Skip to main content
ವಿಡಿಯೋ
1/2
politics

ದಸರಾ ಬಳಿಕ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ...ಗೈರು ಹಾಜರಾದ್ರೆ ಕಠಿಣ ಕ್ರಮ!

By Vinutha U
ದಸರಾ ಬಳಿಕ ಬೆಂಗಳೂರಿನಲ್ಲಿ ಜಾತಿ ಗಣತಿ ಸಮೀಕ್ಷೆ...ಗೈರು ಹಾಜರಾದ್ರೆ ಕಠಿಣ ಕ್ರಮ!

ದಸರಾ ಹಬ್ಬದ ನಂತರ ಬೆಂಗಳೂರಿನಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರಮುಖ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದೆ. ಗೈರುಹಾಜರಾಗುವ ಸಮೀಕ್ಷಕರ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಸಿದ್ಧವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮವಾಗಿ ಆರಂಭಗೊಳ್ಳಲು ಸಿದ್ಧವಾಗಿದೆ. ದಸರಾ ಹಬ್ಬದ ನಂತರ ಸಿಲಿಕಾನ್ ಸಿಟಿಯಲ್ಲಿ ಸಮೀಕ್ಷಾ ಕಾರ್ಯಗಳಿಗೆ ಚಾಲನೆ ದೊರೆಯಲಿದ್ದು, ಸಮೀಕ್ಷೆಗೆ ಗೈರುಹಾಜರಾಗುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಅಥಾರಿಟಿಗೆ ಅಧಿಕಾರ ನೀಡಲಾಗಿದೆ. ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಈಗಾಗಲೇ ಪ್ರಾರಂಭವಾಗಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಮುಂದೂಡಲ್ಪಟ್ಟಿದ್ದ ಸಮೀಕ್ಷೆಗೆ ಈಗ ಜಿಬಿಎ ಹಸಿರು ನಿಶಾನೆ ತೋರಿಸಿದೆ. ವಿವಿಧ ಇಲಾಖೆಗಳ ನೌಕರರನ್ನು ಸಮೀಕ್ಷಕರನ್ನಾಗಿ ನೇಮಿಸಿ, ಅವರಿಗೆ ಜಿಬಿಎ ತರಬೇತಿ ನೀಡುತ್ತಿದೆ.

ದಸರಾ ನಂತರ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭಿಸಲು ಜಿಬಿಎ ಸಿದ್ಧತೆ ನಡೆಸಿದ್ದು, ಪ್ರತಿ ವಾರ್ಡ್‌ಗೆ 70 ರಿಂದ 80 ಸಮೀಕ್ಷಕರನ್ನು ನಿಯೋಜಿಸಲಾಗಿದೆ. ಒಟ್ಟು 17 ಸಾವಿರ ಸಿಬ್ಬಂದಿ ಈ ಸಮೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಪ್ರತಿಯೊಬ್ಬ ಸಮೀಕ್ಷಕರಿಗೂ ತಲಾ 750 ಮನೆಗಳ ಸಮೀಕ್ಷೆ ಮಾಡುವ ಜವಾಬ್ದಾರಿ ನೀಡಲಾಗಿದೆ. JM LOOKS Slingback Heels for Women Pointed Toe Stiletto High Heels Stretch Slip on Backless Fashion Comfortable Dress Pumps Shoes

ಸಮೀಕ್ಷೆಯನ್ನು 10 ರಿಂದ 15 ದಿನಗಳೊಳಗೆ ಪೂರ್ಣಗೊಳಿಸಲು ಜಿಬಿಎ ಯೋಜಿಸಿದೆ. ಅಂದುಕೊಂಡ ಸಮಯದೊಳಗೆ ಸಮೀಕ್ಷೆ ಪೂರ್ಣಗೊಳ್ಳದಿದ್ದರೆ, ಅದನ್ನು ಮುಂದುವರಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆ ಅಥವಾ ವಿಶೇಷಚೇತನ ಸಮೀಕ್ಷಕರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಸಮೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹೇಶ್ ತಿಮರೋಡಿಗೆ ಹೈಕೋರ್ಟ್‌ನಿಂದ ರಕ್ಷಣೆ: ಅಕ್ಟೋಬರ್ 8 ರವರೆಗೆ ಗಡಿಪಾರು ಆದೇಶಕ್ಕೆ ತಡೆ..!

ಸುಖಾಸುಮ್ಮನೆ ಸಮೀಕ್ಷೆಗೆ ಗೈರುಹಾಜರಾದರೆ ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗದ ಕೆಲಸಕ್ಕೂ ಸಿಬ್ಬಂದಿ ಅಗತ್ಯವಿರುವ ಕಾರಣ, ಸಮೀಕ್ಷಾ ಕಾರ್ಯಕ್ಕೆ ಮತ್ತೆ ಸಿಬ್ಬಂದಿ ಕೊರತೆ ಎದುರಾಗುವ ಸಾಧ್ಯತೆಯಿದೆ. ರಾಜಧಾನಿಯಲ್ಲಿ ನಿಗದಿತ ಸಮಯದೊಳಗೆ ಸಮೀಕ್ಷೆ ಪೂರ್ಣಗೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.