Skip to main content
ವಿಡಿಯೋ
1/2
general

ಕಿದ್ವಾಯಿ ಆಸ್ಪತ್ರೆಯಿಂದ ಕೈದಿ ಪರಾರಿ ಪ್ರಕರಣ: ಸಿದ್ದಾಪುರ ಪೊಲೀಸರಿಂದ ಚೇತನ್ ಕಲ್ಯಾಣಿ ಬಂಧನ!

By Pavitra Ganapathi Baradavalli
ಕಿದ್ವಾಯಿ ಆಸ್ಪತ್ರೆಯಿಂದ ಕೈದಿ ಪರಾರಿ ಪ್ರಕರಣ: ಸಿದ್ದಾಪುರ ಪೊಲೀಸರಿಂದ ಚೇತನ್ ಕಲ್ಯಾಣಿ ಬಂಧನ!

ಕಿದ್ವಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ಚೇತನ್ ಕಲ್ಯಾಣಿಯನ್ನು ಸಿದ್ದಾಪುರ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.  ಸೆಪ್ಟೆಂಬರ್‌ 8 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಚೇತನ್ ಕಲ್ಯಾಣಿ, ಈ ವೇಳೆಯಲ್ಲಿ ಪರಾರಿಯಾಗಿ ತಪ್ಪಿಸಿಕೊಂಡಿದ್ದ

ವಿಜಯಪುರ: ಕಿದ್ವಾಯಿ ಆಸ್ಪತ್ರೆಯಿಂದ ಪರಾರಿಯಾಗಿದ್ದ ಕೈದಿ ಚೇತನ್ ಕಲ್ಯಾಣಿಯನ್ನು ಸಿದ್ದಾಪುರ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.  ಸೆಪ್ಟೆಂಬರ್‌ 8 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಚೇತನ್ ಕಲ್ಯಾಣಿ, ವೇಳೆಯಲ್ಲಿ ಪರಾರಿಯಾಗಿ ತಪ್ಪಿಸಿಕೊಂಡಿದ್ದ.ಇದನ್ನೂ ಓದಿ: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಮನೆ-ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಅಕ್ರಮ ಆಸ್ತಿ ಆರೋಪ ಹಿನ್ನೆಲೆ ಶೋಧ!


ಜೀವವಾದಿ ಶಿಕ್ಷೆಗೆ ಒಳಗಾಗಿದ್ದ ಚೇತನ್ ಕಲ್ಯಾಣಿ, ಇತ್ತೀಚಿಗಷ್ಟೇ ಬಿಜಾಪುರದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಚೇರಿಗೆ ಶಿಫ್ಟ್ ಆಗಿದ್ದ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವನನ್ನು ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದ ವೇಳೆ ಎಸ್ಕೇಪ್ ಆಗಿದ್ದ. ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಮಾಹಿತಿಯ ಪ್ರಕಾರ, ಚೇತನ್ ಕಲ್ಯಾಣಿ ಚಾಕು ಇರಿತ ಪ್ರಕರಣದಲ್ಲಿ ಜೀವವಾದಿ ಶಿಕ್ಷೆಗೊಳಗಾಗಿದ್ದು, ಕ್ಯಾನ್ಸರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ.ಇದನ್ನೂ ಓದಿ: ಮೊದಲ ಬಾರಿ ಋತುಮತಿಯಾದ ಬಾಲಕಿಯರೆ ಟಾರ್ಗೆಟ್‌: 20 ಲಕ್ಷಕ್ಕೆ ಬಾಲಕಿಯರ ಸಾಗಣೆ ಜಾಲ ಪತ್ತೆ.


ಗಾರ್ಡ್ಗಳು ದೂರವಿದ್ದಾಗ ಕೈಗೆ ಹಾಕಿದ್ದ ಕೋಳವನ್ನು ತೆಗೆದು ಪರಾರಾಗಿದ್ದ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸಿ, ವಿಜಯಪುರದಲ್ಲಿ ಅವನನ್ನು ಬಂಧಿಸಲಾಗಿದೆ.SWORNOF Women's kanjivaram banarasi silk saree for Patola festival Wedding silk with rich pallu Design sarees for women with blouse piece