ಗುರುಗ್ರಾಮ, ಸೆಪ್ಟೆಂಬರ್ 30: ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿ, ಆಕೆಯನ್ನು ಕೊಂದು, ಬಳಿಕ ಸ್ನೇಹಿತನಿಗೆ ವಿಷಯ ತಿಳಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಆರೋಪಿ ಅಜಯ್ ಕುಮಾರ್ (30) ತನ್ನ ಸ್ನೇಹಿತನಿಗೆ ವೀಡಿಯೊ ಸಂದೇಶ ಕಳುಹಿಸಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ನಿವಾಸಿ ಅಜಯ್ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಅಸನ್ಸೋಲ್‌ನ ಸ್ವೀಟಿ ಶರ್ಮಾ (28) ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಇಬ್ಬರೂ ಗುರುಗ್ರಾಮದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಕುಮಾರ್‌ನ ಸ್ನೇಹಿತನಿಗೆ ಮಧ್ಯಾಹ್ನ 3:15 ಗಂಟೆಗೆ ಕರೆ ಬಂದಿದ್ದು, ಅವನು ವೀಡಿಯೊ ಸಂದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ದಂಪತಿಗಳ ನಡುವೆ ಯಾವುದೋ ವಿಷಯಕ್ಕೆ ತೀವ್ರ ವಾಗ್ವಾದ ನಡೆದಿತ್ತು. ಪೊಲೀಸರು ಸೆಕ್ಟರ್ 37ರ ವಸತಿ ಸೊಸೈಟಿಯಲ್ಲಿರುವ ಅವರ ಫ್ಲಾಟ್‌ಗೆ ತಲುಪಿದಾಗ, ಸ್ವೀಟಿ ಶರ್ಮಾ ಅವರ ದೇಹ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿತು. ಆಕೆಯ ಕುತ್ತಿಗೆಗೆ ಸ್ಕಾರ್ಫ್‌ನಿಂದ ಹಿಸುಕಿ ಕೊಲೆ ಮಾಡಲಾಗಿತ್ತು. ZAVERI PEARLS Rose Gold Cubic Zirconia Contemporary Brass Necklace & Earring Set For Women-ZPFK21107
ಕುಮಾರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಪೊಲೀಸರ ಪ್ರಕಾರ, ಕುಮಾರ್ ತನ್ನ ಪತ್ನಿಯನ್ನು ಕೊಂದಿರುವ ಸಾಧ್ಯತೆ ಇದೆ. ಆದರೆ, ಈ ಎರಡೂ ಘಟನೆಗಳ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ವೀಟಿಯ ಕುಟುಂಬವು ಕುಮಾರ್ ವಿರುದ್ಧ ಕೊಲೆ ಆರೋಪದಡಿ ದೂರು ದಾಖಲಿಸಿದೆ.