ಜಗತ್ತಿನ ದೈತ್ಯ ಸ್ಟ್ರಾಟೆಜಿ ಮತ್ತು ಕನ್ಸಲ್ಟಿಂಗ್ ಕಂಪನಿಯಾದ ಆಕ್ಸೆಂಚರ್ ಕಂಪನಿಯು ತನ್ನ ಉದ್ಯೋಗಿಗಳನ್ನು ಸತತವಾಗಿ ಕೆಲಸವಾಗಿ ವಜಾಗೊಳಿಸಿದೆ. ಕಳೆದ ಮೂರು ತಿಂಗಳಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗಸ್ಥರನ್ನು ಹೊರಹಾಕಿದ್ದಲ್ಲದೇ, ಇನ್ನೂ ಹಲವರನ್ನು ಕೆಲಸದಿಂದ ತೆರವುಗೊಳಿಸುವುದಾಗಿ ಕಂಪನಿ ಸಿಇಓ ಜೂಲಿ ಸ್ವೀಟಿ ಅವರು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಕಳೆದ ಏಪ್ರಿಲ್‌ನಲ್ಲಿ ಉದ್ಯೋಗಿಗಳ ಸಂಖ್ಯೆ 7,91,000 ಇದ್ದದ್ದು, ಈ ಆಗಸ್ಟ್ ಅಂತ್ಯದ ವೇಳೆಗೆ 7,79,000 ಕ್ಕೆ ಇಳಿಕೆಯಾಗಿದೆ. ಪ್ರಪಂಚದಾದ್ಯಂತದ ವ್ಯವಹಾರಗಳು AI ಜೊತೆಗೆ ಬೆಸೆದುಕೊಂಡಿದ್ದು, ಗ್ರಾಹಕ ಕಂಪನಿಗಳ ನಿರೀಕ್ಷೆಯನ್ನು ತ್ವರಿತವಾಗಿ ಪೂರೈಸಲು ಉದ್ಯೋಗಿಗಳು ‘ಎಐ’ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವೆಂದು ಜೂಲಿ ಸ್ವೀಟಿ ಹೇಳಿದ್ದಾರೆ. ಇದಕ್ಕಾಗಿ ಆಕ್ಸೆಂಚರ್ ತನ್ನ ಉದ್ಯೋಗಿಗಳಿಗೆ ಎಐ ತರಬೇತಿ ನೀಡಲು ಪ್ರಾರಂಭಿಸಿದೆ. UGC NET Paper 1 English Notes Exam Preparation Study Material, Set of 3 Books, ToppersNotes Latest Edition Paperback – 30 December 2022
ಈ ಹಿಂದಿರುವ ಕಾರಣವನ್ನು ಸ್ಪಷ್ಟಪಡಿಸಿರುವ ಅವರು, ಎಐ ಅಳಡಿಕೆ ಹಾಗೂ ಕಾರ್ಪೋರೇಟ್ ಬೇಡಿಕೆಗಳ ಪೂರೈಕೆ ವಿಳಂಬದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದಲ್ಲದೇ ಕಂಪನಿ ತನ್ನ 85.6 ಕೋಟಿಗೂ ಅಧಿಕ ವೆಚ್ಚದ ಮರುಸುಧಾರಣೆಗಾಗಿ ಈ ರೀತಿ ಕೆಲಸದಿಂದ ವಿಮುಕ್ತಿಗೊಳಿಸಿದೆ ಹಾಗೂ ಇನ್ನೂ ಮುಂದಿನ ತಿಂಗಳುಗಳಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊರದೂಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಮಗೆ ಅಗತ್ಯವಿರುವ ಕೌಶಲ್ಯಗಳನ್ನು ಮರುಹೊಂದಿಸಿಕೊಳ್ಳುವ ಹಾಗೂ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವಂತೆ ಉದ್ಯೋಗಿಗಳಿಗೆ ಸೂಚಿಸಲಾಗಿದೆ. ಇದರಲ್ಲಿ ಹಿಂದುಳಿದವರನ್ನು ಹೊರಹಾಕಲಾಗುತ್ತಿದೆ. ಎಐ ಸುಧಾರಿತ ಸಲಹೆಗಳಿಗಾಗಿ ಗ್ರಾಹಕ ಕಂಪನಿಗಳು ಬೇಡಿಕೆಯಿಟ್ಟಿವೆ. ಅದಕ್ಕನ್ವಯವಾಗುವಂತೆ ನಾವು ಅಪ್‌ಡೇಟ್ ಮಾಡುವುದು ಅವಶ್ಯಕ. ಈ ಬಗ್ಗೆ ತ್ವರಿತವಾಗಿ ಕಾರ್ಯೋನ್ಮುಖರಾಗದವರನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಜೂಲಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಚೆನ್ನೈ-ಝಲಾವರ್ ಜಂಟಿ ಕಾರ್ಯಾಚರಣೆ: 136 ನಕಲಿ ಸಿಮ್ ಕಾರ್ಡ್‌ಗಳೊಂದಿಗೆ ರಾಜಸ್ಥಾನದ ಆರೋಪಿ ಬಂಧನ..!