Skip to main content
ವಿಡಿಯೋ
1/3
politics

ದಾವಣಗೆರೆ ಗಲಾಟೆ: 'ಐ ಲವ್ ಮೊಹಮ್ಮದ್' ಫ್ಲೆಕ್ಸ್ ವಿರುದ್ಧ ಕಲ್ಲು ತೂರಾಟ...ಐ ಲವ್ ಮಹಾದೇವ್ ಪ್ರತಿಭಟನೆಗೂ ಬಲವರ್ಧನೆ!

By Gireesh Vasishta
ದಾವಣಗೆರೆ ಗಲಾಟೆ: 'ಐ ಲವ್ ಮೊಹಮ್ಮದ್' ಫ್ಲೆಕ್ಸ್ ವಿರುದ್ಧ ಕಲ್ಲು ತೂರಾಟ...ಐ ಲವ್ ಮಹಾದೇವ್ ಪ್ರತಿಭಟನೆಗೂ ಬಲವರ್ಧನೆ!

ದಾವಣಗೆರೆಯಲ್ಲಿ ಐ ಲವ್ ಮೊಹಮ್ಮದ್ ಫ್ಲೆಕ್ಸ್ ಬಳಿಕ ನಡೆದ ಗಲಾಟೆ ಮತ್ತು ಕಲ್ಲೆಸೆದ ಘಟನೆಗಳು ಸಾಂಪ್ರದಾಯಿಕ ಸಂಘರ್ಷಕ್ಕೆ ಕಾರಣವಾಗಿದೆ

ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ನಡೆದ ಹಿಂಸಾತ್ಮಕ ಘಟನೆಗಳು ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಕಲ್ಲು ತೂರಾಟ ಮತ್ತು ಗಲಾಟೆಗೆ ಕಾರಣವಾಗಿವೆ. ಐ ಲವ್ ಮೊಹಮ್ಮದ್ ಎಂಬ ಬರಹವಿದ್ದ ಫ್ಲೆಕ್ಸ್ ವಿಚಾರವಾಗಿ ಈ ಘರ್ಷಣೆ ಆರಂಭವಾಗಿದೆ.

 

ಸಾಮಾಜಿಕ ಮಾಧ್ಯಮಗಳಲ್ಲಿ ಫ್ಲೆಕ್ಸ್ ಹರಿದು ಹಾಕಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ ನಂತರ ನೂರಾರು ಜನ ಗುಂಪುಗೂಡಿದರು. ಇದೇ ವೇಳೆ, ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಗಲಾಟೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ ಮತ್ತು ಹಲವು ವಾಹನಗಳು ಜಖಂಗೊಂಡಿವೆ. ಸದ್ಯ, ಎರಡು ಕೋಮಿನ 107 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

 


ಐ ಲವ್ ಮೊಹಮ್ಮದ್ ಫ್ಲೆಕ್ಸ್ ಹಿನ್ನೆಲೆ ಕುರಿತು ಈಗ ಚರ್ಚೆ ನಡೆಯುತ್ತಿದೆ. ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಬ್ಯಾನರ್‌ಗಳನ್ನು ಹಿಡಿದು ರ್ಯಾಲಿಗಳನ್ನು ನಡೆಸಲಾಗಿದೆ. ಈ ಅಭಿಯಾನವು ಉತ್ತರ ಪ್ರದೇಶದ ಕಾನ್ಪುರದಲ್ಲಿ ಆರಂಭಗೊಂಡಿತು.

 

ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆಯಲ್ಲಿ ಐ ಲವ್ ಮೊಹಮ್ಮದ್ ಎಂಬ ಬರಹವಿದ್ದ ನಾಮಫಲಕಗಳನ್ನು ಬಳಸಲಾಗಿತ್ತು. ಆದರೆ, ಹಿಂದೂ ಸಮಾಜದ ಕೆಲವರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಯಿತು. ಮುಸ್ಲಿಂ ಯುವಕರು ಹಿಂದೂ ಧಾರ್ಮಿಕ ಪೋಸ್ಟರ್ ಹರಿದಿದ್ದಾರೆಂದು ಆರೋಪಿಸಲಾಯಿತು.ಇದನ್ನು ಓದಿ: ಏಷ್ಯಾ ಕಪ್ 2025: ಪಾಕಿಸ್ತಾನ vs ಬಾಂಗ್ಲಾದೇಶ ಪಂದ್ಯದ ಮಾಹಿತಿ ಹೀಗಿದೆ: ಕೊನೆಗೂ ಫೈನಲ್‌ಗೆ ಬಂದ ಪಾಕಿಸ್ತಾನ

 

ಗಲಾಟೆ ಆರಂಭವಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ನಾಮಫಲಕಗಳನ್ನು ತೆಗೆಸಿ, ಸಾಮರಸ್ಯ ಕದಡಿದ ಆರೋಪದ ಮೇಲೆ 24 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಪೊಲೀಸರ ಈ ಕ್ರಮಕ್ಕೆ ಕಾನ್ಪುರ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿ, ಶಾಂತಿಯುತವಾಗಿ "ಐ ಲವ್ ಮೊಹಮ್ಮದ್" ಪೋಸ್ಟರ್ ಪ್ರದರ್ಶಿಸಲು ಕರೆ ನೀಡಿದರು.WEET Cotton T-Shirt and Pyjama Set for Men,Night Wear for Men,Men's Pyjama Set 122

 


ಉತ್ತರ ಪ್ರದೇಶದ ಘಟನೆಯ ನಂತರ, "ಐ ಲವ್ ಮೊಹಮ್ಮದ್" ಘೋಷವಾಕ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ ಮತ್ತು ವೋಮಿನ್‌ಪುರದಲ್ಲೂ "ಐ ಲವ್ ಮೊಹಮ್ಮದ್" ಹೆಸರಿನಲ್ಲಿ ರ್ಯಾಲಿಗಳು ನಡೆದವು. ಹೀಗಾಗಿ ಹಿಂದೂಗಳು ಐ ಲವ್‌ ಮಹದೇವ ಎಂಬ ಪೋಸ್ಟ್‌ರ್‌ ಹಿಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಆದರೆ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಅವಕಾಶ ನೀಡಿಲ್ಲ ಎನ್ನಲಾಗಿದೆ.