ಬೆಂಗಳೂರು: ಮಾನ್ಯ ಕಾರ್ಮಿಕ ಸಚಿವ ಶ್ರೀ ಸಂತೋಷ್ ಲಾಡ್ ಅವರು ಇಂದು ವಿಕಾಸಸೌಧದ ಸಭಾಂಗಣದಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದ ಹಿರಿಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳೊಂದಿಗೆ ಏರ್ ಆಂಬುಲೆನ್ಸ್ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ತುರ್ತು ಸಂದರ್ಭಗಳಲ್ಲಿ ಕಾರ್ಮಿಕರನ್ನು ಸಾಗಿಸಲು ಏರ್ ಆಂಬುಲೆನ್ಸ್‌ನ ಬಳಕೆ ಕುರಿತಂತೆ ಎಚ್‌ಎಎಲ್‌ನ ಹಿರಿಯ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಸಿದ್ಧಪಡಿಸಿದ ಪ್ರಾತ್ಯಕ್ಷಿಕೆಯ ವಿಡಿಯೋ ಚಿತ್ರಣವನ್ನು ಸಚಿವರು ವೀಕ್ಷಿಸಿದರು.ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಮಹತ್ವದ ನಿರ್ಧಾರಗಳು: ಆಸ್ಪತ್ರೆ ಉನ್ನತೀಕರಣದಿಂದ ಕಾಂಗ್ರೆಸ್ ಭವನ ವಿಸ್ತರಣೆವರೆಗೆ!
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತ ಡಾ. ಗೋಪಾಲಕೃಷ್ಣ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಭಾರತಿ, ಎಚ್‌ಎಎಲ್ ಹೆಲಿಕಾಪ್ಟರ್ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ತಳವಾರ್, ಶ್ರೀ ದೇವರಾಜ್ ಸೇರಿದಂತೆ ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.ಇದನ್ನೂ ಓದಿ: ಚುನಾವಣಾ ರಾಜ್ಯಗಳಿಗೆ BJP ಉಸ್ತುವಾರಿ ನೇಮಕ: ಪಶ್ಚಿಮ ಬಂಗಾಳ, ಬಿಹಾರ ಹಾಗು ತಮಿಳುನಾಡು ರಾಜ್ಯ: ಮಾಹಿತಿ ಹೀಗಿದೆ
ಈ ಚರ್ಚೆಯು ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ತುರ್ತು ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಏರ್ ಆಂಬುಲೆನ್ಸ್‌ನ ಮೂಲಕ ತ್ವರಿತ ಸಾಗಾಟದ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಯಿತು. ಈ ಯೋಜನೆಯು ಕಾರ್ಮಿಕರಿಗೆ ಸಕಾಲಿಕ ವೈದ್ಯಕೀಯ ನೆರವು ಒದಗಿಸುವ ಮೂಲಕ ಅವರ ಕಲ್ಯಾಣಕ್ಕೆ ಕೊಡುಗೆ ನೀಡಲಿದೆ ಎಂದು ಸಚಿವರು ತಿಳಿಸಿದರು.Yashika Women's Trendy Banarasi Kanjivaram Navy Color Art Silk Saree with Blouse Material