ಬಿಗ್‌ಬಾಸ್ ಕನ್ನಡ ಸೀಸನ್ 12 ಅದ್ಧೂರಿಯಾಗಿ ಪ್ರಾರಂಭಗೊಂಡಿದ್ದು, 19 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರಲ್ಲಿ ನಟಿ ಹಾಗೂ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ಒಬ್ಬರು. ಅವರು ನೂರಕ್ಕೂ ಹೆಚ್ಚು ಸಿನಿಮಾಗಳು ಮತ್ತು 25 ಧಾರಾವಾಹಿಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ.
ರಾಜಕೀಯ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿ ಬೆಳೆದ ಅಶ್ವಿನಿ, ನಂತರದಲ್ಲಿ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟರು. ಕಲಾವಿದೆಯಾಗಿ ಗುರುತಿಸಿಕೊಂಡ ನಂತರ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ರೂಪೇಶ್ ರಾಜಣ್ಣ ಬಿಗ್‌ಬಾಸ್ ಮನೆಗೆ ಹೋಗಿದ್ದ ಸಂದರ್ಭದಲ್ಲಿ, ಈ ಬಾರಿ ಕಲಾವಿದೆ ಮತ್ತು ಹೋರಾಟಗಾರ್ತಿ ವಿಭಾಗದಲ್ಲಿ ಅಶ್ವಿನಿ ಗೌಡ ಅವರಿಗೆ ಆಹ್ವಾನ ಸಿಗಬಹುದು ಎಂದು ಹೇಳಲಾಗುತ್ತಿತ್ತು.
ಒಂದು ಸಂದರ್ಶನದಲ್ಲಿ ಅಶ್ವಿನಿ ಗೌಡ, "ಬಿಗ್‌ಬಾಸ್ ಆಯೋಜಕರಿಂದ ನನಗೆ ಯಾವುದೇ ಕರೆ ಬಂದಿಲ್ಲ. ಆದರೆ, ಒಂದು ವೇಳೆ ಹೋಗುವುದಾದರೆ ಕನ್ನಡದ ಹೆಣ್ಣುಮಗಳು ಯಾಕೆ ಹೋಗಬಾರದು?" ಎಂದು ಪ್ರಶ್ನಿಸಿದ್ದರು. ಕುಟುಂಬದ ವಿಚಾರಕ್ಕೆ ಮಾತ್ರ ತನ್ನನ್ನು ಸೋಲಿಸಲು ಸಾಧ್ಯ, ಬೇರೆ ಯಾವುದಕ್ಕೂ ಅಲ್ಲ ಎಂದು ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ.
"ನನ್ನೊಳಗಿರುವ ಅಶ್ವಿನಿ ಗೌಡ ಯಾರು ಎಂಬುದನ್ನು ಜನರಿಗೆ ತಿಳಿಸಲು ನಾನು ಈ ಬಾರಿ ಬಿಗ್‌ಬಾಸ್ ಮನೆಗೆ ಬಂದಿದ್ದೇನೆ" ಎಂದು ಅವರು ತಮ್ಮ ವಿಟಿಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ವೇದಿಕೆಯ ಮೇಲೆ ಸುದೀಪ್ ಅವರ ಮುಂದೆ "ಕೆಚ್ಚೆದೆಯ ಹೋರಾಟಗಾರ್ತಿಯಾಗಿ ಕಿಚ್ಚಿನಿಂದ ಆಡಲು ಬಿಗ್‌ಬಾಸ್ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ" ಎಂದು ಘೋಷಿಸಿದ್ದಾರೆ.HALDEN BURLEY Belts For Men Leather Original (Adjustable Fits Up to 44 Inch Waist) Ratchet Straps, Unique Magnetic Auto-lock Buckle Branded Belts For Men Leather Original
ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ಅಶ್ವಿನಿ ಗೌಡ ತಮ್ಮ ವೈಯಕ್ತಿಕ ಜೀವನ, ಸಿನಿಮಾ ವೃತ್ತಿ, ಮತ್ತು ಹೋರಾಟಗಳ ಬಗ್ಗೆ ವಿವರವಾಗಿ ಮಾತನಾಡಿದ್ದರು. ತಮ್ಮ ತಾತನ ಆಸ್ತಿ, ಅದನ್ನು ತಂದೆ ಹೇಗೆ ಅಭಿವೃದ್ಧಿಪಡಿಸಿದರು ಎಂಬೆಲ್ಲಾ ಕೌಟುಂಬಿಕ ವಿವರಗಳನ್ನು ಹಂಚಿಕೊಂಡಿದ್ದರು. ತಮ್ಮ ಮನೆಯ ಹೋಮ್ ಟೂರ್ ಮಾಡಿ ಹಲವಾರು ವಿಚಾರಗಳನ್ನು ವಿವರಿಸಿದ್ದರು.
