Skip to main content
ವಿಡಿಯೋ
1/3
entertainment

ಬಿಗ್‌ಬಾಸ್ ಮನೆಗೆ ಬಾಂಬ್ ಬೆದರಿಕೆ...ಈಗ ಯುಟರ್ನ್ ಹೊಡೆದ ಮಮ್ಮಿ ಅಶೋಕ್ ಕ್ಷಮೆಯಾಚನೆ!

By Ram Chethan
ಬಿಗ್‌ಬಾಸ್ ಮನೆಗೆ ಬಾಂಬ್ ಬೆದರಿಕೆ...ಈಗ ಯುಟರ್ನ್ ಹೊಡೆದ ಮಮ್ಮಿ ಅಶೋಕ್ ಕ್ಷಮೆಯಾಚನೆ!

ಬಿಗ್ ಬಾಸ್ ಪ್ರವೇಶಕ್ಕಾಗಿ ಅತಿರೇಕದ ವಿಡಿಯೋ ಮಾಡಿದ ಮಮ್ಮಿ ಅಶೋಕ್ ಪೊಲೀಸರ ಎಚ್ಚರಿಕೆಗೆ ಗುರಿಯಾದರು. ವಿವಾದದ ಬಳಿಕ ಕ್ಷಮೆಯಾಚನೆ ಮಾಡಿ, ಇನ್ನು ಮುಂದೆ ಇಂತಹ ವಿಡಿಯೋಗಳನ್ನು ಮಾಡೋದಿಲ್ಲವೆಂದು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ವಿವಿಧ ರೀತಿಯ ಕಂಟೆಂಟ್ ತಯಾರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಹೇಳಿಕೆಗಳನ್ನು ನೀಡುವವರು ಪೊಲೀಸರ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದಕ್ಕೆ "ಮಮ್ಮಿ ಅಶೋಕ್" ಉತ್ತಮ ಉದಾಹರಣೆ.

ಬಿಗ್ ಬಾಸ್ ಮನೆಗೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದ ಈ ವ್ಯಕ್ತಿ, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ ತನ್ನ ಹೇಳಿಕೆಯಿಂದ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಹಲವು ವರ್ಷಗಳಿಂದ ಬಿಗ್ ಬಾಸ್ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದ ಅಶೋಕ್, ಕಳೆದ ಸೀಸನ್‌ನಲ್ಲಿ ಬಿಗ್ ಬಾಸ್ ಬಾಗಿಲನ್ನು ತಟ್ಟಿ ಗಮನ ಸೆಳೆದಿದ್ದ.Safari Pentagon Pro 8 Wheels Set of 3 (Cabin + Medium + Large) Trolley Bags, Hard Case Polypropylene, 360º Wheeling Luggage, Suitcase for Travel, Cyan

ಈ ಬಾರಿಯೂ ಇದೇ ರೀತಿ ಮಾಡಲು ಹೋಗಿ ಅಶೋಕ್ ಸಂಕಷ್ಟಕ್ಕೆ ಸಿಲುಕಿದ್ದಾನೆ. "ನನ್ನನ್ನು ಬಿಗ್ ಬಾಸ್ ಮನೆಗೆ ಕರೆಸಿಲ್ಲ ಎಂದರೆ, ಬಿಗ್ ಬಾಸ್ ಮನೆಗೆ ಬಾಂಬ್ ಇಟ್ಟು ಉಡೀಸ್ ಮಾಡುತ್ತೇನೆ" ಎಂದು ಅಶೋಕ್ ವಿಡಿಯೋ ಮಾಡಿ ಪ್ರಕಟಿಸಿದ್ದ.

ಈ ವಿಡಿಯೋವನ್ನು ಗಮನಿಸಿದ ಕುಂಬಳಗೋಡು ಸಾಮಾಜಿಕ ಜಾಲತಾಣದ ಪೊಲೀಸರು, ಅಶೋಕ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆತನನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಎನ್‌ಸಿಆರ್ ದಾಖಲಿಸಲಾಗಿದ್ದು, ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.ಬಿಗ್‌ಬಾಸ್ ಕನ್ನಡ 12 ಆರಂಭದ ದಿನವೇ ಅಚ್ಚರಿ...ಮನೆಯಿಂದ ಔಟ್ ಆಗ್ತಾರ ರಕ್ಷಿತಾ ಶೆಟ್ಟಿ?

ಪೊಲೀಸರ ಕ್ರಮದಿಂದ ಎಚ್ಚೆತ್ತುಕೊಂಡ ಅಶೋಕ್, ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾನೆ. "ನಾನು ಮಾಡಿದ್ದ ವಿಡಿಯೋ ಹಾಸ್ಯಕ್ಕಾಗಿ ಮಾಡಿದ್ದೇ ಹೊರತು ಬೇರೆ ಯಾವುದೇ ಉದ್ದೇಶ ಇರಲಿಲ್ಲ. ಅಂತಹ ವಿಡಿಯೋ ಮಾಡಬಾರದಿತ್ತು, ಇನ್ನು ಮುಂದೆ ಇಂತಹ ವಿಡಿಯೋಗಳು ಬರುವುದಿಲ್ಲ" ಎಂದು ಅಶೋಕ್ ತಿಳಿಸಿದ್ದಾನೆ.