Skip to main content
ವಿಡಿಯೋ
1/2
sports

ಏಷ್ಯಾ ಕಪ್ 2025: ಭಾರತ ತಂಡ ಟ್ರೋಫಿ ಸ್ವೀಕರಿಸಲಿಲ್ಲ ಏಕೆ? ಕ್ಯಾಪ್ಟನ್‌ ಸೂರ್ಯಕುಮಾರ್‌ ಅವರ ಒಟ್ಟು ಸಂಭಾವನೆ ಹೀಗಿದೆ

By Gireesh Vasishta
ಏಷ್ಯಾ ಕಪ್ 2025: ಭಾರತ ತಂಡ ಟ್ರೋಫಿ ಸ್ವೀಕರಿಸಲಿಲ್ಲ ಏಕೆ? ಕ್ಯಾಪ್ಟನ್‌ ಸೂರ್ಯಕುಮಾರ್‌ ಅವರ ಒಟ್ಟು ಸಂಭಾವನೆ ಹೀಗಿದೆ

ಇದು ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಮತ್ತು ಪಾಕ್‌ನ ಆಟಗಾರರಿಗೆ ಮುಜುಗರ ಉಂಟುಮಾಡುವ ವಿಚಾರವಾಗಿದ್ದಂತು ಸುಳ್ಳಲ್ಲ. ಹೀಗಾಗಿ ಭಾರತೀಯ ಆಟಗಾರರು ಪಾಕ್ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷ ಮತ್ತು ಅಲ್ಲಿನ ಗೃಹ ಮಂತ್ರಿಯ ಬಳಿ ಟ್ರೋಫಿಯನ್ನು ಪಡೆಯಲಿಲ್ಲ.

ದುಬೈ: ಭಾರತ ಏಷ್ಯಾ ಕಪ್‌ನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್‌ಗೆ ಎಂಟ್ರಿ ನೀಡಿದ್ದು ಆ ಹಿನ್ನೆಲೆಯಲ್ಲಿ ಫೈನಲ್‌ನಲ್ಲೂ ಭರ್ಜರಿ ಬ್ಯಾಟಿಂಗ್ ನಡೆಸಿ ಫೈನಲ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಗೆದ್ದುಕೊಂಡಿತ್ತು. ಹೀಗಾಗಿ ಟ್ರೋಫಿ ಪಡೆದು ಫೋಟೋಗೆ ಪೋಸ್ ಕೊಡುವುದು ಮಾಮೂಲಿ ವಾಡಿಕೆ, ಆದರೆ ಟ್ರೋಫಿಯನ್ನೇ ಪಡೆಯದೆ ಭಾರತ ತಂಡ ಕ್ಯಾಮರಾಗೆ ಪೋಸ್ ನೀಡಿದ್ದು, ಅದಕ್ಕೆ ಕಾರಣ ಕೆಲವರಿಗೆ ತಿಳಿದಿಲ್ಲ.

