Skip to main content
ವಿಡಿಯೋ
1/2
crime

ಧರ್ಮಸ್ಥಳ ಕೇಸ್: ಸುಜಾತ ಭಟ್ ಕೇರ್ ಟೇಕರ್ ಆಗಿ ಕೆಲಸ ಮಾಡಿದ್ದ ರಂಗಪ್ರಸಾದ್ ಕುಟುಂಬದವರ ವಿಚಾರಣೆ

By Gireesh Vasishta
ಧರ್ಮಸ್ಥಳ ಕೇಸ್: ಸುಜಾತ ಭಟ್ ಕೇರ್ ಟೇಕರ್ ಆಗಿ ಕೆಲಸ ಮಾಡಿದ್ದ ರಂಗಪ್ರಸಾದ್ ಕುಟುಂಬದವರ ವಿಚಾರಣೆ

ಹೀಗಾಗಿ ಅವರು ಈ ಹಿಂದೆ ಕೇರ್ ಟೇಕರ್ ಆಗಿ ಕೆಲಸ ಮಾಡಿದ್ದ ರಂಗಪ್ರಸಾದ್ ಎಂಬುವವರ ಮಗಳಾದ ವಿದ್ಯಾ ಪ್ರಸಾದ್ ಅವರಿಂದ ಮಾಹಿತಿ ಪಡೆಯಲು ಎಸ್ಐಟಿ ಮುಂದಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಹಲವಾರು ಮಾಹಿತಿಗಳನ್ನ ಕಲೆಹಾಕಿದೆ.

ಧರ್ಮಸ್ಥಳ ಕೇಸ್: ಸುಜಾತ ಭಟ್ ಕೇರ್ ಟೇಕರ್ ಆಗಿ ಕೆಲಸ ಮಾಡಿದ್ದ ರಂಗಪ್ರಸಾದ್ ಕುಟುಂಬದವರ ವಿಚಾರಣೆ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಹಠಾತ್ತನೆ ಬಂದು ದೊಡ್ಡ ಆರೋಪವನ್ನು ಮಾಡಿದ್ದ ಸುಜಾತ ಭಟ್ ಅವರನ್ನು sit ಪೊಲೀಸರು ಈಗಾಗಲೇ ಹಲವು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಅವರ ದೈಹಿಕ ಆರೋಗ್ಯ ಪರಿಸ್ಥಿತಿ ಸರಿ ಇಲ್ಲದ ಕಾರಣಕ್ಕೊ ಅಥವಾ ಬೇರೆ ಇನ್ನಾವುದೋ ಕಾರಣಕ್ಕೊ sit ಅವರನ್ನು ಬಂಧಿಸಿ ವಿಚಾರಣೆ ನಡೆಸಿಲ್ಲ. ಅವರಿಂದ ಹಲವಾರು ಮಾಹಿತಿಯನ್ನು ಮಾತ್ರ ಪಡೆದಿದೆ.

ಹೀಗಾಗಿ ಅವರು ಹಿಂದೆ ಕೇರ್ ಟೇಕರ್ ಆಗಿ ಕೆಲಸ ಮಾಡಿದ್ದ ರಂಗಪ್ರಸಾದ್ ಎಂಬುವವರ ಮಗಳಾದ ವಿದ್ಯಾ ಪ್ರಸಾದ್ ಅವರಿಂದ ಮಾಹಿತಿ ಪಡೆಯಲು ಎಸ್ಐಟಿ ಮುಂದಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ ಹಲವಾರು ಮಾಹಿತಿಗಳನ್ನ ಕಲೆಹಾಕಿದೆ.ಇದನ್ನು ಓದಿ: ಏಷ್ಯಾ ಕಪ್ 2025: ಭಾರತ vs ಬಾಂಗ್ಲಾದೇಶ; ಭಾರತದ ಗೆಲುವು: ಶ್ರಿಲಂಕಾ ಟೂರ್ನಿಯಿಂದ ಹೊರಗೆ

ಹಿಂದೆ ಸುಜಾತ  ಭಟ್ ನನಗೆ ಅನನ್ಯ ಭಟ್ ಎಂಬುವ ಮಗಳಿದ್ದರೂ ಅವಳನ್ನು ಧರ್ಮಸ್ಥಳದಲ್ಲಿ ಕೊಲೆ ಮಾಡಿ ಹೂತು ಹಾಕಲಾಗಿದೆ ಅವಳ ಅಸ್ಥಿಯನ್ನಾದರೂ ಕೊಡಿ ಎಂದು ದೊಡ್ಡ ನಾಟಕದ ಆರೋಪವನ್ನು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟು ಮಾಡಿದ್ದರು.Levi's Men's Slim Fit Mid Rise 511 Mid-Rise Jeans

ಆದರೆ ಇನ್ಸೈಟ್‌ ರಶ್ ಮಿಡಿಯದ ಎಕ್ಸ್ಕ್ಲೂಸಿವ್ ಇಂಟರ್ವ್ಯೂನಲ್ಲಿ ಸುಜಾತ ಭಟ್ಟವರು ನಾನು ಹೇಳಿದ್ದೆಲ್ಲ ಶುದ್ಧ ಸುಳ್ಳು ಇದರ ಹಿಂದೆ ಹಲವರ ಕೈವಾಡವಿದೆ ಎಂದು ಇನ್ಸೈಟ್‌ ರಶ್‌ಗೆ ನೀಡಿದ ಇಂಟರ್ವ್ಯೂಅಲ್ಲಿ ಹೇಳಿಕೆ ನೀಡಿದ್ದರು. ನಂತರ ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿತ್ತು. ಹೀಗಾಗಿ ಅವರು ಈ ಹಿಂದೆ ಕೆಲಸ ಮಾಡಿದ್ದವರ ಮನೆಯಲ್ಲಿ ಹಲವು ಮಾಹಿತಿಗಳನ್ನು SIT ಪೊಲೀಸರು ಪಡೆದಿದ್ದು ಇದು ಧರ್ಮಸ್ಥಳ ವಿರುದ್ಧ ಷಡ್ಯಂತ್ರವನ್ನು ಭೇದಿಸುವಲ್ಲಿ ಸಹಾಯವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