Skip to main content
ವಿಡಿಯೋ
1/2
general

ಎಮಿರೇಟ್ಸ್‌ ವಿಮಾನದಲ್ಲಿ ಪವರ್‌ ಬ್ಯಾಂಕ್‌ ಬಳಕೆ ಕಟ್ಟುನಿಟ್ಟಾಗಿ ನಿಷೇಧ: ಪ್ರಮುಖ ಕಾರಣಗಳು ಹೀಗಿವೆ

By Gireesh Vasishta
ಎಮಿರೇಟ್ಸ್‌ ವಿಮಾನದಲ್ಲಿ ಪವರ್‌ ಬ್ಯಾಂಕ್‌ ಬಳಕೆ ಕಟ್ಟುನಿಟ್ಟಾಗಿ ನಿಷೇಧ: ಪ್ರಮುಖ ಕಾರಣಗಳು ಹೀಗಿವೆ

ಥರ್ಮಲ್‌ ರನ್‌ವೇ ಅಪಾಯ: ಲಿಥಿಯಂ-ಐಯಾನ್‌ ಅಥವಾ ಲಿಥಿಯಂ-ಪಾಲಿಮರ್‌ ಸೆಲ್‌ಗಳಿಂದ ತಯಾರಾದ ಪವರ್‌ ಬ್ಯಾಂಕ್‌ಗಳು ಹಾನಿಗೊಳಗಾದರೆ, ಓವರ್‌ಚಾರ್ಜ್‌ ಆದರೆ, ಅಥವಾ ಶಾರ್ಟ್‌-ಸರ್ಕಿಟ್‌ ಆದರೆ, ಅವು ಬಿಸಿಯಾಗಬಹುದು, ಬೆಂಕಿ ಹೊತ್ತಿಕೊಳ್ಳಬಹುದು, ಸ್ಫೋಟಗೊಳ್ಳಬಹುದು ಅಥವಾ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಬಹುದು.

ದುಬೈ ಮೂಲದ ಎಮಿರೇಟ್ಸ್ ಏರ್ಲೈನ್ತನ್ನ ಎಲ್ಲಾ ವಿಮಾನಗಳಲ್ಲಿ ಅಕ್ಟೋಬರ್‌ 1, 2025ರಿಂದ ಪವರ್ಬ್ಯಾಂಕ್ಗಳ (ಪೋರ್ಟಬಲ್ಚಾರ್ಜರ್ಗಳ) ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ನೀತಿಯು ವಿಮಾನಯಾನದಲ್ಲಿ ಲಿಥಿಯಂ ಬ್ಯಾಟರಿಗಳಿಂದ ಉಂಟಾಗುವ ಬೆಂಕಿಯ ಘಟನೆಗಳು ಮತ್ತು ಅಪಾಯಗಳ ಹೆಚ್ಚಳದಿಂದಾಗಿ ಸುರಕ್ಷತಾ ಪರಿಶೀಲನೆಯ ಭಾಗವಾಗಿದೆ. ಪ್ರಯಾಣಿಕರು ತಮ್ಮ ಕ್ಯಾಬಿನ್ಬ್ಯಾಗೇಜ್ನಲ್ಲಿ ಪವರ್ಬ್ಯಾಂಕ್ಗಳನ್ನು ಒಯ್ಯಬಹುದಾದರೂ, ವಿಮಾನದಲ್ಲಿ ಇದನ್ನು ಯಾವುದೇ ಡಿವೈಸ್ಚಾರ್ಜ್ಮಾಡಲು ಅಥವಾ ಪವರ್ಬ್ಯಾಂಕ್ಅನ್ನು ರೀಚಾರ್ಜ್ಮಾಡಲು ಬಳಸುವಂತಿಲ್ಲ. PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+


ನಿಯಮವು ದುಬೈ ಇಂಟರ್ನ್ಯಾಷನಲ್ಏರ್ಪೋರ್ಟ್‌ (DXB) ಸೇರಿದಂತೆ ಎಮಿರೇಟ್ಸ್ ಎಲ್ಲಾ ಕೇಂದ್ರಗಳಿಂದ ಹೊರಡುವ ವಿಮಾನಗಳಿಗೆ ಅನ್ವಯವಾಗುತ್ತದೆ.

