Skip to main content
ವಿಡಿಯೋ
1/2
general

ಲಡಾಕ್ ರಾಜ್ಯಸ್ಥಾನಮಾನಕ್ಕಾಗಿ ಹೋರಾಟ: ಪ್ರತಿಭಟನಾಕಾರರಿಂದ ಬಿಜೆಪಿ ಕಚೇರಿಗೆ ಬೆಂಕಿ.!

By Shravanthi R
ಲಡಾಕ್ ರಾಜ್ಯಸ್ಥಾನಮಾನಕ್ಕಾಗಿ ಹೋರಾಟ: ಪ್ರತಿಭಟನಾಕಾರರಿಂದ ಬಿಜೆಪಿ ಕಚೇರಿಗೆ ಬೆಂಕಿ.!

ಲೇಹ್‌ನಲ್ಲಿ ಲಡಾಕ್ ಅಪೆಕ್ಸ್ ಬಾಡಿ (LAB) ಸಂಘಟನೆಯ ಯುವಕರು ಲಡಾಕ್‌ಗೆ ರಾಜ್ಯಸ್ಥಾನಮಾನ ನೀಡುವಂತೆ ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಅಕ್ರೋಶಗೊಂಡ ಪ್ರತಿಭಟನಾಕಾರರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಯು 14ನೇ ದಿನಕ್ಕೆ ಕಾಲಿಟ್ಟಿದ್ದು, ಉಪವಾಸ, ರಸ್ತೆ ಆಂದೋಲನ ಮತ್ತು ಬಂದ್ ಮೂಲಕ ತಮ್ಮ ಬೇಡಿಕೆಯನ್ನು ಒತ್ತಾಯಿಸುತ್ತಿರುವ ಮದ್ಯೆ ಸ್ಥಳೀಯ ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ನಿರತರಾಗಿದ್ದಾರೆ.

ಲಡಾಕ್: ಲೇಹನಲ್ಲಿ ಲಡಾಕ್‌ ಅಪೆಕ್ಸ್‌ ಬಾಡಿ (LAB) ಸಂಘಟನೆಯಿಂದ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಲಡಾಕ್‌ಗೆ ರಾಜ್ಯಸ್ಥಾನಮಾನ ನೀಡುವಂತೆ ಆಗ್ರಹಿಸಿ ಇಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಇಲ್ಲಿನ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಉಂಟಾಗಿದ್ದು, ತೀವ್ರ ಆಕ್ರೋಶದಿಂದ ಪ್ರತಿಭಟನಾಕಾರರು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ಲಡಾಕ್‌ ಅಪೆಕ್ಸ್‌ ಬಾಡಿ (LAB) ಯ ಯುವ ಸಂಘಟಕರು ಈ ನೇತೃತ್ವದಲ್ಲಿ, ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿದೆ ಎನ್ನಲಾಗಿದೆ. 

ಕೇಂದ್ರ ಸರ್ಕಾರ ಹಾಗೂ ಸ್ಥಳೀಯ ಆಡಳಿತ ತಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ಸಂಘಟಕರು ಆರೋಪಿಸಿದ್ದಾರೆ. ಈ ಸಲುವಾಗಿ ಪ್ರತಿಭಟನೆಯು ಇಂದಿಗೆ 14 ನೇ ದಿನಕ್ಕೆ ತಲುಪಿದ್ದು, ತೀವ್ರ ವಿರೋಧವನ್ನು ತೋರಿದ್ದಾರೆ ಎನ್ನಲಾಗಿದೆ. ಬೀದಿಗಿಳಿದ ಅಲ್ಲಿನ ಯುವಜನತೆ, ಸೆಪ್ಟೆಂಬರ್ 10 ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 15 ಜನರಲ್ಲಿ ಇಬ್ಬರ ಆರೋಗ್ಯ ಹಾಳಾಗಿದ್ದು, ಇದಾದ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅಲ್ಲಿನ ಯುವ ಘಟಕವು ಬೃಹತ್ ಪ್ರತಿಭಟನೆ ಹಾಗೂ ಬಂದ್ ಗೆ ಕರೆ ನೀಡಿದೆ ಎಂದು ತಿಳಿಸಲಾಗಿದೆ. XIAOMI 14 Civi Shadow Black (8GB RAM 256GB Storage) | 50 MP Leica Triple Camera| SD 8s Gen 3 | 1.5K Quad Curved AMOLED HyperOS

ಹಲವರು ಕೈಗೊಂಡ ಈ ಆಂದೋಲನದಲ್ಲಿ, ಪೊಲೀಸರ ಲಾಠಿ ಪ್ರಹಾರ ಸೇರಿದಂತೆ ಹಲವು ವಾಹನಗಳ ಸುಟ್ಟ ಹಾಕಿದ್ದು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಅಲ್ಲಿನ ಸಂಘಟಕ ನಾಯಕರು ಲಡಾಖ್‌ಗೆ ರಾಜ್ಯದ ಮಾನ್ಯತೆ ನೀಡಬೇಕು ಹಾಗೂ ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ಸೇರಿಸಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲದಿದ್ದರೆ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲವಾಗಿ ಘೋಷಿಸಿದ್ದಾರೆ ಎನ್ನಲಾಗಿದೆ. ಈ ಕುರಿತ ಸ್ಪೋಟಕ ವಿಡಿಯೋಗಳು ಟ್ವಿಟರ್ ನಲ್ಲಿ ಹರಿದಾಡಿದೆ. ಅಲ್ಲಿನ ಪರಿಸ್ಥಿತಿಯು ಹದಗೆಟ್ಟಿದ್ದು ಕಲ್ಲುತೂರಾಟ, ಬೆಂಕಿ ಹಚ್ಚುವಿಕೆ ಮತ್ತಿತರ ಹಿಂಸಾಚಾರ ನಿಯಂತ್ರಣಕ್ಕೆ ಹೆಚ್ಚಿನ ಪೊಲೀಸ್ ಪಡೆಯನ್ನ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬಿಹಾರದಲ್ಲಿ CWC ಸಭೆ - ಕಾಂಗ್ರೆಸ್‌ ಹೈಕಮಾಂಡ್‌ ಭೇಟಿ - ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಭಾಗಿ