ಟಿವಿಕೆ ಪರ ವಕೀಲರು ತುರ್ತು ಮನವಿಯನ್ನು ಸಲ್ಲಿಸಿದ ಕಾರಣ ನ್ಯಾಯಮೂರ್ತಿಗಳಾದ ದಂಡಪಾಣಿ ಅವರು ಸ್ವೀಕರಿಸಿದ್ದು ನಾಳೆ ಮದುರೈ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಘಟನೆಯ ಹಿಂದೆ ಕೆಲವು ಪಿತೂರಿಯಿದೆ ಎಂದು ಟಿವಿಕೆ ಪಕ್ಷವೂ ಆರೋಪಿಸಿದೆ. ಈ ಕುರಿತು ಸ್ವತಂತ್ರ ತನಿಖೆಯನ್ನು ನಡೆಸುವಂತೆ ಕೋರಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಟಿ ವಿ ಕೆ ಪಕ್ಷವು ತಮಿಳುನಾಡಿನ ವಿವಿಧ ಭಾಗಗಳಲ್ಲಿ ರಾಜಕೀಯ ರ್ಯಾಲಿಗಳನ್ನು ನಡೆಸುತ್ತಿದ್ದು ಶನಿವಾರ ಕರೂರಿನಲ್ಲಿ ನಡೆದ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 39 ಜನರ ಮೃತಪಟ್ಟಿದ್ದರು, ಹೀಗಾಗಿ ಇದರ ಹಿಂದೆ ಯಾವುದಾದರು ಕಾಣದ ಕೈಗಳು ಕೆಲಸ ಮಾಡುವೆಯಾ ಎಂಬ ಅನುಮಾನದ ಮೇಲೆ ಟಿವಿಕೆ ಪಕ್ಷ ಅರ್ಜಿಯನ್ನು ಸಲ್ಲಿಸಿರುವ ಸಾಧ್ಯತೆಗಳಿದೆ ಎಂದು ತಿಳಿದುಬಂದಿದೆ. Guess Dare Floral Fruity Liquid Eau De Toilette - 100 Ml (For Women)
ಆದರೂ ಇಂತಾ ಘಟನೆ ಇಲ್ಲಿಯವರೆಗೂ ಯಾವುದೇ ರಾಜಕೀಯ ಪಕ್ಷಗಳ ರ್ಯಾಲಿಯಲ್ಲಿ ನಡೆದಿಲ್ಲ. ಹೀಗಾಗಿ ಈ ಘಟನೆ ಮುಂದೆ ನಡೆಯಲು ಬಾರದು ಎಂದು ರಾಜಕೀಯ ಮುಖಂಡರು ತಿಳಿಸಿದ್ದಾರೆ. ಈ ಘಟನೆಗೆ ಹಲವಾರು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.