ಮನೆ-ಮನ ರಂಜಿಸಲು ಮತ್ತೆ ಬಂತು ಬಿಗ್ ಬಾಸ್ ಸೀಸನ್-12: ಹೊಸ ರೂಪ, ಅದೇ ಮನರಂಜನೆ: ಇಂದು ಗ್ರ್ಯಾಂಡ್ ಓಪನಿಂಗ್
ಬಿಗ್ ಬಾಸ್ GRAND OPENING | ಸೆಪ್ಟೆಂಬರ್ 28 ಸಂಜೆ 6 | ಪ್ರತಿ ರಾತ್ರಿ 9:30
ಬಿಗ್ ಬಾಸ್ ಎಂದರೆ ಕನ್ನಡಿಗರ ಮನಸ್ಸಿಗೆ ಬರುವುದು ಕಿಚ್ಚ ಸುದೀಪ್, ಕಿಚ್ಚ ಸುದೀಪ್ ಅವರು ಇಲ್ಲಿಯವರೆಗೂ ಬಿಗ್ ಬಾಸ್ ಅನ್ನು ಉತ್ತಮ ನಿರೂಪಕರಾಗಿ ಮತ್ತು ಒಂದು ರೀತಿಯ ಮೆಂಟರ್ ಆಗಿ ನಡಿಸಿ ಕೊಂಡು ಬಂದಿದ್ದಾರೆ. ಈ ಬಾರಿಯೂ ಬಿಗ್ ಬಾಸ್ ಸೀಸನ್ 12 ಅನ್ನು ನಡೆಸಿಕೊಡಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಸಮಯ ರಾತ್ರಿ 9:00 ಗಂಟೆ ಆದರೆ ಸಾಕು ಎಲ್ಲರ ಮನೆಯ ಟಿವಿಯಲ್ಲೂ ಒಂದೇ ವಾಹಿನಿಯ ಸದ್ದು ಅದೇ ಕಲರ್ಸ್ ಕನ್ನಡ. ಹೌದು, ಬಿಗ್ ಬಾಸ್ ಒಂದು ಕಾರ್ಯಕ್ರಮ ಮಾತ್ರವಲ್ಲದೆ ಅದು ಮನೆ ಮನಗಳ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ ಅಲ್ಲಿ ಭಾಗವಹಿಸುವ ಹಲವಾರು ಸ್ಪರ್ದಿಗಳು. ಸ್ಪರ್ಧಿಗಳ ನಡುವೆ ಮೊದಲಿಗೆ ಸ್ನೇಹ, ಸ್ನೇಹದಿಂದ ಶುರುವಾಗಿ ಸಿಟ್ಟು, ಕೋಪ, ಹತಾಶೆ ಹೀಗೆ ಆಟಗಳಷ್ಟೇ ಅಲ್ಲದೆ ಆಟಗಳನ್ನು ಮೀರಿ ಕೆಲವೊಮ್ಮೆ ದ್ವೇಷ ಮುಂದುವರಿಸುತ್ತಾರೆ. ಹಾಗೂ ಪ್ರೀತಿ, ಸ್ನೇಹವೂ ಸಹ ಹಾಗೆ ಮುಂದುವರಿಯುತ್ತದೆ. ಹೀಗಾಗಿ ನೋಡುಗರಿಗೆ ಭರ್ಜರಿ ಮನರಂಜನೆ ಸಿಗುವುದರಲ್ಲಿ ಅನುಮಾನವೇ ಇಲ್ಲ.ಇದನ್ನು ಓದಿ: "ಪ್ರತಿಯೊಬ್ಬ ಭಾರತೀಯನಿಗೆ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿ": ಭಗತ್ ಸಿಂಗ್ ಅವರ 118ನೇ ಜನ್ಮದಿನದಂದು ಪಿಎಂ ಮೋದಿ ಗೌರವ
ಎಲ್ಲ ಕಾರಣಗಳಿಂದ ನೋಡುಗರು ಬಿಗ್ ಬಾಸ್ ಅನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ. ಇದೇ ರೀತಿ ಕಲರ್ಸ್ ಕನ್ನಡ ಚಾನೆಲ್ ತಂಡವು ಕೂಡ ಅಷ್ಟೇ ಮುತುವರ್ಜಿಯಿಂದ ಕಾಳಜಿ ವಹಿಸಿ ಆಟಗಳು ಮತ್ತು ಮನೋರಂಜನ ಕಾರ್ಯಕ್ರಮಗಳನ್ನು ರೂಪಿಸುತ್ತದೆ.
ಬಿಗ್ ಬಾಸ್ ಸೀಸನ್ 11 ಮುಗಿದ ಮೇಲೆ ಎಲ್ಲರೂ ಮನದಲ್ಲು ಬೇಸರ ಮನೆ ಮಾಡಿತ್ತು. ಏಕೆಂದರೆ ಮತ್ತೆ ಯಾವಾಗ ಬಿಗ್ ಬಾಸ್ ಸೀಸನ್ 12 ಬರುತ್ತದೆ ಎಂದು. ಹೀಗಾಗಿ ಬಿಗ್ ಬಾಸ್ ಸೀಸನ್ 12 ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಅನ್ನು ಪಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ಹಲವಾರು ಮನರಂಜನ ಕಾರ್ಯಕ್ರಮಗಳು ನಡೆಯಲಿದ್ದು ಸ್ಪರ್ಧಿಗಳು ಸಹ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಾರೆ. ಈಗಾಗಲೇ ಕೆಲವೊಂದು ಕಡೆ ಬಿಗ್ ಬಾಸ್ ಸೀಸನ್ 12ಕ್ಕೆ ಎಂಟ್ರಿ ನೀಡುವ ಸ್ಪರ್ಧಿಗಳ ಬಗ್ಗೆ ಕೆಲವೊಂದು ಮಾಹಿತಿ ಇದ್ದು ಅದ್ಯಾವುದು ಅಧಿಕೃತವಾಗಿಲ್ಲ. ಹೀಗಾಗಿ ನೀವು ಕಾರ್ಯಕ್ರಮವನ್ನು ತಪ್ಪದೇ ನೋಡಿ ಅಧಿಕೃತ ಸ್ಪರ್ಧಿಗಳ ಬಗ್ಗೆ ತಿಳಿದುಕೊಳ್ಳಿ.