ಖ್ಯಾತ ಪ್ಯಾನ್ ಇಂಡಿಯಾ ನಟ ಹಾಗೂ ನಿರ್ಮಾಪಕ ದುಲ್ಕರ್ ಸಲ್ಮಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರುಗಳ ಸಂಗ್ರಹದ ಬಗ್ಗೆ ಅತಿಯಾದ ಆಸಕ್ತಿ ಹೊಂದಿರುವ ದುಲ್ಕರ್ ಸಲ್ಮಾನ್, ತಮ್ಮ ಬಳಿ ಅನೇಕ ಐಷಾರಾಮಿ ಬ್ರ್ಯಾಂಡ್‌ಗಳ ಕಾರುಗಳನ್ನು ಹೊಂದಿದ್ದಾರೆ. ಕೆಲ ಮೂಲಗಳ ಪ್ರಕಾರ, ಅವರ ಬಳಿ 40ಕ್ಕೂ ಹೆಚ್ಚು ಕಾರುಗಳಿವೆ.
ಈ ಕಾರುಗಳ ಸಂಗ್ರಹವೇ ಈಗ ಅವರಿಗೆ ತಲೆನೋವಾಗಿದೆ. ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳು ದುಲ್ಕರ್ ಸಲ್ಮಾನ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಇತ್ತೀಚೆಗೆ ಕೇರಳ ರಾಜ್ಯಾದ್ಯಂತ ಕಸ್ಟಮ್ಸ್ ಅಧಿಕಾರಿಗಳು 'ನುಮ್ಕೂರ್' ಹೆಸರಿನಲ್ಲಿ ದಾಳಿಗಳನ್ನು ನಡೆಸಿದ್ದರು.Symbol Premium Men's Slim Fit Stretch Knit Pants - Smart Casual | Flexi Waist
ಭೂತಾನಿ ಭಾಷೆಯಲ್ಲಿ 'ನುಮ್ಕೂರ್' ಎಂದರೆ ವಾಹನ ಎಂದರ್ಥ. ನಿಯಮಬಾಹಿರವಾಗಿ ಹೊರದೇಶಗಳಿಂದ ಕಾರುಗಳನ್ನು ಖರೀದಿಸಿದವರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿತ್ತು. ಮಲಯಾಳಂ ನಟರಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಮನೆಗಳ ಮೇಲೂ ಕಸ್ಟಮ್ಸ್ ದಾಳಿ ನಡೆಸಿ, ಅವರ ಸಂಗ್ರಹದಲ್ಲಿರುವ ಹಲವಾರು ಕಾರುಗಳ ಮಾಹಿತಿಯನ್ನು ಕಲೆಹಾಕಿದ್ದಾರೆ.
ಈ ದಾಳಿ ವೇಳೆ, ದುಲ್ಕರ್ ಸಲ್ಮಾನ್ ಅವರಿಗೆ ಸೇರಿದ ಎರಡು ಕಾರುಗಳ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಇದರ ಪರಿಣಾಮವಾಗಿ, ದುಲ್ಕರ್ ಅವರ ಎರಡು ಐಷಾರಾಮಿ ಕಾರುಗಳನ್ನು ಸೀಜ್ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.'ವೀರ ರಾಜ ವೀರ' ಹಾಡಿನ ಹಕ್ಕುಸ್ವಾಮ್ಯ ಪ್ರಕರಣ: ಎ ಆರ್. ರೆಹಮಾನ್ ಪರ ದೆಹಲಿ ಹೈಕೋರ್ಟ್ ತೀರ್ಪು: ಕಾರಣ ಹೀಗಿದೆ
ದುಲ್ಕರ್ ಅವರ ಮನೆಯಿಂದ ಟೊಯೊಟಾ ಲ್ಯಾಂಡ್ ಕ್ರೂಸರ್ ಮತ್ತು ಲ್ಯಾಂಡ್ ರೋವರ್ ಡಿಫೆಂಡರ್ ಕಾರುಗಳನ್ನು ಸೀಜ್ ಮಾಡಲಾಗಿದೆ. ಈ ಎರಡೂ ಕಾರುಗಳನ್ನು ತ್ರಿಶೂರ್‌ನಲ್ಲಿರುವ ದುಲ್ಕರ್ ಅವರ ನಿವಾಸದಿಂದ ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಒಂದು ಕಾರು ದುಲ್ಕರ್ ಅವರ ಹೆಸರಿನಲ್ಲಿ ನೋಂದಣಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಆ ಕಾರಿನ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ಪ್ರಸ್ತುತ ನಡೆಯುತ್ತಿದೆ.
ಈ ಎರಡು ಕಾರುಗಳನ್ನು ದುಲ್ಕರ್ ಭೂತಾನ್‌ನಿಂದ ಖರೀದಿಸಿರುವ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಭೂತಾನ್ ಸೇನೆಯಿಂದ ವಿದೇಶಿ ಐಷಾರಾಮಿ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಕಳ್ಳದಾರಿಯ ಮೂಲಕ ಭಾರತಕ್ಕೆ ತಂದು, ನಕಲಿ ಹೆಸರುಗಳಲ್ಲಿ ನೋಂದಣಿ ಮಾಡಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಇಂತಹ ನಕಲಿ ದಾಖಲೆಗಳಿರುವ ಮತ್ತು ತೆರಿಗೆ ವಂಚಿಸಿ ತಂದಿರುವ ಕಾರುಗಳು ಕೇರಳದಲ್ಲಿ ಅಧಿಕವಾಗಿ ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ, ಕಸ್ಟಮ್ಸ್ ಅಧಿಕಾರಿಗಳು ರಾಜ್ಯದಾದ್ಯಂತ ಅನೇಕ ಉದ್ಯಮಿಗಳು ಮತ್ತು ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೆ ದಾಳಿ ನಡೆಸಿ, ಹಲವು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.