ಅಶ್ವಿನಿ ಗೌಡ ಅವರು ತಮ್ಮ ಕುಟುಂಬದ ಹಿನ್ನೆಲೆ ಕುರಿತು, "ನಮ್ಮದು ದೊಡ್ಡ ಕುಟುಂಬ. ನಮ್ಮ ತಂದೆಗೆ ಮೂವರು ಮಡದಿಯರು. ನಾವೆಲ್ಲರೂ ಒಟ್ಟಿಗೆ ಸೇರಿಕೊಂಡರೆ ಸುಮಾರು 500 ಜನರಾಗುತ್ತೇವೆ" ಎಂದು ಹೇಳಿದ್ದರು. "ನಮ್ಮ ತಂದೆ ಮುನಿಬಚ್ಚಪ್ಪ ಕೆ.ಆರ್. ಪುರದ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಜಗದೀಶ್ ನಗರದ ಕಾರ್ಪೊರೇಟರ್ ಆಗಿಯೂ ಸೇವೆ ಸಲ್ಲಿಸಿದ್ದರು. ನಮ್ಮದು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ. ನಾನೊಬ್ಬಳೇ ಕಲಾವಿದೆಯಾಗಿ ಗುರುತಿಸಿಕೊಂಡಿರುವುದು" ಎಂದು ಅವರು ತಿಳಿಸಿದ್ದರು.
ರಾಜಕೀಯ ಹಿನ್ನೆಲೆಯಿಂದ ಬಂದಿದ್ದರೂ, ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡ ಕಾರಣ ತಾನು ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಎಂದು ಅಶ್ವಿನಿ ಗೌಡ ಸ್ಪಷ್ಟಪಡಿಸಿದ್ದಾರೆ. "ನಮ್ಮ ತಂದೆ 30-40 ವರ್ಷಗಳ ಹಿಂದೆಯೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ಅವರು ಹಲವಾರು ಲೇಔಟ್‌ಗಳನ್ನು ನಿರ್ಮಿಸಿದ್ದರು ಮತ್ತು ಸಾಕಷ್ಟು ಆಸ್ತಿಯನ್ನು ಹೊಂದಿದ್ದರು" ಎಂದು ಹೇಳಿದರು.ಕರೂರು ಕಾಲ್ತುಳಿತ ದುರಂತ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ನಟ ವಿಜಯ್..SIT ತನಿಖೆಗೆ ಮನವಿ!
"ಹೆಚ್‌ಎಎಲ್ ಮತ್ತು ಬಿಇಎಂಎಲ್ ಸಂಸ್ಥೆಗಳಿಗೆ ಒಂದಷ್ಟು ಜಮೀನು ಹೋಗಿದೆ. ಕೆಂಪೇಗೌಡ ಬಡಾವಣೆಯನ್ನು ನನ್ನ ತಂದೆಯೇ ನಿರ್ಮಿಸಿದ್ದರು. ನಮ್ಮ ಏರಿಯಾಕ್ಕೆ ಮುನಿಬಚ್ಚಪ್ಪ ಕಾಲೋನಿ ಎಂದೇ ಹೆಸರು" ಎಂದು ಅಶ್ವಿನಿ ಗೌಡ ಮಾಹಿತಿ ನೀಡಿದ್ದರು. "ಸುಮಾರು 100-150 ಚಿಕ್ಕ ಮನೆಗಳನ್ನು ನಾವು ಬಾಡಿಗೆಗೆ ನೀಡಿದ್ದೇವೆ. ಆಸ್ತಿ ಇದ್ದಾಗ ಸಹಜವಾಗಿಯೇ ಕಾನೂನು ಹೋರಾಟಗಳು ಇರುತ್ತವೆ. ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಿಕೊಳ್ಳಬೇಕು" ಎಂದು ಅವರು ಹೇಳಿದರು.
"ಅಪ್ಪ ಇದ್ದಾಗಲೇ ಒಂದಷ್ಟು ಜವಾಬ್ದಾರಿಗಳನ್ನು ನನ್ನ ಹೆಗಲಿಗೆ ಹಾಕಿದ್ದರು. ತಮ್ಮ ಚಿಕ್ಕವನಾದ್ದರಿಂದ ಅವನಿಗೆ ಹೆಚ್ಚು ಜವಾಬ್ದಾರಿ ವಹಿಸಿಲ್ಲ. ಹೋರಾಟದ ಕೇಸುಗಳು ಮತ್ತು ಆಸ್ತಿ ಪ್ರಕರಣಗಳು ಸೇರಿ ಒಟ್ಟು 22ರಿಂದ 23 ಪ್ರಕರಣಗಳಿವೆ. ತಿಂಗಳ ಬಹುಪಾಲು ಸಮಯವನ್ನು ಅವುಗಳಿಗೆ ವಿನಿಯೋಗಿಸಬೇಕು. ನಮಗೆ ಮೂರು ಎಕರೆ ಜಾಗವಿದ್ದು, ಅಲ್ಲೇ ನನ್ನ ತಂದೆಯವರ ದೇವಸ್ಥಾನವನ್ನು ನಿರ್ಮಿಸಿದ್ದೇನೆ" ಎಂದು ಅಶ್ವಿನಿ ಗೌಡ ವಿವರಿಸಿದ್ದರು.