ಕ್ರಿಕೆಟ್‌ನಲ್ಲಿ ಅಥವಾ ಇನ್ಯಾವುದೇ ಕ್ರೀಡೆಯಲ್ಲಿ ದೈಹಿಕ ಸಮತೋಲನ ಕಾಪಾಡಿಕೊಳ್ಳುವುದು ಬಹುಮುಖ್ಯ ಒಂದು ಸಣ್ಣ ಗಾಯವಾದರೂ ಸಹ ಆಡುವುದು ಬಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ಕ್ರಿಕೆಟ್ ಆಟಗಾರನಾದ ಶ್ರೇಯಸ್ ಅವರಿಗೆ ಬೆನ್ನು ನೋವು ಸಮಸ್ಯೆ ಉಂಟಾಗಿದ್ದು ಟೆಸ್ಟ್ ಕ್ರಿಕೆಟ್ನಿಂದ ಆರು ತಿಂಗಳ ವಿರಾಮವನ್ನು ಕೋರಿದ್ದಾರೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ವಿರಾಮದ ಪ್ರಮುಖ ವಿವರಗಳು:
ವಿರಾಮದ ಕಾರಣ: ಆಟದ ಸಂದರ್ಭದಲ್ಲಿ ಅಯ್ಯರ್ಗೆ ಬೆನ್ನು ನೋವು ಕಾಡಿದ್ದು, ನಾಲ್ಕು ದಿನಗಳಿಗಿಂತ ಹೆಚ್ಚಿನ ಆಟವನ್ನು ಸಹಿಸಿಕೊಳ್ಳಲು ಕಷ್ಟವಾಗಿದೆ. ಸೆಪ್ಟೆಂಬರ್ 24 ರಂದು BCCIಗೆ ಇ-ಮೇಲ್ ಮೂಲಕ ತಿಳಿಸಿದ ಅವರು, ಲಕ್ನೋದಲ್ಲಿ ನಡೆಯುತ್ತಿರುವ ಇಂಡಿಯಾ A vs ಆಸ್ಟ್ರೇಲಿಯಾ A ನಾಲ್ಕು ದಿನಗಳ ಪಂದ್ಯದಿಂದ ಒಂದೇ ಇನಿಂಗ್ಸ್ನಲ್ಲಿ 8 ರನ್ ಗಳಿಸಿ ಹಿಂದೆ ಸರಿದಿದ್ದಾರೆ.ಇದನ್ನು ಓದಿ: ಫೀಲ್ಡ್‌ನಲ್ಲಿ ಉದ್ದೇಶಪೂರ್ವಕ ಸನ್ನೆ ಮಾಡಿದ್ದ ವಿಚಾರ; BCCI ಯಿಂದ ICC ಗೆ ಹ್ಯಾರಿಸ್ ರೌಫ್, ಫರ್ಹಾನ್ ವಿರುದ್ಧ ದೂರು
BCCIಯ ಪ್ರತಿಕ್ರಿಯೆ: BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆ ನೀಡಿದ್ದಾರೆ: " ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ನಿಂದ ಆರು ತಿಂಗಳ ವಿರಾಮ ಕೋರಿದ್ದಾರೆ. ಯುಕೆಯಲ್ಲಿ ಬೆನ್ನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯನ್ನು ಕಂಡಿದ್ದರು, ಟೆಸ್ಟ್ ಆಟದಲ್ಲಿ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ ದೈಹಿಕ ಸಾಮರ್ಥ್ಯ, ದೇಹದ ಸ್ಥಿತಿಸ್ಥಾಪಕತ್ವ ಮತ್ತು ಫಿಟ್ನೆಸ್ಗೆ ಕೆಲಸ ಮಾಡಲು ಅವರು ಬಯಸಿದ್ದಾರೆ. ಈ ನಿರ್ಧಾರದಿಂದಾಗಿ ಅವರನ್ನು ಇರಾನಿ ಕಪ್ಗೆ ಆಯ್ಕೆ ಮಾಡಲಾಗಿಲ್ಲ ಎಂದರು."
ಅವರ ಈ ಮನವಿಯನ್ನು ಬಿಸಿಸಿಐ ಒಪ್ಪಿದ್ದು ಆರು ತಿಂಗಳ ಕಾಲ ವಿರಾಮವನ್ನು ನೀಡಿದೆ ಈ ಹಿನ್ನೆಲೆಯಲ್ಲಿ ಮತ್ತೆ ಸರ್ಜರಿಗೆ ಇಂಗ್ಲೆಂಡಿಗೆ ತೆರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.