Skip to main content
ವಿಡಿಯೋ
1/2
globalnews

ಅಮೆರಿಕಾ ಟ್ರಂಪ್‌ ಸರ್ಕಾರ ಶಟ್‌ಡೌನ್‌ - ಸರ್ಕಾರಿ ಸೇವೆಗಳು ಸ್ಥಗಿತ, ಕ್ರೈಸಿಸ್‌ನಿಂದ ಜನಜೀವನಕ್ಕೆ ಹೊಡೆತ.!

By Shravanthi R
ಅಮೆರಿಕಾ ಟ್ರಂಪ್‌ ಸರ್ಕಾರ ಶಟ್‌ಡೌನ್‌ - ಸರ್ಕಾರಿ ಸೇವೆಗಳು ಸ್ಥಗಿತ, ಕ್ರೈಸಿಸ್‌ನಿಂದ ಜನಜೀವನಕ್ಕೆ ಹೊಡೆತ.!

ಅಮೆರಿಕಾ ದೇಶದಲ್ಲಿ ರಾಜಕೀಯ ಮತ್ತು ಹಣಕಾಸು ಬಿಕ್ಕಟ್ಟು ಉಂಟಾಗಿದ್ದು, ಸರ್ಕಾರ ಮಧ್ಯರಾತ್ರಿ ಸ್ಥಗಿತಗೊಂಡಿದೆ. ರಿಪಬ್ಲಿಕನ್ ಮತ್ತು ಡೆಮೊಕ್ರಾಟ್ ಪಕ್ಷಗಳ ನಡುವಿನ ಘರ್ಷಣೆಯಿಂದ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗದೆ ಸರ್ಕಾರ ಶಟ್‌ಡೌನ್‌ನ ಹಂತಕ್ಕೆ ತಲುಪಿದೆ.

ವಿಶ್ವದ ದೊಡ್ಡಣ್ಣ ಅಮೆರಿಕಾ ದೇಶದಲ್ಲಿ ಆರ್ಥಿಕ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಮಧ್ಯರಾತ್ರಿ ಅಲ್ಲಿನ ಸರ್ಕಾರ ಅಧಿಕೃತ ಸ್ಥಗಿತಗೊಂಡಿದೆ ಎಂದು ವರದಿ ತಿಳಿಸಿದೆ. ಆಡಳಿತ ರಿಪಬ್ಲಿಕನ್‌ ಪಕ್ಷ ಮತ್ತು ವಿರೋಧ ಪಕ್ಷವಾದ ಡೆಮಕ್ರಾಟ್‌ಗಳ ನಡುವೆ ರಾಜಕೀಯ ಜಟಾಪಟಿ ನಡೆದಿದ್ದು, ಈ ಸಲುವಾಗಿ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲು ವಿಫಲವಾದ ಪರಿಣಾಮ ಯುಎಸ್‌ ಸರ್ಕಾರವು ಶಟ್‌ಡೌನ್‌ ಅಪಾಯದಲ್ಲಿದೆ ಎಂದು ತಿಳಿಸಲಾಗಿದೆ. 

1997 ರಿಂದಲೂ ಈ ಪರಿಯ ಶಟ್‌ಡೌನ್‌ಗಳು ಗಂಭೀರ ಪರಿಸ್ಥಿತಿಯನ್ನು ತಂದೊಡ್ಡಿರುವ ಹಿನ್ನಲೆಯಿದೆ ಎನ್ನಲಾಗಿದೆ. ಅಮೆರಿಕ ದೇಶವು, 2019 ನಂತರ ಇದೀಗ ಗಂಭೀರ ಸ್ಥಗಿತಗೊಂಡು ಈ ಸಮಸ್ಯೆಯನ್ನು ಎದುರಿಸುತ್ತಿದೆ. ರಾಜಕೀಯ ಹಾಗೂ ಹಣಕಾಸು ಅನುಮೋದನೆಗಳ ಘರ್ಷಣೆಯಿಂದಾಗಿ ಅಮೆರಿಕ ಸರ್ಕಾರ ಸ್ಥಗಿತಗೊಳಿಸುವಿಕೆ ಬಿಕ್ಕಟ್ಟುಗಳಿಗೆ ತೆರೆದುಕೊಂಡಿದೆ. ಇದರಿಂದ ಅಲ್ಲಿನ ಆಡಳಿತದ ವಿವಿಧ ಆಯಾಮಗಳಿಗೆ ಹೊಡೆತ ಬಿದ್ದಿದೆ ಎನ್ನಲಾಗಿದೆ. iQOO Z10 Lite 5G (Titanium Blue, 4GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*

ಬುಧವಾರದಿಂದಲೇ ಪ್ರಾರಂಭವಾದ ಸ್ಥಗಿತಗೊಳಿಸುವಿಕೆ ಪರಿಣಾಮ, ಅಂದಾಜು 7.5 ಲಕ್ಷ ಉದ್ಯೋಗಿಗಳನ್ನ ತೆಗೆದ ಹಾಕಲಾಗಿದೆ ಹಾಗೂ ವ್ಯಾಪಕ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಇದಲ್ಲದೆ ವಿವಿಧ ನಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ. ಶ್ವೇತ ಭವನದಲ್ಲಿ ಟ್ರಂಪ್‌ ಈಗಾಗಲೇ ಅಧಿಕಾರಿಗಳ ಕಾರ್ಯಪಡೆಯ ಸಂದರ್ಶಿಸಿ ಸೂಚಿಸಿದ್ದಾರೆ ಈ ನಡುವೆ ಅಲ್ಲಿನ ಕಾರ್ಮಿಕ ಸಂಘಗಳು ಮುನಿಸು ತೋರಿವೆ ಎನ್ನಲಾಗಿದೆ.

ರಾಜಕೀಯ ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ, ಅಮೆರಿಕ ಸರ್ಕಾರದ ಭಿನ್ನಮತದ ಕಾರಣ ಸರ್ಕಾರ ಕೆಲಸಗಳೂ ಸ್ಥಗಿತಗೊಂಡಿವೆ. ಇದರಿಂದಾಗಿ ಆರೋಗ್ಯ ಸೇವೆಗೆ ಸಂಬಂಧಿಸಿದ ಬೇಡಿಕೆಗಳು ಬಿಕ್ಕಟ್ಟಿನ ಮೂಲ ಕೇಂದ್ರ ಬಿಂದುಗಳಾಗಿವೆ. ಈ ನಡುವೆ ಟ್ರಂಪ್‌ ಬೆದರಿಕೆ ಮುಂದುವರೆದಿದ್ದು, ಪರಿಸ್ಥಿತಿ ಜಟಿಲಗೊಂಡಿದೆ. ಟ್ರಂಪ್ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನೌಕರರಲ್ಲಿ ಆಕ್ರೋಶ ಮತ್ತು ಆತಂಕ ಮನೆ ಮಾಡಿದೆ ಎನ್ನಲಾಗಿದೆ. ಶಟ್‌ಡೌನ್‌ ಪರಿಣಾಮ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನೆಂಬ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ಆರ್‌ಬಿಐ ಹಣಕಾಸು ನೀತಿ - ರೆಪೋ ದರ ತಟಸ್ಥ - ದೀಪಾವಳಿಗೂ ಮುಂಚೆ ಸಾಲಗಾರರಿಗೆ ರಿಲೀಫ್.!