Skip to main content
ವಿಡಿಯೋ
1/2
general

ಧರ್ಮಸ್ಥಳ ಪ್ರಕರಣ: ಇಂದು ಕೂಡ ನ್ಯಾಯಾಲಯಕ್ಕೆ ಹಾಜರಾಗಲಿರುವ ಸಾಕ್ಷಿ ದೂರುದಾರ!

By Vinutha U
ಧರ್ಮಸ್ಥಳ ಪ್ರಕರಣ: ಇಂದು ಕೂಡ ನ್ಯಾಯಾಲಯಕ್ಕೆ ಹಾಜರಾಗಲಿರುವ ಸಾಕ್ಷಿ ದೂರುದಾರ!

ಮಂಗಳೂರು ಧರ್ಮಸ್ಥಳ ಅಭಿವೃದ್ಧಿ ಪ್ರಕರಣದಲ್ಲಿ ದೂರುದಾರರ ಹೇಳಿಕೆ ಗುರುವಾರವೂ ದಾಖಲಿಸಲಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ ಜಾಮೀನಿಗೆ ಅರ್ಜಿ ಸಲ್ಲಿಸಿ, ಗಡಿಪಾರು ಆದೇಶ ಇನ್ನೂ ಜಾರಿಯಿಲ್ಲ, ಪೊಲೀಸರ ಹುಡುಕಾಟ ಮುಂದುವರಿಯುತ್ತಿದೆ.

ಧರ್ಮಸ್ಥಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ನ್ಯಾಯಾಧೀಶರ ಮುಂದೆ ಸಾಕ್ಷಿ ಮತ್ತು ದೂರುದಾರರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಗುರುವಾರವೂ ಮುಂದುವರಿಯಲಿದೆ. ಮಂಗಳವಾರ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ದೂರುದಾರರನ್ನು ಗುರುವಾರ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್‌ಐಟಿ ಮಾಹಿತಿ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರರು ನೀಡಿದ ಹೇಳಿಕೆಗಳ ದಾಖಲಾತಿ ಪ್ರಕ್ರಿಯೆ ಬುಧವಾರವೂ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ನಡೆಯಿತು.

ಮಹೇಶ್ ಶೆಟ್ಟಿ ತಿಮರೋಡಿ ಅವರ ಜಾಮೀನು ಅರ್ಜಿ ವಿಚಾರಣೆ ಜೂನ್ 27ಕ್ಕೆ ನಿಗದಿಯಾಗಿದೆ. ಅವರ ಮನೆಯಲ್ಲಿ ಶಸ್ತ್ರಾಸ್ತ್ರ ಪತ್ತೆಯಾದ ಪ್ರಕರಣದಲ್ಲಿ ಜಾಮೀನು ಕೋರಿ ಅವರ ಪರ ವಕೀಲರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. Nifty Womens Mid Rise Denim Wide Leg Jeanshttps://amzn.in/d/gcymprZ

ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಗೆ ಗಡಿಪಾರು ಮಾಡುವಂತೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಆದೇಶಿಸಿದ್ದಾರೆ. ಆದರೆ, ಈ ಆದೇಶದ ಪ್ರತಿಯನ್ನು ತಿಮರೋಡಿ ಅವರಿಗೆ ತಲುಪಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ತಿಮರೋಡಿ ಅವರು ಮನೆಯಲ್ಲೂ ಇಲ್ಲ, ಕಚೇರಿಯಲ್ಲೂ ಇಲ್ಲ. ಹಾಗಾಗಿ ಗಡಿಪಾರು ಆದೇಶ ಜಾರಿಗೊಳಿಸಲು ಸಾಧ್ಯವಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ತಿಳಿಸಿದ್ದಾರೆ.