ಬೆಂಗಳೂರು: ಶಿಕ್ಷಕರ ಕೆಲವು ತಪ್ಪು ಕಲ್ಪನೆಗಳಿಂದ ಸಮೀಕ್ಷೆಗೆ ಸಮಸ್ಯೆ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಕೊಟ್ಟಿದ್ದಾರೆ. ಎಲ್ಲರೂ ಕೂಡ ಒಪ್ಪಿಕೊಂಡು ಸಮೀಕ್ಷೆ ಕೆಲಸ ಶುರು ಮಾಡಿ ಅಂತ ಸಲಹೆಯನ್ನೂ ಸಹ ನೀಡಿದ್ದಾರೆ. ಹಾಗೇ ಅಕ್ಟೋಬರ್ 7 ರವೆಗೆ ಸಮೀಕ್ಷೆಯನ್ನು ಮುಗಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ನಾಲ್ಕು ದಿನದಿಂದ ಜಾತಿ ಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ.ಇದನ್ನೂ ಓದಿ: ಬೆಂಗಳೂರು ಜಿಬಿಎ ಕಾರ್ಪೊರೇಷನ್‌ಗಳ ಚುನಾವಣೆಗೆ ತಯಾರಿ..!
ಇನ್ನುಳಿದ ದಿನಗಳಲ್ಲಿ ಸಮೀಕ್ಷೆ ಕಾರ್ಯ ಕವರ್ ಆಗಬೇಕು ಅಂತ ಹೇಳಿದ್ದಾರೆ. ಪ್ರತಿ ದಿನ ಶೇಕಡಾ 10% ನಷ್ಟು ಜಾತಿ ಗಣತಿ ಸಮೀಕ್ಷೆ ಆಗಬೇಕು. ಸಾಕಷ್ಟು ಗೊಂದಲದ ನಡುವೆಯೂ ಜಾತಿ ಗಣತಿ ಬೇಕೂ ಬೇಡ ಅನ್ನುವಂತಹ ಚರ್ಚೆಗಳ ನಡುವೆಯೂ ಸಹ ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆ ಬೇಡ ಅಂತ ಕೋರ್ಟ್ ಮೆಟ್ಟಿಲನ್ನು ಸಹ ಹತ್ತಿ ಆಯಿತು. ನೆಟ್‌ವರ್ಕ್ ಸಮಸ್ಯೆ,ಸರ್ವರ್ ಸಮಸ್ಯೆ, ಜಾತಿಗಣತಿ ಮಾಡುವ ಅಪ್ಲಿಕೇಶನ್ ಸಮಸ್ಯೆಯಾಯಿತು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ - ಜಾತಿ ಸಮೀಕ್ಷೆ ಚುರುಕುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಈಗ ಅದೆಲ್ಲದರ ನಡುವೆ ಅಕ್ಟೋಬರ್ 7ಕ್ಕೆ ಜಾತಿ ಗಣತಿಯನ್ನು ಮುಗಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಬಲಿ ಗ್ರೌಂಡ್ ರಿಪೋರ್ಟ್ ಅನ್ನು ಸಹ ಪಡೆದರು. ಡಿಸಿ ಸಿಇಒಗಳಿಗೆ ಖಡಕ್ ಸೂಚನೆಯನ್ನು ಸಹ ನೀಡಿದರು. ನಂತರ ಸಮೀಕ್ಷೆಯಲ್ಲಿನ ಸಮಸ್ಯೆಗಳನ್ನು ಈ ತಕ್ಷಣವೇ ಪರಿಹರಿಸಬೇಕು ಎಂದು ಸೂಚನೆ ನೀಡಿದರು..C J Enterprise Women's Pure Soft Kanjivaram Silk Saree Banarasi Design Style With Blouse Piece for Wedding (Pari9016-51)