Skip to main content
ವಿಡಿಯೋ
1/2
politics

ಬೆಂಗಳೂರಿನ ಮೂಲಸೌಕರ್ಯ ವಿವಾದ: ನಾರಾ ಲೋಕೇಶ್-ಪ್ರಿಯಾಂಕ್ ಖರ್ಗೆ ಟ್ವೀಟ್ ಯುದ್ಧ!

By Vinutha U
ಬೆಂಗಳೂರಿನ ಮೂಲಸೌಕರ್ಯ ವಿವಾದ: ನಾರಾ ಲೋಕೇಶ್-ಪ್ರಿಯಾಂಕ್ ಖರ್ಗೆ ಟ್ವೀಟ್ ಯುದ್ಧ!

ಬೆಂಗಳೂರಿನ ರಸ್ತೆ ಗುಂಡಿ ಮತ್ತು ಮೂಲಸೌಕರ್ಯ ವಿಚಾರಗಳು ರಾಜಕೀಯ ಮಾತುಕತೆಗೆ ತಲುಪಿವೆ; ನಾರಾ ಲೋಕೇಶ್-ಪ್ರಿಯಾಂಕ್ ಖರ್ಗೆ ಟ್ವೀಟ್ ಮುಖಾಮುಖಿ ಚರ್ಚೆ ಚಾಲನೆ.

ಬೆಂಗಳೂರಿನ ಮೂಲಸೌಕರ್ಯ ಸೌಲಭ್ಯಗಳ ಕುರಿತ ಚರ್ಚೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ರಸ್ತೆ ಗುಂಡಿಗಳು ಹಾಗೂ ಮೂಲಸೌಕರ್ಯ ಕೊರತೆಗಳ ಬಗ್ಗೆ ಐಟಿ ಕಂಪನಿಗಳು ದೂರು ನೀಡಿದ್ದವು. ಈ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಕಂಪನಿಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದರು.

ಬ್ಲಾಕ್ ಬಕ್ ಕಂಪನಿಯ ಸಿಇಓ ರಾಜೇಶ್ ಯಾಬಾಜಿ ಮತ್ತು ಉದ್ಯಮಿ ಮೋಹನ್‌ದಾಸ್ ಪೈ ಅವರ ಟ್ವೀಟ್‌ಗಳು ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದ್ದವು. ನಂತರ, ಕರ್ನಾಟಕ ಕಾಂಗ್ರೆಸ್ ಸರ್ಕಾರ ತಕ್ಷಣವೇ ರಸ್ತೆ ಗುಂಡಿಗಳನ್ನು ಮುಚ್ಚುವ ಮತ್ತು ಐಟಿ ಕಂಪನಿಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಭರವಸೆ ನೀಡಿತ್ತು. ಇದಾದ ನಂತರ ರಾಜೇಶ್ ಯಾಬಾಜಿ ಅವರು ಬೆಂಗಳೂರನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಬೆಂಗಳೂರಿನ ಮೂಲಸೌಕರ್ಯ ಕುರಿತ ಚರ್ಚೆ ಅಲ್ಲಿಗೇ ನಿಂತಿಲ್ಲ. ನಾರಾ ಲೋಕೇಶ್ ಅವರು ಮತ್ತೆ ಟ್ವೀಟ್ ಮಾಡಿದ್ದು, ಇದಕ್ಕೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿಯೇ ತಿರುಗೇಟು ನೀಡಿದ್ದಾರೆ. TADKEE Women Tunic Top

ನಾರಾ ಲೋಕೇಶ್ ಟ್ವೀಟ್‌ನಲ್ಲಿ ಏನಿದೆ?

ಹದಗೆಡುತ್ತಿರುವ ಹೊರ ವರ್ತುಲ ರಸ್ತೆಯಿಂದಾಗಿ ಹಲವು ಸ್ಟಾರ್ಟಪ್‌ಗಳು ಮತ್ತು ಸಂಸ್ಥೆಗಳು ಉತ್ತರ ಬೆಂಗಳೂರು ಹಾಗೂ ವೈಟ್‌ಫೀಲ್ಡ್ ಕಡೆಗೆ ಮುಖಮಾಡುತ್ತಿವೆ ಎಂದು ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಾರಾ ಲೋಕೇಶ್, "ಹೌದು, ಉತ್ತರದ ಕಡೆಗೆ ಸ್ವಲ್ಪ ಉತ್ತಮವಾಗಿದೆ. ಇನ್ನಷ್ಟು ಉತ್ತರಕ್ಕೆ ಬಂದರೆ ಅನಂತಪುರದಲ್ಲಿ ಇನ್ನೂ ಚೆನ್ನಾಗಿದೆ. ನಾವು ಅಲ್ಲಿ ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ಉಲ್ಲೇಖಿಸಿದ್ದಾರೆ.

ಪ್ರಿಯಾಂಕ್ ಖರ್ಗೆಯವರಿಂದ ತಿರುಗೇಟು

ನಾರಾ ಲೋಕೇಶ್ ಅವರ ಈ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ದುರ್ಬಲ ವ್ಯವಸ್ಥೆಗಳು ಬಲವಾದ ವ್ಯವಸ್ಥೆಗಳಿಂದ ಪೋಷಕಾಂಶಗಳನ್ನು ಪಡೆಯಲು ಪ್ರಯತ್ನಿಸುವುದು ಸಹಜ, ಇದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಪ್ರಯತ್ನ ಹತಾಶೆಯ ಹಂತಕ್ಕೆ ತಲುಪಿದಾಗ, ಅದು ಶಕ್ತಿಗಿಂತ ಹೆಚ್ಚು ದುರ್ಬಲತೆಯನ್ನು ತೋರಿಸುತ್ತದೆ" ಎಂದು ಮಾತನಾಡಿದ್ದಾರೆ.