ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಖಾಸಗಿ ವೀಡಿಯೊ ಮತ್ತು ಫೋಟೋಗಳನ್ನು ಬಳಸಿ ಬ್ಲಾಕ್ಮೇಲ್ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿಗಳಾದ ಶೂಟ್ ಗಿರಿ ಮತ್ತು ಸ್ವರೂಪ್ ರೌಡಿ ಅರಸಯ್ಯನ ಗ್ಯಾಂಗ್ಗೆ ಸಂಬಂಧಿಸಿದವರೆಂದು ಗುರುತಿಸಲಾಗಿದೆ.ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತನಿಖೆ ತ್ವರಿತಗೊಳಿಸಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ!
2022ರಲ್ಲಿ ಮಹಿಳೆಗೆ ಫೇಸ್ಬುಕ್ ಮೂಲಕ ಸ್ವರೂಪ್ನ ಜೊತೆಗೆ ಪರಿಚಯವಾಗಿತ್ತು. ನಂತರ, ಸ್ವರೂಪ್ ಆಕೆಯ ಬಳಿ ಕಷ್ಟದಲ್ಲಿದ್ದೇನೆಂದು ಹೇಳಿಕೊಂಡು ₹4 ಲಕ್ಷ ಹಣ ಪಡೆದಿದ್ದ. ಮಹಿಳೆ ಹಣ ವಾಪಸ್ ಕೇಳಿದಾಗ, ಸ್ವರೂಪ್ ಆಕೆಯ ಖಾಸಗಿ ವೀಡಿಯೊ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ.ಇದನ್ನೂ ಓದಿ: ಚೆನ್ನೈ ಎಣ್ಣೂರು ವಿದ್ಯುತ್ ಸ್ಥಾವರದಲ್ಲಿ ದುರಂತ: 9 ಕಾರ್ಮಿಕರ ದಾರುಣ ಅಂತ್ಯ!
ಮಹಿಳೆ ಪೊಲೀಸ್ ಠಾಣೆಗೆ ದೂರು ಕೊಡಲು ಮುಂದಾದಾಗ, ಶೂಟ್ ಗಿರಿ ಹಣ ವಾಪಸ್ ಕೊಡುವುದಾಗಿ ತಡೆದಿದ್ದ. ಆದರೆ, ಹಣ ಕೊಡದೇ, ಸ್ವರೂಪ್ ತಮ್ಮ ಗ್ಯಾಂಗ್ನವನೆಂದು ಹೇಳಿ, ಆತನ ತಂಟೆಗೆ ಬಂದರೆ ಸರಿಯಿರಲ್ಲ ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಜೊತೆಗೆ, ಖಾಸಗಿ ವೀಡಿಯೊವನ್ನು ಹರಿಬಿಡುವುದಾಗಿ ಮತ್ತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.MANOHARI Women's Trendy Banarasi Woven Saree with Heavy Jacquard Work, Elegant Design, Silk Saree with Maching Lace Border Unstitched Blouse Piece for Weddings & Festive Occasions