Skip to main content
ವಿಡಿಯೋ
1/3
spirituality

ಮಳೆಯ ಸಿಂಚನದ ನಡುವೆ ವಿಜೃಂಭಿಸಿದ ಮೈಸೂರು ದಸರಾ ಉತ್ಸವ: ವಿಶೇಷತೆಗಳ ಮಾಹಿತಿ ಇಲ್ಲಿದೆ

By Gireesh Vasishta
ಮಳೆಯ ಸಿಂಚನದ ನಡುವೆ ವಿಜೃಂಭಿಸಿದ ಮೈಸೂರು ದಸರಾ ಉತ್ಸವ: ವಿಶೇಷತೆಗಳ ಮಾಹಿತಿ ಇಲ್ಲಿದೆ

ಆರನೇ ಬಾರಿಗೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ಅರಮನೆಯ ಆವರಣ ದಾಟುತ್ತಲೇ ವೇಗ ಪಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರು ಹಾಗೂ ಜಂಬೂಸವಾರಿಯ ಮಾರ್ಗದುದ್ದಕ್ಕೂ ನೆರೆದಿದ್ದ ಜನರ ಉತ್ಸಾಹವು ಸಡಗರ ಮುಟ್ಟಿತ್ತು.

ಮೈಸೂರು: ಮೈಸೂರು ದಸರಾ ಉತ್ಸವ ದೇಶ-ವಿದೇಶದೆಲ್ಲಡೆ ಪ್ರಾಮುಖ್ಯತೆ ಪಡೆದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಅಲ್ಲಿ ನಡೆದ ಜಂಬೂಸವಾರಿ ಲಕ್ಷಾಂತರ ಜನರ ಸಂಭ್ರಮದ ನಡುವೆ ಗುರುವಾರ ಸಂಜೆಯ ಹೊಂಬಣ್ಣದಲ್ಲಿ ಮೋಹಕವಾಗಿ ನೆರವೇರಿತು. ಬಿಸಿಲಿನಲ್ಲಿ ಜಂಬುಸವಾರಿ ಮೆರವಣಿಗೆ ಆರಂಭವಾದ ಬಳಿಕ ಆಗಾಗ ಮೋಡಗಳು ಕವಿದುಅವು ಸುರಿಸಿದ ತುಂತುರು ಮಳೆಯಲ್ಲಿ ನಡೆಯುತ್ತಲೇ ಜನ ಖುಷಿಯಿಂದ ಅಂಬಾರಿಯನ್ನು, ಚಾಮುಂಡೇಶ್ವರಿಯನ್ನು ನೋಡಿ ಕಣ್ತುಂಬಿಕೊಂಡರು.TRASE Block Heels Sandals For Women, Dusky Stylish & Comfortable Footwear


 ಆರನೇ ಬಾರಿಗೆ ಅಭಿಮನ್ಯು ಆನೆ ಹೊತ್ತಿದ್ದ 750 ಕೆಜಿಯ ಚಿನ್ನದ ಅಂಬಾರಿಯಲ್ಲಿ ಅಲಂಕರಿಸಿ ಇಡಲಾಗಿದ್ದ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ಅರಮನೆಯ ಆವರಣ ದಾಟುತ್ತಲೇ ವೇಗ ಪಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರು ಹಾಗೂ ಜಂಬೂಸವಾರಿಯ ಮಾರ್ಗದುದ್ದಕ್ಕೂ ನೆರೆದಿದ್ದ ಜನರ ಉತ್ಸಾಹವು ಸಡಗರ ಮುಟ್ಟಿತ್ತು. ವಿಜಯದಶಮಿ ಮೆರವಣಿಗೆಯ ದಿನವೇ ಗಾಂಧಿ ಜಯಂತಿ ಇದ್ದದ್ದು ಈ ಸಂಭ್ರಮವನ್ನು ಹೆಚ್ಚು ಮಾಡಿತ್ತು. ಗಾಂಧೀಜಿ ಸ್ಮರಣೆಗೂ ಮುಡಿಪಿಟ್ಟ ಅಪರೂಪದ ಜಂಬುಸವಾರಿಯ ಈ ಮೆರವಣಿಗೆ ವಿಶೇಷವೆನಿಸಿತು.

ಪ್ರಮುಖ ವಿಶೇಷತೆಗಳು:
ಉದ್ಘಾಟನೆಯ ವಿವಾದಾತ್ಮಕ ಆಯ್ಕೆ:

ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಇದು ವಿವಾದ ಸೃಷ್ಟಿಸಿತು, ಆದರೆ ಸುಪ್ರೀಂ ಕೋರ್ಟ್ ಸೆಕ್ಯುಲರಿಸಂ ಮತ್ತು ಸಮಾನತೆಯನ್ನು ಬೆಂಬಲಿ, ಇದು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡಿತು.

ಜಂಬೂಸವಾರಿ ಮತ್ತು ಅಭಿಮನ್ಯು ಆನೆ: ಅಕ್ಟೋಬರ್ 2 ರಂದು ನಡೆದ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಆರನೇ ಬಾರಿಗೆ 750 ಕೆಜಿ ಚಿನ್ನದ ಅಂಬಾರಿಯನ್ನು ಹೊತ್ತು ಮೆರವಣಿಗೆ ನಡೆಸಿತು.

