Skip to main content
ವಿಡಿಯೋ
1/2
politics

ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ: ಹೆಬ್ಬಾಳಕರ್ ನಾಯಕತ್ವದಲ್ಲಿ 15 ಸ್ಥಾನಗಳ ಭರ್ಜರಿ ಗೆಲುವು..!

By Sushmitha R
ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ: ಹೆಬ್ಬಾಳಕರ್ ನಾಯಕತ್ವದಲ್ಲಿ 15 ಸ್ಥಾನಗಳ ಭರ್ಜರಿ ಗೆಲುವು..!

ಹುಬ್ಬಳ್ಳಿ ಕೆ.ಎಂ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ನೇತೃತ್ವದ ರೈತರ ಪುನಶ್ಚೇತನ ಪ್ಯಾನಲ್‌ಗೆ ಭರ್ಜರಿ ಗೆಲುವು ದಾಖಲಾಗಿದೆ.

ಹುಬ್ಬಳ್ಳಿ : ಕೆ.ಎಂ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ನೇತೃತ್ವದ ರೈತರ ಪುನಶ್ಚೇತನ ಪ್ಯಾನಲ್‌ಗೆ ಭರ್ಜರಿ ಗೆಲುವು ದಾಖಲಾಗಿದೆ. ಸಚಿವ ಹೆಬ್ಬಾಳಕರ ಸಹೋದರರ ಬೆಂಬಲದೊಂದಿಗೆ ಈ ಗೆಲುವು ರೈತರ ಒಗ್ಗಟ್ಟಿನ ಸಂಕೇತವೆಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.ದೆಹಲಿಯಲ್ಲಿ ಬಿಜೆಪಿಯ ನೂತನ ಕಚೇರಿ: ನಾಳೆ ಮೋದಿಯಿಂದ ಚಾಲನೆ..!

ಭಾನುವಾರ ಬೆಳಿಗ್ಗೆಯಿಂದ ಮತದಾನ ನಡೆಯಿತು. ಉತ್ಸಾಹದಿಂದ ಮತ ಚಲಾಯಿಸಿದ ರೈತರು, ಕಾರ್ಮಿಕರು ಮತ್ತು ಸ್ಥಳೀಯರು ಭಾಗವಹಿಸಿದ್ದರು. ಮತದಾನ ತಡರಾತ್ರಿವರೆಗೂ ಮುಂದುವರಿದ್ದರೂ, ಸಚಿವ ಲಕ್ಷ್ಮೀ ಹೆಬ್ಬಾಳಕರ್ ಕಾರಿನಲ್ಲೇ ಕುಳಿತು ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ಫಲಿತಾಂಶ ಪ್ರಕಟವಾದ ತಕ್ಷಣ ಕಾರ್ಖಾನೆಯ ಮುಂದೆ ಸಂಭ್ರಮಾಚರಣೆಗೆ ನಡೆಯಿತ್ತು. Fastrack Astor FR2 Pro 1.43" AMOLED Stainless Steel Smart Watch with SpO2, Heart Rate, BT Calling, Adaptive AOD,Functional Crown, AI Voice Assistant – Smartwatch for Stylish Professionals (Rose Gold)

ಸಾಮಾನ್ಯ ಮತಕ್ಷೇತ್ರದಿಂದ ಸ್ಪರ್ಧಿಸಿದ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರು ಅತ್ಯಂತ ಹೆಚ್ಚು 4,731 ಮತಗಳಿಸಿ ಮುಂದುಡಿದ್ದಾರೆ. ಶ್ರೀಕಾಂತ್ ಇಟಗಿ 4,424 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಶಿವನಗೌಡ ಪಾಟೀಲ್ 4,349 ಮತಗಳು, ಶಂಕರ ಪರಪ್ಪ ಕಿಲ್ಲೇದಾರ್ 4,245 ಮತಗಳು, ಶ್ರೀಶೈಲ ಬಸಪ್ಪ ತುರಮರಿ 4,183 ಮತಗಳು, ಲಲಿತ ಭಾಲಚಂದರ ಪಾಟೀಲ್ 4,041 ಮತಗಳು ಮತ್ತು ಶಿವಪುತ್ರಪ್ಪ ಮರಡಿ 3,838 ಮತಗಳನ್ನು ಸಂಗ್ರಹಿಸಿದ್ದಾರೆ.ಮಹಿಳಾ ಮೀಸಲು ಕ್ಷೇತ್ರದಲ್ಲಿ ಸುನೀತಾ ಮಹಾಂತೇಶ ಲಂಗೋಟಿ ಅವರು 3,913 ಮತಗಳಿಸಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಲ್ಲಿ ಭಾಳಪ್ಪ ದುರಗಪ್ಪ ಪೂಜಾರ್ 3,827 ಮತಗಳೊಂದಿಗೆ ಮುಂದುಡಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಲ್ಲಿ ಭರಮಪ್ಪ ಶಿಗೆಹಳ್ಳಿ 4,161 ಮತಗಳನ್ನು ಪಡೆದಿದ್ದಾರೆ.

