ವಾಷಿಂಗ್ಟನ್: ಭಾನುವಾರದಂದು, ಇಲ್ಲಿನ ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ನ ಮಾರ್ಮನ್ ಚರ್ಚ್‌ನಲ್ಲಿ ಪ್ರಾರ್ಥನೆಯಲ್ಲಿ ತೊಡಗಿದವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ. 40 ವರ್ಷದ ಅನುಮಾನಸ್ಪದ ವ್ಯಕ್ತಿಯೋರ್ವ ಮಾಡಿದ ಶೂಟೌಟ್ ಪರಿಣಾಮ, ನಾಲ್ವರು ಮೃತಪಟ್ಟಿದ್ದಾರೆ ಮತ್ತು 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಚರ್ಚ್ ಮೇಲೆ ದಾಳಿ ನಡೆಸಿದ ಪರಿಣಾಮ ಬೆಂಕಿ ಹೊತ್ತು ಉರಿದಿರುವ ಘಟನೆ ನಡೆದಿದೆ. ಈ ಕಾರಣ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಹಿಂದಿರುವ ಉದ್ದೇಶ ಸ್ಪಷ್ಟಪಡಿಸಲಾಗಿಲ್ಲ. ಈ ವೇಳೆ ತನಿಖೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾರ್ಥನೆಗೆಂದು ಚರ್ಚ್‌ಗೆ ಆಗಮಿಸಿದ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಮತ್ತು ತುರ್ತು ವೈದ್ಯಕೀಯ ಸೇವೆಗಳು ಸೇರಿದಂತೆ ಏಜೆನ್ಸಿಗಳು ಸ್ಥಳಕ್ಕೆ ಧಾವಿಸಿದವು. HP Smartchoice Victus, AMD Ryzen 7 7445HS, 6GB RTX 3050, 16GB DDR5(Upgradeable) 512GB SSD, FHD, 144Hz, 300 nits, 15.6''/39.6cm, Win 11, M365* Office24, Blue, 2.29kg, fb3134AX/3120ax, Gaming Laptop
ಈ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತ ಭವನದಲ್ಲಿ ಸೂಚನೆ ನೀಡಿದ್ದು, ಈ ಭಯಾನಕ ದಾಳಿಯ ಮಾಹಿತಿಯನ್ನು ತಿಳಿಯಲು ಎಫ್ ಬಿ ಐ ಗೆ ಸೂಚಿಸಲಾಗಿದೆ. ಭದ್ರತಾ ಕ್ರಮಗಳನ್ನು ಕೈಗೊಂಡು ಸೆಕ್ಯೂರಿಟಿ ಇಲಾಖೆಯು ಸೂಕ್ತ ಸಂವಹನ ನಡೆಸಿ ತನಿಖೆ ಆರಂಭಿಸಿದೆ ಎಂದು ತಿಳಿಸಿದೆ. ಈ ಹಿಂದೆ, ಡೊನಾಲ್ಡ್ ಟ್ರಂಪ್ ಆಪ್ತ ಸ್ನೇಹಿತ ಚಾರ್ಲಿ ಕಿರ್ಕ್ ಅವರನ್ನ ಹತ್ಯೆಗೈಯ್ಯಲಾಗಿತ್ತು. ಈ ನಿಟ್ಟಿನಲ್ಲಿ ಹಲವರ ಹತ್ಯೆಗಳ ಸರಣಿ ಸಾವು ಮುಂದುವರೆದಿದ್ದು, ಬಂಧೂಕುದಾರಿಗಳ ಎನ್ಕೌಂಟರ್ ಪೊಲೀಸರಿಂದ ಮುಂದುವರೆದಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಚಂಡಮಾರುತ ಆತಂಕ - ಅಕ್ಟೋಬರ್ 4 ರವರೆಗೆ ಮಳೆ ಸಾಧ್ಯತೆ, ಕರಾವಳಿ ಭಾಗದಲ್ಲಿ ಎಚ್ಚರಿಕೆ.!