ಹಾಪುರ (ಉತ್ತರ ಪ್ರದೇಶ): ಮಾದಕ ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿ 29 ಸ್ಟೀಲ್ ಚಮಚಗಳು ಹಾಗೂ 19 ಹಲ್ಲುಜ್ಜುವ ಬ್ರಷ್ಗಳನ್ನು ನುಂಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.TRASE Block Heels Sandals For Women, Dusky Stylish & Comfortable Footwear
ಹಾಪುರದ ಗರ್ಹ್ ರಸ್ತೆಯಲ್ಲಿರುವ ದೇವನಂದಿನಿ ಆಸ್ಪತ್ರೆಯ ವೈದ್ಯ Dr.ಶ್ಯಾಮ್ ಕುಮಾರ್ ಮಾತನಾಡಿ, ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬುಲಂದ್ಶಹರ್ ನಿವಾಸಿ ಸಚಿನ್ (40 ವರ್ಷ) ಎಂಬಾತನನ್ನು ಒಂದು ವಾರದ ಹಿಂದೆ ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ಆತ ಮಾದಕ ವ್ಯಸನಿಯಾಗಿದ್ದ, ಕುಟುಂಬಸ್ಥರು ಗಾಜಿಯಾಬಾದ್ನಲ್ಲಿರುವ ಮಾದಕ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಿದ್ದರು. ಇದರಿಂದ ಕೋಪಗೊಂಡು, ಅಲ್ಲಿದ್ದ ಸ್ಟೀಲ್ ಚಮಚಗಳು ಮತ್ತು ಹಲ್ಲುಜ್ಜುವ ಬ್ರಷ್ಗಳನ್ನು ಮುರಿದು ತಿನ್ನಲು ಪ್ರಾರಂಭಿಸಿದ್ದ. ಇದರಿಂದ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಎಂದು ತಿಳಿಸಿದರು.ಇದನ್ನು ಓದಿ: ನಾಪತ್ತೆ ಪ್ರಕರಣದ ತನಿಖೆಗೆ ಆಧಾರ್ ಕಾರ್ಡ್ ಬಳಕೆಗೆ ವಿವರ ಒದಗಿಸಲು UIDAI ಗೆ ಹೈಕೋರ್ಟ್ ನಿರ್ದೇಶನ
ಹೊಟ್ಟೆಯಲ್ಲಿ 29 ಚಮಚಗಳು, 19 ಬ್ರಷ್ಗಳನ್ನು ಪತ್ತೆ ಹಚ್ಚಿದ ವೈದ್ಯರು:
ಅಲ್ಟ್ರಾಸೌಂಡ್ ಹಾಗೂ ಎಕ್ಸ್-ರೇ ಮಾಡಿದಾಗ ಸಚಿನ್ ಹೊಟ್ಟೆಯಲ್ಲಿ ಲೋಹದ ಮತ್ತು ಪ್ಲಾಸ್ಟಿಕ್ ವಸ್ತುಗಳು ಇರುವುದು ಕಂಡುಬಂದಿತು. ಎಂಡೋಸ್ಕೋಪಿಯಿಂದ ಅವುಗಳನ್ನು ತೆಗೆದುಹಾಕಬಹುದು ಎಂದು ನಾವು ಭಾವಿಸಿದ್ದೆವು. ಆದ್ದರಿಂದ ಆತನನ್ನು ಮೀರತ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಎಂಡೋಸ್ಕೋಪಿ ಮೂಲಕ ಚಮಚ ಮತ್ತು ಹಲ್ಲುಜ್ಜುವ ಬ್ರಷ್ಗಳನ್ನು ಹೊರತೆಗೆಯಲು ಸಾಧ್ಯವಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದರು. ನಂತರ ಸಚಿನ್ ನಮ್ಮ ಆಸ್ಪತ್ರೆಗೆ ಮತ್ತೆ ಬಂದಾಗ ಕಳೆದ ವಾರ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೊಟ್ಟೆಯಲ್ಲಿ 29 ಸ್ಟೀಲ್ ಚಮಚಗಳು ಮತ್ತು 19 ಹಲ್ಲುಜ್ಜುವ ಬ್ರಷ್ಗಳು ಇದ್ದವು. ಇವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು ಎಂದು ಮಾಹಿತಿ ನೀಡಿದರು.