ಬೆಂಗಳೂರು: ದಾಸರಹಳ್ಳಿ ಮೆಟ್ರೋ ನಿಲ್ದ್ದಾಣ ಬಳಿ ಭಾನುವಾರ ರಾತ್ರಿ ನಡೆದ ರೋಡ್ ರೇಜ್ ಘಟನೆಯಲ್ಲಿ ಬೈಕ್ ಚಾಲಕನೊಬ್ಬ ಕ್ಯಾಬ್ ಚಾಲಕನ ಮೇಲೆ ದಾಳಿ ಮಾಡಿದ್ದಾನೆ. ಇಂಡಿಕೇಟರ್ ಹಾಕದೆ ಟರ್ನ್ ತೆಗೆದ ಕಾರಣ ಹೇಳಿ ಹಲ್ಲೆ ನಡೆಸಿದ ಬೈಕರ್, ಕ್ಯಾಬ್ನಲ್ಲಿ ಕುಳಿತಿದ್ದ ಯುವತಿಯರ ಸುರಕ್ಷತೆಯನ್ನೂ ಲೆಕ್ಕಿಸದೆ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ದೊಡ್ಡ ಡ್ರಾಮಾ ಸೃಷ್ಟಿಸಿದ್ದಾನೆ. ದಾಸರಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಚೆನ್ನೈ ರ್ಯಾಲಿ ದುರಂತ: ವಿಜಯ್‌ಗೆ ಬಾಂಬ್ ಬೆದರಿಕೆ, ಮೃತರಿಗೆ ಲಕ್ಷಾಂತರ ಪರಿಹಾರ ಘೋಷಣೆ!
ನಿನ್ನ ಕಾರಲ್ಲಿ ಇಂಡಿಕೇಟರ್ ಇಲ್ಲವಾ? ಯಾಕೆ ಹಾಕಿಲ್ಲ ಮಗ್ನೇ? ಎಂದು ಕೂಗುತ್ತಾ ಕ್ಯಾಬ್ ಚಾಲಕನನ್ನು ತಡೆದು ಕಪಾಳಕ್ಕೆ ಹೊಡೆದಿದ್ದಾನೆ. ಕ್ಯಾಬ್ನ ಹಿಂಭಾಗದಲ್ಲಿ ಕುಳಿತಿದ್ದ ಯುವತಿಯರು ಹೆದರಿಕೊಂಡು ಘಟನೆಯನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಸದ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ಯಾಬ್ ಚಾಲಕನಿಗೆ ಗಾಯಗಳಾದ್ದು. ಯುವತಿಯರು ಭಯಪಟ್ಟು ಪೊಲೀಸ್‌ಗೆ ಕರೆಮಾಡಿ ದೂರವಾಣಿ ಮಾಡಿ ಸಹಾಯ ಕೇಳಿದ್ದಾರೆ.ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಯೋಜನೆಗೆ ಭೂಮಿ ನೀಡಲು ಬಿಡದಿ ರೈತರು ಹಿಂದೇಟು...ಅನ್ನದಾತರ ಪ್ರತಿಭಟನೆಗೆ ರಾಜಕೀಯ ತಿರುವು!
ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ಬೈಕರ್ ವಿರುದ್ಧ ರೋಡ್ ರೇಜ್ ಮತ್ತು ದೈಹಿಕ ಹಲ್ಲೆಯ ದೂರು ದಾಖಲಿಸಲಾಗಿದೆ. ಇಂತಹ ಘಟನೆಗಳು ನಗರದ ಸಂಚಾರವನ್ನು ಹದಗೆಡಿಸುತ್ತಿವೆ. ಈ ಘಟನೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ರೋಡ್ ರೇಜ್ ಘಟನೆಗಳು ಏರಿಕೆಯಾಗುತ್ತಿವೆ. ಸಾರಿಗೆ ಇಲಾಖೆಯಿಂದ ಸಾರ್ವಜನಿಕರಿಗೆ ಇಂಡಿಕೇಟರ್ ಬಳಕೆ ಮತ್ತು ಶಿಸ್ತುಗಾರ ಸಂಚಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.MANOHARI Women's Trendy Banarasi Woven Saree with Heavy Jacquard Work, Elegant Design, Silk Saree with Maching Lace Border Unstitched Blouse Piece for Weddings & Festive Occasions