ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯಾಗಿ ಬಹಿರಂಗವಾಗಿ ಘೋಷಿಸಿದೆ ಮತ್ತು "ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು"ವಾಗಿ ಮುಂದುವರೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ತೀಕ್ಷ್ಣವಾಗಿ ಟೀಕಿಸಿದರು. 80ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, 26 ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿದರು.
ನ್ಯೂಯಾರ್ಕ್, ಸೆಪ್ಟೆಂಬರ್ 28: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯು ಕೇವಲ ಒಂದು ದೇಶದ ಪ್ರಜೆಗಳಿಂದ ತುಂಬಿದೆ ಎಂದು ಹೇಳಿದರು. ಭಾರತದ ನೆರೆಯ ರಾಷ್ಟ್ರವಾದ ಆ ದೇಶವು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಎಂದು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪಾಕಿಸ್ತಾನವು ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಹಿರಂಗವಾಗಿ ಒಪ್ಪಿಕೊಂಡಿದೆ ಮತ್ತು "ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು"ವಾಗಿ ಮುಂದುವರೆದಿದೆ ಎಂದು ಜೈಶಂಕರ್ ತಿಳಿಸಿದರು. ಅವರು ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಿ, ಇದಕ್ಕಾಗಿ ಭಾರತವು ತನ್ನ ಜನರನ್ನು ರಕ್ಷಿಸಲು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದರು. ಈ ಕಾರ್ಯಾಚರಣೆಯ ಮೂಲಕ ನೆರೆಯ ದೇಶದಲ್ಲಿ ಅಡಗಿದ್ದ ಉಗ್ರರನ್ನು ಮಟ್ಟ ಹಾಕಲಾಯಿತು, ಇದರಿಂದ ಪಾಕಿಸ್ತಾನವು ಉಗ್ರರಿಗೆ ಆಶ್ರಯ ನೀಡುತ್ತಿರುವುದು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತಾಯಿತು ಎಂದು ಅವರು ಹೇಳಿದರು."ಭಾರತವು ಸ್ವಾತಂತ್ರ್ಯದಿಂದಲೂ ಈ ಸವಾಲನ್ನು ಎದುರಿಸುತ್ತಿದೆ. Guess Dare Floral Fruity Liquid Eau De Toilette - 100 Ml (For Women)
ನಮ್ಮ ದೇಶವು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾದ ನೆರೆಯ ರಾಷ್ಟ್ರವನ್ನು ಹೊಂದಿದೆ. ದಶಕಗಳಿಂದ ಪ್ರಮುಖ ಅಂತರರಾಷ್ಟ್ರೀಯ ಭಯೋತ್ಪಾದಕ ದಾಳಿಗಳು ಆ ದೇಶದ ಉಗ್ರರಿಂದ ನಡೆಯುತ್ತಿವೆ. ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಗಳು ಆ ದೇಶದ ಪ್ರಜೆಗಳಿಂದ ತುಂಬಿವೆ. ಆ ದೇಶವೆಂದರೆ ಪಾಕಿಸ್ತಾನ.
ಪಾಕಿಸ್ತಾನದಂತಹ ದೇಶವು ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಹಿರಂಗವಾಗಿ ಘೋಷಿಸಿದಾಗ, ಭಯೋತ್ಪಾದಕ ಕೇಂದ್ರಗಳು ಕೈಗಾರಿಕಾ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದಾಗ, ಉಗ್ರರನ್ನು ಸಾರ್ವಜನಿಕವಾಗಿ ವೈಭವೀಕರಿಸಿದಾಗ, ಅಂತಹ ಕ್ರಿಯೆಗಳನ್ನು ಸ್ಪಷ್ಟವಾಗಿ ಖಂಡಿಸಬೇಕು. ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯಬೇಕು" ಎಂದು ಸಚಿವ ಜೈಶಂಕರ್ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.