Skip to main content
ವಿಡಿಯೋ
1/2
cinema

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ - ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಮಿಂಚಿದ ಪುಟಾಣಿ ತಾರೆ ಯಾರು ಗೊತ್ತಾ?

By Shravanthi R
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ - ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದು ಮಿಂಚಿದ ಪುಟಾಣಿ ತಾರೆ ಯಾರು ಗೊತ್ತಾ?

71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಐದು ವರ್ಷದ ಬಾಲನಟಿ ತ್ರಿಶಾ ತೊಸಾರ್‌ ಎಲ್ಲರ ಗಮನ ಸೆಳೆದರು. ಮರಾಠಿ ಸಿನಿಮಾ `ನಾಲ್ 2’ ಯಲ್ಲಿ ನೀಡಿದ ಅಭೂತಪೂರ್ಣ ಅಭಿನಯಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅತ್ಯುತ್ತಮ ಬಾಲನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ 71 ನೇ ನ್ಯಾಷನಲ್‌ ಫಿಲ್ಮ್ ಅವಾಡ್ಸ್‌ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದ ಬಾಲಕಿ ತ್ರಿಶಾ ವಿವೇಕ್‌ ತೊಸಾರ್‌. ಇಲ್ಲಿನ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಟ ಶಾರುಖ್‌ ಖಾನ್‌, ನಟಿ ರಾಣಿ ಮುಖರ್ಜಿ, ಮೋಹನ್‌ ಲಾಲ್‌ ಸೇರಿದಂತೆ ಹಲವು ಪ್ರಮುಖ ಸಿನಿತಾರೆಯರನ್ನು ಸನ್ಮಾನಿಸಲಾಯಿತು. ಈ ನಡುವೆ ಎಲ್ಲರ ಚಿತ್ತಗೈದ ಐದು ವರ್ಷದ ಈ ಬಾಲನಟಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ಮರಾಠಿಯ ʻನಾಲ್‌ 2ʼ ಎಂಬ ಚಲನಚಿತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದೆ ಎಂದು ಗುರುತಿಸಿಕೊಂಡಿದ್ದಾರೆ. ಸುಧಾಕರ್‌ ಯಕ್ಕಂಟಿ ನಿರ್ದೇಶಿತ ಹಾಗೂ ಖ್ಯಾತ ನಿರ್ಮಾಪಕ ನಾಗರಾಜ್‌ ಮಂಜುಳೆಯವರ ನಿರ್ಮಾಣದ ಈ ಸಿನಿಮಾದ ಅಭಿನಯಕ್ಕಾಗಿ ಬಾಲಕಿಯು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ. ಮುದ್ದಾಗಿ ಸೀರೆಯುಟ್ಟ, ಪುಟ್ಟ ನಡಿಗೆಗಳಲ್ಲಿ ಬಂದು ನಮಸ್ಕರಿಸಿ, ವೇದಿಕೆಗೆ ಆಗಮಿಸಿದರು, ಈ ವೇಳೆ ಗಣ್ಯರು, ಸಾಧನೆ ತೋರಿದ ಬಾಲನಟಿಗೆ ಚಪ್ಪಾಳೆ ತಟ್ಟಿದ್ದಾರೆ. Comprehensive Guide for IPMAT Entrance Exam (IIM Indore, Rohtak & Jammu) with Previous Year Questions (PYQs) 4th Edition | Integrated Program in Management Aptitude Test Paperback – 20 July 2024

ಈ ಸಮಾರಂಭದಲ್ಲಿ ಒಟ್ಟು ಐದು ಮಕ್ಕಳು ಬಾಲನಟ- ನಟಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ತ್ರಿಶಾ ತೊಸಾರ್‌, ಸುಕೃತಿ ವೇಣಿ ಬಂಡ್ರೆಡ್ಡಿ, ಭಾರ್ಗವ್‌ ಜಗಾಪ್ತ್‌, ಶ್ರೀನಿವಾಸ್‌ ಪೋಕಲೆ ಹಾಗೂ ಕಬೀರ್‌ ಖಂಡಾರೆ ಪ್ರಶಸ್ತಿಗಳನ್ನು ಪಡೆದರು. ಈ ಮದ್ಯೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಪಡೆಯುವ ಮೂಲಕ ಈ ಪುಟಾಣಿ ಛಾಪು ಮೂಡಿಸಿದ್ದಾಳೆ ಎನ್ನಲಾಗಿದೆ. ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿರುವ ತ್ರಿಶಾ, 'ಪುನ್ಹಾ ಶಿವಾಜಿ ರಾಜೇ ಭೋಸಲೆ', 'ಮನ್ವತ್ ಮರ್ಡರ್ಸ್' ಮತ್ತು 'ಪೆಟ್ ಪುರಾನ್' ಚಿತ್ರಗಳಲ್ಲಿ ನಟಿಸಿದ್ದಾರೆ. ಮಹೇಶ್‌ ಮಂಜ್ರೇಕರ್‌ ಹಾಗೂ ಸಿದ್ದಾರ್ಥ್‌ ಜಾಧವ್‌ ಅವರೊಂದಿಗೆ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಇದನ್ನೂ ಓದಿ: ಬಹು ನಿರೀಕ್ಷಿತ ಸರಣಿ 'ಆಲಿಸ್ ಇನ್ ಬಾರ್ಡರ್‌ಲ್ಯಾಂಡ್' ಸೀಸನ್ 3 ಬಿಡುಗಡೆ ದಿನಾಂಕ ಪ್ರಕಟ...ಎಲ್ಲಿದೆ ಮಾಹಿತಿ!