ನಟ ದರ್ಶನ್ ಅವರ ಸೋದರಳಿಯ ಚಂದನ್ ಕುಮಾರ್ ಮೈಸೂರಿನಲ್ಲಿ ಹೊಸ ನಾನ್-ವೆಜ್ ಹೋಟೆಲ್ ಅನ್ನು ಪ್ರಾರಂಭಿಸಿದ್ದಾರೆ. ದಸರಾ ಆಹಾರ ಮೇಳದ ಭಾಗವಾಗಿ ‘ನೆಮ್ಮದಿಯಾಗಿ ಊಟ ಮಾಡಿ' ಎಂಬ ಹೆಸರಿನಲ್ಲಿ ಈ ತಾತ್ಕಾಲಿಕ ಸ್ಟಾಲ್ ಅನ್ನು ತೆರೆಯಲಾಗಿದೆ. ದರ್ಶನ್ ಅವರಿಗೆ ಮೈಸೂರಿನ ಮೇಲೆ ವಿಶೇಷ ಪ್ರೀತಿ ಇದ್ದು, ದಸರಾ ಸಮಯದಲ್ಲಿ ತಪ್ಪದೆ ಅಲ್ಲಿಗೆ ಭೇಟಿ ನೀಡುತ್ತಿದ್ದರು.
\
ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದು, ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಇಂತಹ ಪರಿಸ್ಥಿತಿಯ ನಡುವೆಯೂ ಚಂದನ್ ಫುಡ್ ಸ್ಟಾಲ್ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಚಂದನ್ ಸ್ವತಃ ಗ್ರಾಹಕರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ.Symbol Premium Men's Slim Fit Stretch Knit Pants - Smart Casual | Flexi Waist
ಅನೇಕ ದರ್ಶನ್ ಅಭಿಮಾನಿಗಳು ಚಂದನ್ ಅವರನ್ನು ಗುರುತಿಸಿ ಮಾತನಾಡಿ ಮುಂದೆ ಸಾಗಿದ್ದಾರೆ. ಮತ್ತೆ ಕೆಲವರು ಆ ಫುಡ್ ಸ್ಟಾಲ್‌ನಲ್ಲಿ ಊಟ ಸವಿದು ಹೋಗಿದ್ದಾರೆ. ದರ್ಶನ್ ತಮ್ಮ ಪತ್ನಿಗೆ ಬೈದಿದ್ದ ಆಡಿಯೋದಲ್ಲಿ 'ಇದ್ರೆ ನೆಮ್ಮದಿಯಾಗಿರ್ಬೇಕು' ಎಂಬ ಡೈಲಾಗ್ ವೈರಲ್ ಆಗಿತ್ತು. ಇದೇ ಸಾಲುಗಳು 'ಡೆವಿಲ್' ಸಿನಿಮಾ ಹಾಡಿನ ಶೀರ್ಷಿಕೆಯಾಗಿಯೂ ಬಳಕೆಯಾಗಿತ್ತು.
ಹೀಗಾಗಿ, ಚಂದನ್ ತಮ್ಮ ಫುಡ್ ಸ್ಟಾಲ್‌ಗೆ 'ನೆಮ್ಮದಿಯಾಗಿ ಊಟ ಮಾಡಿ' ಎಂದು ಹೆಸರಿಟ್ಟಿರುವುದು ಗಮನಾರ್ಹ. ಇದಲ್ಲದೆ, ಚಂದನ್ ಚಿತ್ರರಂಗಕ್ಕೆ ಪ್ರವೇಶಿಸಲು ಸಿದ್ಧರಾಗುತ್ತಿದ್ದು, ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾವೊಂದರಲ್ಲಿ ನಟಿಸುವ ನಿರೀಕ್ಷೆಯಿದೆ.ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆ...ಮೂಕಾಂಬಿಕಾ ರಿಷಬ್ ಶೆಟ್ಟಿ ದೇವರಿಗೆ ವಿಶೇಷ ಪೂಜೆ
ಈ ಚಿತ್ರಕ್ಕೆ ದರ್ಶನ್ ವಿಲನ್ ಆಗಿ ನಟಿಸಬೇಕಿತ್ತು ಎಂಬ ಮಾತುಗಳಿದ್ದವು. ಆದರೆ ದರ್ಶನ್ ಜೈಲು ಸೇರಿರುವ ಕಾರಣ, ಸಿನಿಮಾದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಮೂಡಿವೆ. ಮತ್ತೊಂದೆಡೆ, 'ಡೆವಿಲ್' ಸಿನಿಮಾದಲ್ಲಿ ಚಂದನ್ ನಟಿಸಬೇಕಿತ್ತಾದರೂ, ದರ್ಶನ್ ಅವರೇ ಅವರನ್ನು ಆ ಚಿತ್ರದಿಂದ ಹೊರಗಿಟ್ಟಿದ್ದರು.