Skip to main content
ವಿಡಿಯೋ
1/3
entertainment

ಬರೋಬ್ಬರಿ 2 ಕೋಟಿ ಕೇಸ್ ಹಾಕಿಸಿಕೊಂಡ ಬಿಗ್‌ಬಾಸ್...ಮಾಡಿದ ತಪ್ಪಾದ್ರೂ ಏನು ಗೊತ್ತಾ?

By Ram Chethan
 ಬರೋಬ್ಬರಿ 2 ಕೋಟಿ ಕೇಸ್ ಹಾಕಿಸಿಕೊಂಡ ಬಿಗ್‌ಬಾಸ್...ಮಾಡಿದ ತಪ್ಪಾದ್ರೂ ಏನು ಗೊತ್ತಾ?

‘ಹಿಂದಿ ಬಿಗ್ ಬಾಸ್’ 19ನೇ ಸೀಸನ್‌ನಲ್ಲಿ ಅನುಮತಿಯಿಲ್ಲದೆ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಬಳಸಿ ಕಾನೂನು ಸವಾಲು ಎದುರಿಸಿದೆ. PPL ಸಂಸ್ಥೆ ನಿರ್ಮಾಪಕರ ವಿರುದ್ಧ 2 ಕೋಟಿ ರೂ. ಪರಿಹಾರ ಕೋರಿ ಕೇಸ್ ದಾಖಲಿಸಿದ್ದು, ಮುಂದಿನ ದಿನಗಳಲ್ಲಿ ವಿವಾದ ಹೇಗೆ ತೀರ್ಮಾನವಾಗುತ್ತದೆ ಎಂಬುದು ಕುತೂಹಲವಾಗಿದೆ.

‘ಬಿಗ್ ಬಾಸ್’ ಕಾರ್ಯಕ್ರಮವು ದೇಶದ ಜನಪ್ರಿಯ ಹಾಗೂ ವಿವಾದಾತ್ಮಕ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಕಾನೂನು ಸವಾಲುಗಳು ಮತ್ತು ಪೊಲೀಸ್ ಪ್ರಕರಣಗಳು ಈ ಕಾರ್ಯಕ್ರಮಕ್ಕೆ ಹೊಸತಲ್ಲ. ಪ್ರತಿ ವರ್ಷವೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತಿದ್ದು, ಈ ವರ್ಷವೂ ಅದು ಮುಂದುವರಿದಿದೆ.

ಸದ್ಯ ‘ಹಿಂದಿ ಬಿಗ್ ಬಾಸ್’ 19ನೇ ಸೀಸನ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಮ್ಯೂಸಿಕ್ ಕಂಪನಿಯೊಂದು ಈ ಶೋ ವಿರುದ್ಧ 2 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ಕೇಸ್ ದಾಖಲಿಸಿದೆ ಎಂದು ವರದಿಯಾಗಿದೆ.

ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ (PPL) ಸಂಸ್ಥೆಯು ಬಿಗ್ ಬಾಸ್ ನಿರ್ಮಾಪಕರಾದ ಎಂಡಮೋಲ್ ಶೈನ್ ಇಂಡಿಯಾ ಹಾಗೂ ಬನಿಜಾಯ್ ವಿರುದ್ಧ ನೋಟಿಸ್ ಜಾರಿ ಮಾಡಿದೆ. ‘ಅಗ್ನೀಪತ್’ ಸಿನಿಮಾದ ‘ಚಿಕ್ನಿ ಚಮೇಲಿ’ ಮತ್ತು ‘ಗೋರಿ ತೇರಿ ಪ್ಯಾರ್ ಮೇ’ ಸಿನಿಮಾದ ‘ಧಾತ್ ತೇರಿ ಕಿ ಮೇ’ ಹಾಡುಗಳನ್ನು 11ನೇ ಎಪಿಸೋಡ್‌ನಲ್ಲಿ ತಮ್ಮ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು PPL ಆರೋಪಿಸಿದೆ.Puma Unisex-Adult Turino Ii Og Sneaker

ಸೋನಿ ಮ್ಯೂಸಿಕ್ ಇಂಡಿಯಾ ಈ ಹಾಡುಗಳ ಹಕ್ಕುಗಳನ್ನು ಹೊಂದಿದ್ದು, ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಈ ಹಕ್ಕುಗಳನ್ನು ನಿರ್ವಹಿಸುತ್ತದೆ. ತಮ್ಮ ಅನುಮತಿಯಿಲ್ಲದೆ ಹಾಡುಗಳನ್ನು ಬಳಸಿರುವುದು ಉದ್ದೇಶಪೂರ್ವಕ ನಿಯಮ ಉಲ್ಲಂಘನೆಯಾಗಿದೆ ಎಂದು PPL ಹೇಳಿದೆ. ಈ ಬಗ್ಗೆ ಆರ್ಥಿಕ ಹಾನಿ ಮತ್ತು ಪರವಾನಗಿ ಶುಲ್ಕವನ್ನು ಭರಿಸುವಂತೆ ಒತ್ತಾಯಿಸಿದೆ. ಮುಂದಿನ ದಿನಗಳಲ್ಲಿ ಈ ವಿವಾದಕ್ಕೆ ರಾಜಿ ಮಾರ್ಗ ಸಿಗುತ್ತದೆಯೇ ಎಂದು ಕಾದು ನೋಡಬೇಕು.ವಿವಾದದ ನಡುವೆಯೂ 'OG' ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಅಬ್ಬಾ...ಪವನ್ ಕಲ್ಯಾಣ್ ದಿಲ್ ಖುಷ್!

ಕೆಲವು ವರದಿಗಳ ಪ್ರಕಾರ, ಈ ಘಟನೆಗೂ ಎಂಡಮೋಲ್ ಸಂಸ್ಥೆಗೂ ನೇರ ಸಂಬಂಧವಿಲ್ಲ ಎನ್ನಲಾಗಿದೆ. ಯಾವ ಹಾಡುಗಳನ್ನು ಪ್ಲೇ ಮಾಡಬೇಕು ಎಂಬುದನ್ನು ಜಿಯೋ ಹಾಟ್‌ಸ್ಟಾರ್‌ನ ಪ್ರೋಮೋ ತಂಡ ನಿರ್ಧರಿಸುತ್ತದೆ. ಹೀಗಾಗಿ, ಈ ನೋಟಿಸ್‌ಗೆ ಜಿಯೋ ಹಾಟ್‌ಸ್ಟಾರ್ ಉತ್ತರಿಸುತ್ತದೆಯೇ ಎಂಬ ಪ್ರಶ್ನೆ ಸಹ ಎದ್ದಿದೆ.

ಇದೇ ಸಮಯದಲ್ಲಿ, ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಕಾರ್ಯಕ್ರಮದ ಬಗ್ಗೆ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯಾವ ರೀತಿಯ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.