ 21 ರಂದು ಇಬ್ಬರ ನಡುವೆ ಜಗಳವೂ ನಡೆದಿತ್ತು. ಅದೇ ದಿನ ಸೂರ್ಯ ಸ್ವಾತಿಯನ್ನು ಮನೆಯಿಂದ ಕಾಲುವೆಗೆ ಕರೆದೊಯ್ದು, ಆಕೆಯನ್ನು ತಳ್ಳಿ ಕೊಲೆ ಮಾಡಿರುವ ಆರೋಪವಿದೆ. KLOSIA Women Viscose Printed Kurta Pant Dupatta Set
ಮಂಗಳವಾರ ಸಂಜೆ ಸ್ವಾತಿಯ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಸೆಪ್ಟೆಂಬರ್ 23 ರಂದು ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಆರೋಪಿಗಳಾದ ಸೂರ್ಯ (ಎ1) ಮತ್ತು ಸ್ವಾಮಿ (ಎ2) ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಇಬ್ಬರನ್ನೂ ಬಂಧಿಸಿದ್ದಾರೆ. PUC ನಂತರ ಉದ್ಯೋಗ-ಆಧಾರಿತ ಉತ್ತಮ ಕೋರ್ಸ್‌ಗಳ ಮಾಹಿತಿ ಇಲ್ಲಿದೆ: ಯಾವುದು ಉತ್ತಮ?