ಏಕೆ ನಿಷೇಧ? ಪ್ರಮುಖ ಕಾರಣಗಳು:

ಲಿಥಿಯಂ ಬ್ಯಾಟರಿ ಘಟನೆಗಳ ಹೆಚ್ಚಳ: ವಿಮಾನದಲ್ಲಿ ಲಿಥಿಯಂ ಬ್ಯಾಟರಿಗಳಿಂದ ಉಂಟಾಗುವ ಘಟನೆಗಳು ಹೆಚ್ಚಾಗಿವೆ, ಇದಕ್ಕೆ ಪವರ್ಬ್ಯಾಂಕ್ಗಳ ಬಳಕೆಯ ಹೆಚ್ಚಳ ಕಾರಣ.

ಥರ್ಮಲ್ರನ್ವೇ ಅಪಾಯ: ಲಿಥಿಯಂ-ಐಯಾನ್ಅಥವಾ ಲಿಥಿಯಂ-ಪಾಲಿಮರ್ಸೆಲ್ಗಳಿಂದ ತಯಾರಾದ ಪವರ್ಬ್ಯಾಂಕ್ಗಳು ಹಾನಿಗೊಳಗಾದರೆ, ಓವರ್ಚಾರ್ಜ್ಆದರೆ, ಅಥವಾ ಶಾರ್ಟ್‌-ಸರ್ಕಿಟ್ಆದರೆ, ಅವು ಬಿಸಿಯಾಗಬಹುದು, ಬೆಂಕಿ ಹೊತ್ತಿಕೊಳ್ಳಬಹುದು, ಸ್ಫೋಟಗೊಳ್ಳಬಹುದು ಅಥವಾ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಬಹುದು.ಇದನ್ನು ಓದಿ: 'BJP ಜೊತೆಗಿನ ಒಕ್ಕೂಟಕ್ಕಿಂತ ರಾಜೀನಾಮೆ ಆಯ್ಕೆ ಉತ್ತಮʼ: ಜಮ್ಮು-ಕಾಶ್ಮೀರ ಮಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆ: ಕಾರಣ ಹೀಗಿದೆ

- ಸುರಕ್ಷತಾ ಕೊರತೆ: ಸ್ಮಾರ್ಟ್ಫೋನ್ಗಳಿಗೆ ಓವರ್ಚಾರ್ಜಿಂಗ್ತಡೆಗಟ್ಟಲು ಟ್ರಿಕಲ್‌-ಚಾರ್ಜಿಂಗ್ಇದ್ದರೂ, ಅನೇಕ ಪವರ್ಬ್ಯಾಂಕ್ಗಳು, ವಿಶೇಷವಾಗಿ ಕಡಿಮೆ ಬೆಲೆಯವು, ಇಂತಹ ಸುರಕ್ಷತೆಯನ್ನು ಹೊಂದಿಲ್ಲ.

ಪ್ರಯಾಣಿಕರು ಏನು ಒಯ್ಯಬಹುದು ಮತ್ತು ಏನು ಮಾಡಬಹುದು?

- ಪ್ರತಿ ಪ್ರಯಾಣಿಕನಿಗೆ ಒಂದು, ಗರಿಷ್ಠ 100 ವ್ಯಾಟ್‌/ಅವರ್‌ (Wh) ಸಾಮರ್ಥ್ಯ. ಕೇವಲ ಕ್ಯಾಬಿನ್ಬ್ಯಾಗೇಜ್ನಲ್ಲಿ.

- ಸೀಟ್ಪಾಕೆಟ್ಅಥವಾ ಮುಂಭಾಗದ ಸೀಟ್ಕೆಳಗೆ. ಸಾಮರ್ಥ್ಯ (Wh ಅಥವಾ mAh) ಸ್ಪಷ್ಟವಾಗಿ ಕಾಣಬೇಕು.

-ವಿಮಾನ ಟೇಕ್‌ ಆಫ್‌ ಆಗುವುದಕ್ಕಿಂತ ಮುಂಚೆಯೆ ಚಾರ್ಜ್‌ ಹಾಕಿ, ನಂತರ ಔಟ್‌ಲೆಟ್‌ನಲ್ಲಿ ಇಡಬೇಕು.

ಇದರಲ್ಲಿ ಕ್ರಮ ಉಲ್ಲಂಘನೆಯಾದರೆ ಕ್ಯಾಬಿನ್ಕ್ರೂ, ಪವರ್ಬ್ಯಾಂಕ್ವಶಪಡಿಸಿಕೊಳ್ಳಬಹುದು ಅಥವಾ ಇತರ ಕ್ರಮ ಕೈಗೊಳ್ಳಬಹುದು.