Skip to main content
ವಿಡಿಯೋ
1/2
metro

ಬೆಂಗಳೂರು: ಕ್ರೈಮ್ ಕಂಟ್ರೋಲ್‌ಗೆ ಖಾಕಿ ಹೊಸ ಕ್ರಮ...ನಾಕಾಬಂದಿ, ಗಸ್ತು, ಏರಿಯಾ ಡೋಮಿನೇಷನ್‌ಗೆ ಚಿಂತನೆ!

By Gireesh Vasishta
ಬೆಂಗಳೂರು: ಕ್ರೈಮ್ ಕಂಟ್ರೋಲ್‌ಗೆ ಖಾಕಿ ಹೊಸ ಕ್ರಮ...ನಾಕಾಬಂದಿ, ಗಸ್ತು, ಏರಿಯಾ ಡೋಮಿನೇಷನ್‌ಗೆ ಚಿಂತನೆ!

ಬೆಂಗಳೂರು ನಗರದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೊಸ ಕಾರ್ಯಯೋಜನೆ ಜಾರಿಗೆ ತಂದಿದ್ದಾರೆ. ನಿರ್ದಿಷ್ಟ ದಿನಗಳಲ್ಲಿ ನಾಕಾಬಂದಿ, ಗಸ್ತು ಮತ್ತು ಏರಿಯಾ ಡೊಮಿನೇಷನ್ ಕಾರ್ಯಾಚರಣೆಗಳು ನಡೆಸಲ್ಪಡುವಂತಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅಪರಾಧಗಳನ್ನು ಮಟ್ಟಹಾಕಲು ಮತ್ತು ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಹೆಚ್ಚುವರಿ ಕಾರ್ಯಗಳನ್ನು ವಹಿಸಲಾಗಿದೆ.

 

ಅಪರಾಧ ನಿಯಂತ್ರಣಕ್ಕಾಗಿ ನಾಕಾಬಂದಿ, ಗಸ್ತು ಮತ್ತು ಏರಿಯಾ ಡೊಮಿನೇಷನ್ ಕಾರ್ಯಾಚರಣೆಗಳನ್ನು ಕೈಗೊಳ್ಳುವಂತೆ ಕಮಿಷನರ್ ಸೂಚಿಸಿದ್ದಾರೆ. ರಾತ್ರಿ ಪಾಳಿಯ ಗಸ್ತಿನ ಜೊತೆಗೆ ಹೆಚ್ಚುವರಿ ಗಸ್ತು ನಡೆಸುವಂತೆ ಆದೇಶಿಸಲಾಗಿದೆ. ಇದು ಅಪರಾಧ ಚಟುವಟಿಕೆಗಳನ್ನು ತಡೆಯಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

 

ಪ್ರತಿ ಮಂಗಳವಾರ ಮತ್ತು ಗುರುವಾರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ನಿರ್ದಿಷ್ಟ ಪ್ರದೇಶದಲ್ಲಿ "ಏರಿಯಾ ಡೊಮಿನೇಷನ್" ಕಾರ್ಯಾಚರಣೆ ನಡೆಸಬೇಕು. ಇದರೊಂದಿಗೆ, ಪ್ರತಿದಿನ ಎರಡು ನಾಕಾಬಂದಿಗಳನ್ನು ನಡೆಸಿ ರಾತ್ರಿ 9 ರಿಂದ 11 ಗಂಟೆಯೊಳಗೆ ತಪಾಸಣೆ ಮಾಡುವಂತೆ ಸೂಚಿಸಲಾಗಿದೆ.ಇದನ್ನು ಓದಿ: ಸಚಿವ ವಿ. ಸೋಮಣ್ಣರಿಂದ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಭೇಟಿ; ತುಮಕೂರು ಕಾಮಗಾರಿಗಳ ಬಗ್ಗೆ ಚರ್ಚೆ

 

ಅದೇ ರೀತಿ, ಪ್ರತಿ ಶುಕ್ರವಾರ ಮತ್ತು ಶನಿವಾರ ಕಾಲ್ನಡಿಗೆ ಗಸ್ತು (ಫೂಟ್ ಪೆಟ್ರೋಲಿಂಗ್) ನಡೆಸುವಂತೆ ಕಮಿಷನರ್ ಆದೇಶಿಸಿದ್ದಾರೆ. ವಿಶೇಷವಾಗಿ ಅತಿ ಸೂಕ್ಷ್ಮ ಪ್ರದೇಶಗಳು ಮತ್ತು ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ರಾತ್ರಿ 9 ರಿಂದ 12 ಗಂಟೆಯವರೆಗೆ ಕಾಲ್ನಡಿಗೆ ಗಸ್ತು ನಡೆಸಲು ಸೂಚನೆ ನೀಡಲಾಗಿದೆ.WEET Cotton T-Shirt and Pyjama Set for Men,Night Wear for Men,Men's Pyjama Set 122

 

ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳು, ಎಸಿಪಿಗಳು ಮತ್ತು ಡಿಸಿಪಿಗಳು ಖುದ್ದಾಗಿ ಭಾಗವಹಿಸಬೇಕು. ತಪಾಸಣೆ ನಡೆಸುವಾಗ ಮಹಿಳೆಯರು ಮತ್ತು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಯಂತ್ರಣ ಕೊಠಡಿಗೆ ನಿಯಮಿತವಾಗಿ ಮಾಹಿತಿ ನೀಡುವಂತೆ ಕಮಿಷನರ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.