ಗೆಲುವಿನ ಸುದ್ದಿಯೊಂದಿಗೆ ಡಿ.ಜೆ. ಸಂಗೀತ, ಹೊಗಳುಗಳು ಮತ್ತು ಅಂಗಳಾಟದಿಂದ ವಾತಾವರಣ ಸಂತರ್ಪಣೆಗೆ ತಿರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರೈತರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ಅಭೂತಪೂರ್ವ ಗೆಲುವಿಗೆ ಧನ್ಯವಾದಗಳು. ಕಾರ್ಮಿಕರಿಗೂ ಕೃತಜ್ಞತೆ. ಅವರ ನಂಬಿಕೆಗೆ ತಕ್ಕಂತೆ ಪಾರದರ್ಶಕ, ರೈತ ಹಿತಚಿಂತನೆಯ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಚೀನಾದ ಮಾಜಿ ಕೃಷಿ ಸಚಿವ ಟ್ಯಾಂಗ್ ರೆಂಜಿಯಾನ್‌ಗೆ ಲಂಚ ಪ್ರಕರಣದಲ್ಲಿ ಮರಣದಂಡನೆ: ಜಿಲಿನ್ ನ್ಯಾಯಾಲಯದ ತೀರ್ಪು..!

ಚನ್ನರಾಜ್ ಹಟ್ಟಿಹೊಳಿ, ಈ ಗೆಲುವು ರೈತರ ಸಮಸ್ಯೆಗಳ ಪರಿಹಾರಕ್ಕೆ ಹೊಸ ಆಶಾಕಿರಣವಾಗಿದೆ. ಕಾರ್ಖಾನೆಯ ಅಭಿವೃದ್ಧಿಗೆ ಒತ್ತು ನೀಡುತ್ತೇವೆ ಎಂದು ಹೇಳಿದರು.ಈ ಚುನಾವಣೆಯಲ್ಲಿ ಹೆಬ್ಬಾಳಕರ್ ಸಹೋದರರ ಚುನಾವಣಾ ತಂಡದ ಶಕ್ತಿ ಮತ್ತು ರೈತರ ಬೆಂಬಲ ಕಾರಣವಾಗಿ ಪ್ಯಾನಲ್ ಎಲ್ಲಾ ಸ್ಥಾನಗಳನ್ನೂ ಗೆದ್ದಿದೆ.

ಕಾರ್ಖಾನೆಯ ಆರ್ಥಿಕ ಸ್ಥಿತಿ, ಸಿಬ್ಬಂದಿ ಸಮಸ್ಯೆಗಳು ಮತ್ತು ರೈತರ ಆದಾಯದ ಕುರಿತು ಚರ್ಚೆಯಲ್ಲಿ ಈ ಪ್ಯಾನಲ್ ಭರವಸೆ ನೀಡಿತ್ತು. ಗೆಲುವಿನೊಂದಿಗೆ ಸ್ಥಳೀಯ ರಾಜಕೀಯದಲ್ಲಿ ಹೊಸ ಚೈತನ್ಯ ಸೃಷ್ಟಿಯಾಗಿದೆ. ಭವಿಷ್ಯದಲ್ಲಿ ಕಾರ್ಖಾನೆಯ ಉತ್ಪಾದನೆ ಹೆಚ್ಚಿಸಿ, ರೈತರ ಆರ್ಥಿಕ ಏರಿಳಿತಕ್ಕೆ ಸಹಾಯ ಮಾಡುವ ಯೋಜನೆಗಳನ್ನು ಜಾರಿಗೊಳಿಸುವುದಾಗಿ ನಿರ್ದೇಶಕರು ಭರವಸೆ ನೀಡಿದ್ದಾರೆ.ಅಮರಾವತಿಯಲ್ಲಿ ವಿಜಯದಶಮಿ: ಸಿಜೆಐ ತಾಯಿ ಮುಖ್ಯ ಅತಿಥಿ ..!