ತಮಿಳುನಾಡು: ತಮಿಳುನಾಡಿನ ಕರೂರ್‌ನಲ್ಲಿ ಸೆಪ್ಟೆಂಬರ್ 27, 2025 ರಂದು ನಟ-ರಾಜಕಾರಣಿ ಜೋಸೆಫ್ ವಿಜಯ್ ಚಂದ್ರಶೇಖರ್ (ವಿಜಯ್) ಅವರ ತಮಿಳಗ ವೆಟ್ರಿ ಕಝಗಂ (ಟಿವಿಕೆ) ಪಕ್ಷದ ರ್ಯಾಲಿಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಕನಿಷ್ಠ 31 ಮಂದಿ ಮರಣಹೊಂದಿದ್ದಾರೆ. 58ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ 16 ಮಹಿಳೆಯರು ಮತ್ತು 6 ಮಕ್ಕಳು ಸೇರಿದ್ದಾರೆ. ಈ ಅವಘಡವು ದಕ್ಷಿಣ ಭಾರತದ ರಾಜಕೀಯದಲ್ಲಿ ದೊಡ್ಡ ಆಘಾತವನ್ನು ಉಂಟುಮಾಡಿದೆ.TRASE Block Heels Sandals For Women, Dusky Stylish & Comfortable Footwear
ಅವಘಡದ ವಿವರಗಳು:
-ಸ್ಥಳ ಮತ್ತು ಸಂದರ್ಭ: ಕರೂರ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಸುಮಾರು 30,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವಿಜಯ್ ಅವರು ತೆರೆದ ಬಸ್‌ನ ಮೇಲೆ ನಿಂತು ಮಾತನಾಡುತ್ತಿದ್ದಾಗ ಅವರನ್ನು ನೋಡಲು ಜನರು ಮುಂದೆ ಓಡಿದ್ದಾರೆ, ಈ ಸಮಯದಲ್ಲಿ ಕಾಲ್ತುಳಿತ ಉಂಟಾಗಿದೆ.
- ಮರಣ ಸಂಖ್ಯೆ: ಆರಂಭದಲ್ಲಿ 10-20 ಜನ ಎಂದು ತಿಳಿಸಲ್ಪಟ್ಟರೂ, ಈಗ 31-39ಕ್ಕೆ ಆಗಿ ಏರಿಕೆಯಾಗಿದೆ, ಆದರೆ ಇನ್ನು ಅಂತಿಮವಾಗಿಲ್ಲ. 8 ಮಕ್ಕಳು ಮತ್ತು 16 ಮಹಿಳೆಯರು ಸೇರಿದ್ದಾರೆ. ಮತ್ತು ಹಲವರು ಕಣ್ಮರೆಯಾಗಿದ್ದಾರೆ.
-ಗಾಯಾಳುಗಳು: 50ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತ್ರಿಚಿ ಮತ್ತು ಸೇಲಂನಿಂದ 44 ಡಾಕ್ಟರ್‌ಗಳನ್ನು ಕರೂರ್‌ಗೆ ಕಳುಹಿಸಲಾಗಿದೆ.ಇದನ್ನು ಓದಿ: ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಶಿಕ್ಷಣ ಸಾಲಗಳು: ಸಾಲ ಪಡೆಯಿರಿ: ಓದಿ, ಗುರಿ ಮುಟ್ಟಿರಿ: ಮಾಹಿತಿ ನಮ್ಮದು, ಉಪಯೋಗ ನಿಮ್ಮದು
-ಓರ್ವ ಬಾಲಕಿ ಕಾಣೆಯಾಗಿದ್ದು, ಕೆಲ ಮಕ್ಕಳು ಮುರ್ಛೆ ಹೋಗಿರುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಂಬ್ಯುಲೆನ್ಸ್ ಗೆ ಜಾಗ ಮಾಡಿಕೊಡುವಂತೆ ವಿಜಯ್ ಪೊಲೀಸರಲ್ಲಿ ಮನವಿ ಮಾಡಿದ್ದರು.
-ಈ ನಡುವೆ ಭಯದಿಂದ ಐವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದುಬಂದಿದೆ.
ಈ ಅವಘಡಕ್ಕೆ ಕೆಲವು ಕಾರಣಗಳು:
-10 ಸಾವಿರ ಮಂದಿಗೆ ಅನುಮತಿ ಕೇಳಿದ್ದ ಟಿವಿಎಸ್ ಪಕ್ಷ. ಆದ್ರೆ 50 ಸಾವಿರ ಜನ ಸೇರಿದ್ರು. ಡಿಎಂಕೆ ಯಿಂದ ತೀವ್ರ ವಾಗ್ದಾಳಿ.
-ಬೆಳಗ್ಗೆಯಿಂದ ಜನರನ್ನು ಕಾಯಿಸಿ, ರಾತ್ರಿಗೆ ಬಂದಿದ್ದಾರೆ ಎಂದು ಡಿಎಂಕೆ ಆರೋಪ.
ಈ ಘಟನೆಗೆ ಪ್ರಧಾನಿ ಮೋದಿಯವರು ಕೂಡ ಸಂತಾಪ ಸೂಚಿಸಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ನಡೆದ ದುರದೃಷ್ಟಕರ ಘಟನೆ ತೀವ್ರ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳು ಇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಎಂದು x ನ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಮತ್ತು ರಾಜಕೀಯ ಪ್ರತಿಕ್ರಿಯೆ:
ಮುಖ್ಯಮಂತ್ರಿ ಎಂಕೆ. ಸ್ಟಾಲಿನ್: ಅವರು ಕರೂರ್ಗೆ ಭೇಟಿ ನೀಡಿ ತ್ತು ಮರಣಹೊಂದಿದವರ ಕುಟುಂಬಗಳನ್ನು ಭೇಟಿಯಾಗಿ, ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಶನ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗಿದೆ.
ವಿಜಯ್ ಅವರ ಪ್ರತಿಕ್ರಿಯೆ: "ನನ್ನ ಹೃದಯ ಬಿಕ್ಕಿಅಳುತ್ತಿದೆ, ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ" ಎಂದು ಎಕ್ಸ್ನಲ್ಲಿ ಬರೆದು, ಮರಣಹೊಂದಿದವರ ಕುಟುಂಬಗಳಿಗೆ ಸಹಾನುಭೂತಿ ತಿಳಿಸಿದ್ದಾರೆ. ಅವರು ಚೆನ್ನೈಗೆ ಮರಳಿ ಬಂದಿದ್ದಾರೆ ಎಂದು ವರದಿಯಾಗಿದೆ. ಈ ನಡುವೆ ಚನ್ನೈನ ವಿಜಯ್ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.