ಕರೂರು(ತಮಿಳುನಾಡು): ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಇಡೀ ಭಾರತವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಈ ಹಿಂದೆ ಬೆಂಗಳೂರಿನ RCB ವಿಜಯೋತ್ಸವ ಸಮಾರಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 11 ಜನ ಸಾವಿಗೀಡಾಗಿದ್ದರು. ಇಷ್ಟೆಲ್ಲಾ ಅವಾಂತರಗಳನ್ನು ನೋಡಿಯೂ ಸಹ ತಮಿಳುನಾಡು ಪೊಲೀಸರು ಬುತ್ತಿ ಕಲಿತಿಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಕಾಲ್ತುಳಿತದಲ್ಲಿ ಸುಮಾರು 39 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.Levi's Men's Slim Fit Mid Rise 511 Mid-Rise Jeans
ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ್ಯಾಲಿಯಲ್ಲಿ ಸಂಭವಿಸಿದ ಕಲ್ತುಳಿತದ ಬಗ್ಗೆ ನಟ ಮತ್ತು ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ತಮ್ಮ ಎಕ್ಸ್ ಖಾತೆಯ ಮೂಲಕ ವಿಷಾದವನ್ನು ವ್ಯಕ್ತಪಡಿಸಿದ್ದಾರೆ. “ನಾನು ತೀವ್ರ ನೋವು ಮತ್ತು ದುಃಖದಿಂದ ನರಳುತ್ತಿದ್ದೇನೆ ಎಂದು ಹೇಳಿದ್ದಾರೆ”.ಇದನ್ನು ಓದಿ: ಏಷ್ಯಾ ಕಪ್ ಫೈನಲ್ ಪಂದ್ಯ: ಭಾರತ-ಪಾಕ್ ಕ್ರಿಕೆಟ್ ಯುದ್ಧ: ಉ*ಗ್ರಸ್ತಾನದ ತಂಡಕ್ಕೆ ಇಂದು ಬ್ಯಾಟ್‌ನಿಂದ ಮತ್ತೊಮ್ಮೆ ತಕ್ಕ ಉತ್ತರ
ತಮಿಳು ನಟ ವಿಜಯ್ ಹೆಚ್ಚು ಫ್ಯಾನ್ ಬೇಸ್ ಹೊಂದಿದ ನಟರಲ್ಲೊಬ್ಬರು ಹೀಗಾಗಿ ಈ ಹಿಂದೆ ಕೆಲವು ರ್ಯಾಲಿಗಳನ್ನು ಮಾಡಿದ್ದರು, ಅಲ್ಲಿ ಯಾವುದೇ ಸಾವು-ನೋವು ವರದಿಯಾಗಿರಲಿಲ್ಲ. ಆದರೆ ಈ ರ್ಯಾಲಿಯಲ್ಲಿ ಇಷ್ಟೊಂದು ಮಟ್ಟದ ಜನಸಂಖ್ಯೆ ಸೇರಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಮತ್ತು ಈ ಹಿಂದೆ ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅಧ್ಯಕ್ಷತೆಯಲ್ಲಿ ನಡೆದ ಹಲವಾರು ರ್ಯಾಲಿಗಳಲ್ಲಿ ಈ ರೀತಿಯ ಘಟನೆ ನಡೆದಿಲ್ಲ. ಹೀಗಾಗಿ ಇಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಈಗ ಏನೇ ಸಾಂತ್ವನ ವಿಷಾದ ವ್ಯಕ್ತಪಡಿಸಿದರು ಮರಣ ಹೊಂದಿದವರು ಮತ್ತೆ ಬರುವುದಿಲ್ಲ. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದಿತ್ತು ಎಂಬುದು ಎಲ್ಲರ ಮಾತು ಈ ಕುರಿತು ಪ್ರಧಾನಿ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿಗಳಾದ ಸ್ಟ್ಯಾಲಿನ್ ಅವರು ವಿಷಾದ ವ್ಯಕ್ತಪಡಿಸಿದ್ದು ಸ್ಟಾಲಿನ್ ಅವರು ಸಾವನ್ನಪ್ಪಿದ ಜನರಿಗೆ ತಲಾ 10 ಲಕ್ಷ ಪರಿಹಾರ ವಿತರಣೆ ಘೋಷಿಸಿದ್ದಾರೆ.