Skip to main content
ವಿಡಿಯೋ
1/2
crime

ಆರೋಪಿ ದರ್ಶನ್‌ ಜೈಲು ಸೌಕರ್ಯ ಅರ್ಜಿ ವಿಚಾರಣೆ ಇಂದು; ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ: SPP ವಾದ

By Gireesh Vasishta
ಆರೋಪಿ ದರ್ಶನ್‌ ಜೈಲು ಸೌಕರ್ಯ ಅರ್ಜಿ ವಿಚಾರಣೆ ಇಂದು; ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ: SPP ವಾದ

- ಅಲ್ಲೇ ಇಡಬೇಕು , ಇಲ್ಲೇ ಇಡಬೇಕು ಅಂತ ಕೇಳುವ ಅಧಿಕಾರ ಖೈದಿಗೆ ಇಲ್ಲ. ಇದೇ ಬ್ಯಾರಕ್‌ನಲ್ಲಿ ಇಡಬೇಕು ಅಂತ ಕೇಳುವ ಅಧಿಕಾರ ಇಲ್ಲ. ಜೈಲಿನಲ್ಲಿ ಎಲ್ಲಾ ಮೂಲಭೂತ ಹಕ್ಕುಗಳು ಸಿಗಲ್ಲ. ಸೂರ್ಯನ ಬೆಳಕು ಸಿಗಲ್ಲಾಂತ ಇದೇ ಬ್ಯಾರಕ್‌ಗೆ ಹಾಕಿ ಎಂದು ಕೇಳಲು ಸಾಧ್ಯವಿಲ್ಲ..

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಸಲ್ಲಿಸಿದ ಸೌಕರ್ಯಗಳ ಅರ್ಜಿ ಇಂದು ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಇದನ್ನು ಕುರಿತ ಮುಖ್ಯ ಅಂಶಗಳು ಕೆಳಕಂಡಂತೆ..

-ಜೈಲಿನ ಸೂಪರಿಡೆಂಟ್ ರಿಂದ ಕೋರ್ಟ್‌ಗೆ ರಿಪೋರ್ಟ್ ಸಲ್ಲಿಕೆ, ಆರೋಪಗಳ ಸಂಬಂಧ 64 ನೇ ಸಿಸಿಹೆಚ್ ಕೋರ್ಟ್‌ಗೆ ಸ್ಪಷ್ಟನೆ ನೀಡಿ ಮುಚ್ಚಿದ ಲಕೋಟೆಯಲ್ಲಿ ರಿಪೋರ್ಟ್ ಸಲ್ಲಿಕೆ.

- ಕೋರ್ಟ್ ಆದೇಶ ಪಾಲನೆ ಮಾಡ್ತಾ ಇದ್ದೀರಾ.?(  ನ್ಯಾ..ಪಿ.ನಾಯ್ಕ್ ಅವರಿಂದ ವಿಚಾರಣೆ -ಜೈಲು ಅಧೀಕ್ಷಕ ಸುರೇಶ್‌ಗೆ ಕೋರ್ಟ್ ಪ್ರಶ್ನೆ)

ಕೋರ್ಟ್ ಆದೇಶ ಪಾಲನೆ ಮಾಡುತ್ತಿದ್ದೇವೆ - ಅಧೀಕ್ಷಕ ಸುರೇಶ್.

- ಎಸ್ಪಿಪಿ ಪ್ರಸನ್ನಕುಮಾರ್ ವಾದ: ಜೈಲು ಮ್ಯಾನುಯಲ್‌ನಲ್ಲಿರೋ ಎಲ್ಲಾ ಸೌಲಭ್ಯ ನೀಡ್ತಾ ಇದ್ದೇವೆ, ಪಲ್ಲಂಗ ಕೊಡಿ ಅಂದರೆ ಪಲ್ಲಂಗ ಕೊಡಲು ಅವಕಾಶ ಇಲ್ಲ – ಎಸ್ಪಿಪಿPALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

- ಅಲ್ಲೇ ಇಡಬೇಕು , ಇಲ್ಲೇ ಇಡಬೇಕು ಅಂತ ಕೇಳುವ ಅಧಿಕಾರ ಖೈದಿಗೆ ಇಲ್ಲ. ಇದೇ ಬ್ಯಾರಕ್‌ನಲ್ಲಿ ಇಡಬೇಕು ಅಂತ ಕೇಳುವ ಅಧಿಕಾರ ಇಲ್ಲ. ಜೈಲಿನಲ್ಲಿ ಎಲ್ಲಾ ಮೂಲಭೂತ ಹಕ್ಕುಗಳು ಸಿಗಲ್ಲ. ಸೂರ್ಯನ ಬೆಳಕು ಸಿಗಲ್ಲಾಂತ ಇದೇ ಬ್ಯಾರಕ್‌ಗೆ ಹಾಕಿ ಎಂದು ಕೇಳಲು ಸಾಧ್ಯವಿಲ್ಲ..

ಸೌಲಭ್ಯ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಗೆ ಎಸ್ಪಿಪಿ ತೀವ್ರ ವಿರೋಧ.

