Skip to main content
ವಿಡಿಯೋ
1/2
general

ಸ್ಕೈವಾಕ್ ಕುಸಿತದಿಂದ ಸಂಚಾರ ಸ್ಥಗಿತ: ಬೆಂಗಳೂರು–ತಿರುಪತಿ ಹೆದ್ದಾರಿಯಲ್ಲಿ ಪರದಾಡಿದ ಪ್ರಯಾಣಿಕರು.!

By Shravanthi R
ಸ್ಕೈವಾಕ್ ಕುಸಿತದಿಂದ ಸಂಚಾರ ಸ್ಥಗಿತ: ಬೆಂಗಳೂರು–ತಿರುಪತಿ ಹೆದ್ದಾರಿಯಲ್ಲಿ ಪರದಾಡಿದ ಪ್ರಯಾಣಿಕರು.!

ಕೋಲಾರ ಸಮೀಪ ಬೆಂಗಳೂರು–ತಿರುಪತಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ, ಕೊಂಡರಾಜನಹಳ್ಳಿ ಎಂಬಲ್ಲಿ, ಸ್ಕೈವಾಕ್‌ವೊಂದು ಜಾರ್ಖಂಡ್‌ನ ಟ್ರಕ್‌ ಗುದ್ದಿದ ಪರಿಣಾಮ ಕುಸಿದುಬಿದ್ದಿದೆ ಎನ್ನಲಾಗಿದೆ. ಭಾರೀ ಸಂಚಾರ ದಟ್ಟಣೆ ಉಂಟಾಗಿದ್ದು, ಟ್ರಕ್‌ ಮೇಲೆ ಸ್ಕೈವಾಕ್ ಬಿದ್ದಿದ್ದರಿಂದ ಅಪಾಯ ತಪ್ಪಿದರೂ, ಮೂರು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್‌ ಉಂಟಾಗಿದೆ. ತೆರವು ಕಾರ್ಯಾಚರಣೆ ನಡೆಸಿದ್ದು, ಪ್ರಯಾಣಿಕರಿಗೆ ಸಂಚಾರ ಅಡೆತಡೆ ಉಂಟಾಗಿದೆ.

ಕೋಲಾರ ಮಾರ್ಗವಾಗಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಮುಖ ಸ್ಕೈವಾಕ್‌ ಒಂದು ಕುಸಿದು ಬಿದ್ದಿರುವ ಘಟನೆ ಸಂಭವಿಸಿದೆ. ನಗರದ ಹೊರವಲಯದಲ್ಲಿರುವ ಬೆಂಗಳೂರು-ತಿರುಪತಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡುರಾತ್ರಿ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸಂಚಾರ ದಟ್ಟಣೆಗೆ ಎಡೆಮಾಡಿಕೊಟ್ಟಿದೆ. ಸದ್ಯ ಯಾವುದೇ ಹಾನಿಯುಂಟಾಗಿಲ್ಲ ಎಂದು ತಿಳಿಸಲಾಗಿದೆ.  

ಸ್ಕೈವಾಕ್‌ ತುಂಡಾಗಿರುವ ದೃಶ್ಯವನ್ನು ಕಂಡ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಕೊಂಡರಾಜನಹಳ್ಳಿ ಆಂಜನೇಯ ದೇಗುಲದ ಸಮೀಪ ಜಾರ್ಖಂಡ್ ರಾಜ್ಯದ ಟ್ರಕ್‌ವೊಂದು ಗುದ್ದಿರುವ ಪರಿಣಾಮ, ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆನಂತರ, ಸತತ ಮೂರು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಕ್ ಮೇಲೆ ಕುಸಿದ ಕಾರಣ, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ. ಅಲ್ಲಿದ್ದ ಸ್ಥಳೀಯರು ಚಾಲಕನಿಗೆ ಥಳಿಸಲು ಮುಂದಾಗಿದ್ದಾರೆ.  PW UGC-NET Computer Science PYQ 11 Years (2014-2024)|Latest December Session Paper Covered|Chapterwise and Yearwise Previous Year Solved Papers For Phd Entrance, SET, GATE, CUET UG & PG [Paperback] PW Paperback – 29 March 2025

ಟ್ರಕ್‌ ಗುದ್ದಿದ್ದರೂ ಸಹ, ಸ್ಕೈವಾಕ್‌ನ ಸ್ಥಿತಿ ಅಷ್ಟೊಂದು ದುರ್ಬಲವಾಗಿತ್ತೇ ಎಂದು ಶಂಕಿಸಲಾಗಿದೆ. ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಕೊಂಡಿರುವ ಸಲುವಾಗಿ, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಬೆಂಗಳೂರಿಗೆ ಸಂಚಾರ ನಡೆಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಸುಮಾರು 2 ಗಂಟೆಯಿಂದ ಸಂಚಾರದಟ್ಟಣೆಯಲ್ಲಿ ಸಿಲುಕಿ ಇತ್ತ ಕಡೆಗೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ವಿಶ್ವ ಹೃದಯ ದಿನ: ಬೆಂಗಳೂರಿನ ಹಾರ್ಟಾಥಾನ್‌ನಲ್ಲಿ ಫಿಟ್‌ನೆಸ್‌ಗೆ ಒತ್ತು: ತೇಜಸ್ವಿ ಸೂರ್ಯ