ಆನೇಕಲ್: ಎಲ್ಲರೂ ಸ್ವಲ್ಪ ಸಮಯ ಕಳೆಯುವುದಕ್ಕೋಸ್ಕರವೋ ಅಥವಾ ಮೈಂಡ್ ರಿಲ್ಯಾಕ್ಸೇಷನ್ ಗೋಸ್ಕರವೋ ಕೆಲವು ಸ್ಥಳಗಳಿಗೆ ಭೇಟಿ ಕೊಡುವುದು ಹೆಚ್ಚು ಆದರೆ ಹೋದ ಸ್ಥಳದಲ್ಲಿಯೇ ಜೀವ ಹೋದರೆ ಹೇಗಾಗಬೇಡ. ಅದೇ ರೀತಿಯಾಗಿ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಫಾರಿಗೆಂದು ತೆರಳಿದ ಪ್ರವಾಸಿಗ ಅಲ್ಲೇ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದಾನೆ.ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಭೈರಪ್ಪರನ್ನು ಸ್ಮರಿಸಿದ ಮೋದಿ ..!
ಬೆಂಗಳೂರಿನ ನಾಗರಬಾವಿಯ ನಿವಾಸಿ 45 ವರ್ಷದ ನಂಜಪ್ಪ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಶನಿವಾರ ಸಫಾರಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಪತ್ನಿ ಇಬ್ಬರು ಮಕ್ಕಳೊಂದಿಗೆ ಸಫಾರಿ ವೀಕ್ಷಣೆ ಬಂದಿದ್ದ ವೇಳೆ ನಂಜಪ್ಪ ಸಫಾರಿ ಬಸ್ಸಿನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ಇದನ್ನೂ ಓದಿ: ಅಮರಾವತಿಯಲ್ಲಿ ವಿಜಯದಶಮಿ: ಸಿಜೆಐ ತಾಯಿ ಮುಖ್ಯ ಅತಿಥಿ ..!
ಝೂನ ಅಂಬುಲೆನ್ಸ್ ಮೂಲಕ ನಂಜಪ್ಪರನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂಜಪ್ಪ ಮೃತಪಟ್ಟಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.C J Enterprise Women's Pure Kanjivaram Silk Saree Banarasi Soft Sari With Blouse Piece For Wedding (Pari124-50)