ದರ್ಶನ್ ಪರ ವಕೀಲ ಸುನಿಲ್ ಕುಮಾರ್ ವಾದ ಆರಂಭ:

ಸೌಲಭ್ಯ ನೀಡುವಂತೆ ಕೋರ್ಟ್ ನೀಡಿರುವ ಆದೇಶ ಪಾಲನೆ ಮಾಡಿಲ್ಲ, ಕೋರ್ಟ್ ಆದೇಶದ ಇಂಗ್ಲಿಷ್ ನನ್ನ ಜೈಲು ಅಧಿಕಾರಿಗಳು ಅರ್ಥ ಮಾಡಿಕೊಂಡಿಲ್ಲ. ಭಾಷೆ ಅರ್ಥ ಮಾಡಿಕೊಂಡಿಲ್ಲ ಎಂಬ ವಾದಕ್ಕೆ ಎಸ್ಪಿಪಿ ತೀವ್ರ ಆಕ್ಷೇಪ. ಕೋರ್ಟ್ ಮುಂದೆ ಸರಿಯಾದ ಅಂಶಗಳ ಕುರಿತು ವಾದ ಮಂಡಿಸಿ – ಜಡ್ಜ್. ವಕೀಲ ಸುನಿಲ್ ಕುಮಾರ್ ಗೆ ಜಡ್ಜ್ ಸೂಚನೆ.ಇದನ್ನು ಓದಿ: 'ಕ್ರೂಸ್' VS 'ಕ್ರೊಕ್ಸ್‌’: ಜನಪ್ರಿಯ 'ಕ್ರೊಕ್ಸ್‌’ ಬ್ರ್ಯಾಂಡ್‌ಗೆ ನ್ಯಾಯಲಯದಲ್ಲಿ ಜಯ: ಕಾರಣ ಹೀಗಿದೆ

- ದರ್ಶನ್ ತುಂಬಾ ಟಾರ್ಚರ್ ಅನುಭವಿಸುತ್ತಿದ್ದಾರೆ, ಖುದ್ದು ಆರೋಪಿ ದರ್ಶನ್ ಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ. ಜೈಲು ಅಧಿಕಾರಿಗಳಿಗೆ ಜೈಲು ಮ್ಯಾನುವಲ್ ಕೂಡ ಕೊಟ್ಟಿದ್ದೇನೆ. ಕೋರ್ಟ್ ಆದೇಶವನ್ನ ಜೈಲು ಅಧಿಕಾರಿಗಳು ಬಿಸಾಡಿದ್ದಾರೆ. ಜೈಲು ಆದೇಶದ ಬಗ್ಗೆ ಜೈಲು ಅಧಿಕಾರಿಗಳಿಗೆ ಮರ್ಯಾದೆ ಇಲ್ಲ.

- ಯಾವ ನಿರ್ದೇಶನ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಿ – ಎಸ್ಪಿಪಿ, ಸುಮ್ಮನೆ ಪಲ್ಲಂಗ ಎಂದು ಹೇಳಿದರೆ ಹೇಗೆ ? – ಸುನಿಲ್. ನಾವು ಪಲ್ಲಂಗ, ಮಂಚ ಕೇಳಿದ್ದೇವೆಯೇ.? – ಸುನಿಲ್

- ಜೈಲಿನ ದಾಖಲೆಗಳನ್ನ ನೀಡುವಂತೆ ದರ್ಶನ್ ಪರ ವಕೀಲ ಅರ್ಜಿ-

ಯಾವ ಯಾವ ಖೈದಿಗಳನ್ನ ಕ್ವಾರೇಂಟೈನ್ ನಲ್ಲಿ ಇಟ್ಟಿದ್ದಾರೆ.? ಯಾವ ಯಾವ ಸೌಲಭ್ಯ ನೀಡಿದ್ದಾರೆ ಎಂಬ ಮಾಹಿತಿ ಕೋರ್ಟ್‌ಗೆ ನೀಡಲಿ. ಸಿಸಿಟಿವಿ ಸಮೇತ ಎಲ್ಲಾ ದಾಖಲೆಗಳನ್ನ ಕೋರ್ಟ್‌ಗೆ ನೀಡಲಿ ಎಂದು ಅರ್ಜಿ.

- ಚಾಪೆ, ಚಾದರ, ಕಂಬಳಿ, ಮಗ್ಗು ನೀಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಕಂಬಳಿ ನೀಡಿದ್ದಾರೆ. ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ವಾಕಿಂಗ್ ಅವಕಾಶ ನೀಡಿದ್ದಾರೆ. ಆರೋಪಿ ದರ್ಶನ್ ಭೇಟಿ ಮಾಡಲು ಹೋಗಿದ್ದ ವಕೀಲರಿಗೆ ಪ್ರತ್ಯೇಕ ರಿಜಿಸ್ಟ್ರಾರ್ ಮೆಂಟೇನ್ ಮಾಡಿದ್ದಾರೆ. ಎಲ್ಲಾ ಆರೋಪಿಗಳಿಗೆ ಹೀಗೆ ಪ್ರತ್ಯೇಕ ರಿಜಿಸ್ಟ್ರಾರ್ ಇಟ್ಟುಕೊಂಡಿದ್ದಾರೆಯೇ.? ದರ್ಶನ್ ಪರ ವಕೀಲ ವಾದ.

- ಏನ್ ಏನ್ ಕೊಟ್ಟಿಲ್ಲ..? ಏನ್ ಕೊಡಬೇಕು ಅನ್ನೋದನ್ನ ಮಾತ್ರ ಹೇಳಲಿ – ಎಸ್ಪಿಪಿ

- ಯಾವ ಸೌಲಭ್ಯ ನೀಡಿಲ್ಲ ಅನ್ನೋದನ್ನ ಮಾತ್ರ ಹೇಳಿ - ಸುನಿಲ್ ಗೆ ಜಡ್ಜ್ ಪ್ರಶ್ನೆ. ಹೀಗೆ ವಾದ, ವಿವಾದ ಮುಂದುವರೆದಿದೆ.