ಇಂದು ಪ್ರಧಾನಿ ನರೇಂದ್ರ ಮೋದಿಯವರು, ನೋಯ್ಡಾದಲ್ಲಿ ಯುಪಿ ಇಂಟರ್‌ನ್ಯಾಷನಲ್ ಟ್ರೇಡ್ ಶೋ ಉದ್ಘಾಟನೆ ಮಾಡಿದರು. ಈ ವೇಲೆ ಮಾತನಾಡಿದ ಅವರು, ಜಾಗತಿಕವಾಗಿ ಭಾರತವು ಸ್ವಾವಲಂಬಿಯಾಗುವ ಬಗ್ಗೆ ಹೇಳುತ್ತಾ, ಜಾಗತಿಕ ಅನಿಶ್ಚಿತತೆಯ ನಡುವೆಯೂ ಭಾರತವು ಸ್ಥಿತಿಸ್ಥಾಪಕತ್ವವನ್ನು ಕಾಯ್ದುಕೊಳ್ಳಬೇಕು ಎಂದರು. ಇದರಿಂದ ರಾಷ್ಟ್ರವು, ಆತ್ಮ ನಿರ್ಭರ ಹಾಗೂ ಪ್ರಗತಿಗೆ ಹೆಜ್ಜೆಯಿಡುವಲ್ಲಿ ಯಶಸ್ವಿಯಾಗಲಿದೆ ಎಂದಿದ್ದಾರೆ.
ಉತ್ತರ ಪ್ರದೇಶದ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ ಕಾರಯಕ್ರಮವನ್ನು ಉದ್ಘಾಟಿಸಿ, ಒಂದು ದೇಶ ಬೇರೆಯವರ ಮೇಲೆ ಅವಲಂಬಿತವಾದರೆ ಅದರ ಪ್ರಗತಿಗೆ ಹಿನ್ನಡೆಯಾಗುತ್ತಿದ್ದರೆ, ಭಾರತವು ಪ್ರಗತಿಯ ಹಾದಿಯಲ್ಲಿ ಸಾಗಿದೆ ಹಾಗೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಬೇರೆ ದೇಶಗಳ ಮೇಲಿನ ಅವಲಂಬನೆಯು ಪ್ರಗತಿ ಕುಂಠಿತವಾಗಲಿದೆ. ಯಾವುದೇ ಅನಿಶ್ಚಿತತೆಗಳು ನಮಗೆ ಹಿನ್ನಡೆ ತರುವುದಿಲ್ಲ. ಹಾಗಾಗಿ, ದೇಶದಲ್ಲಿ ಚಿಪ್ಸ್ ತಯಾರಿಕೆಯಿಂದ ಹಿಡಿದು, ಹಡಗುಗಳವರೆಗೆ ಎಲ್ಲವೂ ಸ್ವಾವಲಂಬಿ ಭಾರತ್ ನಮ್ಮ ಧ್ಯೇಯ ಹಾಗೂ ಸಂಕಲ್ಪವಾಗಬೇಕು ಎಂದು ತಿಳಿಸಿದ್ದಾರೆ. MAT 12 Years Topic-wise Previous Year Solved Papers (2011 - 2022) 9th Edition | Management Aptitude Test | 2400+ PYQs | Mathematical Skills, Language ... Reasoning, Indian & Global Environment Paperback – 27 August 2022
ಇದೇ ವೇಳೆ, ರಷ್ಯಾ ದೇಶವು, ʻಕಾಲಪರೀಕ್ಷಿತ ಪಾಲುದಾರʼ ಎನ್ನುವ ಮೂಲಕ ಕಾರ್ಯಕ್ರಮದ ಪಾಲುದಾರಿಕೆ ಹೊಂದಿರುವ ರಷ್ಯಾವನ್ನು ಉದ್ದೇಶಿಸಿ ನುಡಿದರು. ಅವರು ತಮ್ಮ ಭಾಷಣದಲ್ಲಿ ಈ ಮೂಲಕ ಭಾರತ ಹಾಗೂ ರಷ್ಯಾದ ಸಹಭಾಗಿತ್ವವು ಸಾಕಷ್ಟು ವರ್ಷಗಳಿಂದ ಗಟ್ಟಿಯಾಗಿದೆ ಎಂದಿದ್ದಾರೆ ಎನ್ನಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆ ಸೇರಿದಂತೆ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ವಿವರಿಸಿದ ಮೋದಿಯವರು, ಅನಿಶ್ಚಿತ ಪರಿಸ್ಥಿತಿಯಲ್ಲೂ ನಮ್ಮ ಪ್ರಗತಿ ಉತ್ತಮ ಹಾದಿಯಲ್ಲಿದೆ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಐದು ಲಕ್ಷಕ್ಕೂ ಅಧಿಕ ಜನರು ಸಂದಿದ್ದರು ಎನ್ನಲಾಗಿದೆ. 2,500 ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 500 ಕ್ಕೂ ಅಧಿಕ ವಿದೇಶಿ ಖರೀದಿದಾರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಭಾರತದ ಸ್ಮಾರ್ಟ್‌ಫೋನ್ ರಫ್ತು ಭಾರೀ ಏರಿಕೆ: ಅಮೆರಿಕಕ್ಕೆ ಶೇಕಡಾ 148ರಷ್ಟು ವೃದ್ಧಿ!