ಹೌದು, ಭಾರತ ತಂಡ ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ ಫೈನಲ್ ನಲ್ಲಿ ಅದ್ಭುತ ಗೆಲುವನ್ನು ಸಾಧಿಸಿತು ಈ ಹಿನ್ನೆಲೆಯಲ್ಲಿ ಟ್ರೋಪಿಯನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷರಾದ ಮೊಹ್ಸಿನ್‌ ನಕ್ವಿ ಅವರು ಭಾರತಕ್ಕೆ ಪ್ರಶಸ್ತಿ ಪ್ರಧಾನ ಮಾಡಬೇಕಾಗಿತ್ತು. ಆದರೆ ಈ ಹಿಂದೆ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದಾಳಿಯ ಹಿನ್ನೆಲೆ ಪಾಕ್‌ನ ಆಟಗಾರರಿಗೆ ಸ್ನೇಹಯುತವಾದ ಶೇಕ್‌ಹ್ಯಾಂಡ ಅನ್ನು ನೀಡದ ಭಾರತೀಯ ಆಟಗಾರರು ಇನ್ನು ಅವರ ಬಳಿ ಪ್ರಶಸ್ತಿಯನ್ನು ಸ್ವೀಕರಿಸುವುದು ಸರಿಯಲ್ಲ ಎಂದು ಭಾವಿಸಿದ್ದರು.
ಇದು ಒಂದು ರೀತಿಯಲ್ಲಿ ಪಾಕಿಸ್ತಾನಕ್ಕೆ ಮತ್ತು ಪಾಕ್‌ನ ಆಟಗಾರರಿಗೆ ಮುಜುಗರ ಉಂಟುಮಾಡುವ ವಿಚಾರವಾಗಿದ್ದಂತು ಸುಳ್ಳಲ್ಲ. ಹೀಗಾಗಿ ಭಾರತೀಯ ಆಟಗಾರರು ಪಾಕ್ ಕ್ರಿಕೆಟ್ ಬೋರ್ಡ್ನ ಅಧ್ಯಕ್ಷ ಮತ್ತು ಅಲ್ಲಿನ ಗೃಹ ಮಂತ್ರಿಯ ಬಳಿ ಟ್ರೋಫಿಯನ್ನು ಪಡೆಯಲಿಲ್ಲ.
ಇದನ್ನು ಓದಿ: ಗೋಕರ್ಣ ಗುಹೆಯಲ್ಲಿದ್ದ ರಷ್ಯಾದ ಮಹಿಳೆ & ಮಕ್ಕಳನ್ನು ತವರಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ: ಮಾಹಿತಿ ಹೀಗಿದೆ

ಪಂದ್ಯದ ಎಲ್ಲಾ ಸಂಭಾವನೆಯ ಮೊತ್ತವನ್ನು ಫಹಲ್ಗಾಂ ಸಂತ್ರಸ್ತರಿಗೆ ಮತ್ತು ಯೋಧರಿಗೆ ನೀಡುವುದಾಗಿ ತಿಳಿಸಿದ ಸೂರ್ಯ ಕುಮಾರ್:

ಹೌದು, ಒಟ್ಟು ಏಳು ಪಂದ್ಯಗಳಲ್ಲಿ 28 ಲಕ್ಷವನ್ನು ಗಳಿಸಿದ ಸೂರ್ಯ ಕುಮಾರ್ ಅಂದರೆ ಒಂದು ಪಂದ್ಯಕ್ಕೆ 4 ಲಕ್ಷ ರೂಪಾಯಿಯನ್ನು ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ದುಬೈನಲ್ಲಿ ಅಜೇಯ ಸಾಧನೆ ಮಾಡಿ ಏಷ್ಯಾ ಕಪ್ ಟಿ20 ಗೆದ್ದ ಭಾರತ ತಂಡ ಮತ್ತು ನೆರವು ಸಿಬ್ಬಂದಿಗೆ 21 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಸಿಸಿಐ ಘೋಷಿಸಿದೆ.TRASE Block Heels Sandals For Women, Dusky Stylish & Comfortable Footwear

ಒಟ್ಟಾರೆ ಗೆದ್ದ ತಂಡಕ್ಕೆ ಟ್ರೋಫಿ ನೀಡಲು ಅಮೆರಿಕದಿಂದ ನಕ್ವಿ ಅವರು ದುಬೈಗೆ ತೆರಳಿದ್ದರು. ಆದರೆ ಅಲ್ಲಿ ಟ್ರೋಫಿಯನ್ನು ಭಾರತೀಯರು ಪಡೆಯಲಿಲ್ಲ. ಹೀಗಾಗಿ ಅವರ ಪ್ರತಿಷ್ಠೆಗೆ ಪೆಟ್ಟು ಬಿದ್ದಂತಾಗಿದೆ. ಪಂದ್ಯ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಕೂಡ ಟ್ರೋಫಿ ಇಲ್ಲದೆ ಸೆಲೆಬ್ರೇಷನ್ ಆಚರಿಸಿದರು ಮತ್ತು ಕ್ಯಾಮೆರಾಗೆ ಪೋಸ್ ನೀಡುವಾಗಲು ಟ್ರೋಫಿ ಇಲ್ಲದೆಯೇ ಇಡೀ ತಂಡ ಸೆಲೆಬ್ರೇಷನ್ನಲ್ಲಿ ಪಾಲ್ಗೊಂಡಿತು.