ವಿಶ್ವ ದಾಖಲೆಯ ಡ್ರೋನ್ ಶೋ: ಅಕ್ಟೋಬರ್ 1 ಮತ್ತು 2 ರಂದು ಬನ್ನಿಮಂಟಪದಲ್ಲಿ ನಡೆದ 3,000 ಡ್ರೋನ್‌ಗಳ ಶೋ ವಿಶ್ವ ದಾಖಲೆ ಸೃಷ್ಟಿಸಿತು. ಹುಲಿ, ಮಯ್ಯೂರ, ಕೃಷ್ಣನ ಕಳಿಂಗ ನರ್ತನ, ಚಾಮುಂಡೇಶ್ವರಿ ಇತ್ಯಾದಿ ರೂಪಗಳನ್ನು ಆಕಾಶದಲ್ಲಿ ರೂಪಿಸಿ, ಲಕ್ಷಾಂತರ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ರಾವಣ ದಹನ ಮತ್ತು ಟಾರ್ಚ್‌ಲೈಟ್ ಪ್ಯಾರೇಡ್: ವಿಜಯದಶಮಿಯಂದು ನಡೆದ ರಾವಣ ದಹನವು ಒಳ್ಳೆಯದರ ವಿಜಯವನ್ನು ಸಾರಿತು. ಸಂಜೆ ಬನ್ನಿಮಂಟಪದಲ್ಲಿ ನಡೆದ ಟಾರ್ಚ್‌ಲೈಟ್ ಪ್ಯಾರೇಡ್‌ನಲ್ಲಿ ಏರ್ ಶೋ, ಯೋಗ ಸೆಶನ್‌ಗಳು, ಲೇಸರ್ ಡಿಸ್‌ಪ್ಲೇಗಳು ಇದ್ದವು. ಗವರ್ನರ್ ತಾ.ಚಂದ್ರಶೇಖರ್ ಗೌಡ ಅವರು ಚಾಲನೆ ನೀಡಿದರು.

ದೀಪಾಲಂಕಾರ: ನಗರದ 100,000ಕ್ಕೂ ಹೆಚ್ಚು ದೀಪಗಳಿಂದ 21 ದಿನಗಳ ಕಾಲ ಮಿನುಗಿತು. ಅರಮನೆ, ವೃತ್ತಗಳು, ರೈಲ್ವೆ ನಿಲ್ದಾಣಗಳು ಅಲಂಕೃತವಾದವು. ಇದನ್ನು ಓದಿ: 'BJP ಜೊತೆಗಿನ ಒಕ್ಕೂಟಕ್ಕಿಂತ ರಾಜೀನಾಮೆ ಆಯ್ಕೆ ಉತ್ತಮʼ: ಜಮ್ಮು-ಕಾಶ್ಮೀರ ಮಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆ: ಕಾರಣ ಹೀಗಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆಯ ಹೊರ ಆವರಣದ ಕೋಟೆ ಆಂಜನೇಯ ದೇಗುಲದ ಮುಂದೆ ನಂದಿದ್ವಜಕ್ಕೆ ಮಧ್ಯಾಹ್ನ 1:08 ನಿಮಿಷಕ್ಕೆ ಪೂಜೆ ಸಲ್ಲಿಸಿ ಸಚಿವರೊಂದಿಗೆ ಅರಮನೆ ಒಳಗೆ ಬಂದ ಬಳಿಕ ಶುರುವಾದ ಸ್ತಬ್ಧ ಚಿತ್ರ ಮತ್ತು ಕಲಾತಂಡಗಳ ಮೆರವಣಿಗೆಯು, 3 ಗಂಟೆಗೂ ಹೆಚ್ಚು ಕಾಲ ಸಾಂಸ್ಕೃತಿಕ ವೈಭವಗಳನ್ನು ಅನಾವರಣ ಮಾಡಿತು.

ತಾಳ-ಮೇಳ, ಕಂಸಳೆ, ತಮಟೆ, ನಗಾರಿ, ಡೋಲು, ಚಂಡೆಯ ನಾದ ನೃತ್ಯಗಳುೊಂದಿಗೆ ಸಾವಿರಾರು ಕಲಾವಿದರು ತಮ್ಮ ಜಿಲ್ಲೆಗಳ ಸಾಂಸ್ಕೃತಿಕ ವಿಶೇಷಗಳನ್ನು ವಿಶೇಷ ಸಂಗೀತ ನೃತ್ಯದ ಮೂಲಕ ಪ್ರಸ್ತುತಗೊಳಿಸಿದರು. ಒಟ್ಟಿನಲ್ಲಿ ಮೈಸೂರು ದಸರಾ ಪ್ರತಿಬಾರಿಯಂತೆ ಬಾರಿಯೂ ವಿಜೃಂಭಣೆಯಿಂದ ನೆರವೇರಿತು. ರಾತ್ರಿ ಬನ್ನಿಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತ್ತನ್ನು ಸಾವಿರಾರು ಮಂದಿ ವೀಕ್ಷಿಸಿದರು. ಅದ್ದೂರಿ ತನದ ಹರ್ಷದ ಹೊನಲನ್ನೇ ಹರಿಸುವ ಮೂಲಕ ಈ ಬಾರಿ 11 ದಿನಗಳ ನವರಾತ್ರಿ ಆಚರಣೆಗೂ ವಿದ್ಯುಕ್ತವಾಗಿ ತೆರೆ ಬಿದ್ದಿತ್ತು.