ಲಡಾಕ್‌ನಲ್ಲಿ ಉಂಟಾದ ಸಂಘರ್ಷಕ್ಕೆ ಸಂಬಂಧಪಟ್ಟಂತೆ, ಬಂಧಿತರಾಗಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಿಡುಗಡೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್‌ಮೊ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ. ಲಡಾಕ್‌ನ ರಾಜ್ಯಸ್ಥಾನಮಾನ ಕೋರಿ ಭುಗಿಲೆದ್ದ ಪ್ರತಿಭಟನೆಯ ಹಿನ್ನಲೆಯಲ್ಲಿ ಹಿಂಸಾಚಾರ ಉಂಟಾಗಿತ್ತು. ಘಟನೆಯಾದ ಎರಡು ದಿನಗಳ ಬಳಿಕ ಅವರನ್ನು ಬಂಧಿಸಲಾಗಿತ್ತು.
ಅವರ ಬಂಧನವನ್ನು ಪ್ರಶ್ನಿಸಿ ಅವರ ಪತ್ನಿ, ವಕೀಲ ಸರ್ವಂ ರೀಟಂ ಖಾರೆ ಅವರ ಮೂಲಕ ಅರ್ಜಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅವರ ಬಂಧನದ ಆದೇಶ ಪ್ರತಿ ನನ್ನ ಕೈಸೇರಿಲ್ಲ. ಅವರನ್ನು ಸಂಪರ್ಕಿಸಿಯೂ ಇಲ್ಲ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಮೊಕದ್ದಮೆಯನ್ನು ಪ್ರಶ್ನಿಸಿರುವುದಲ್ಲದೇ ಅವರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಆರೋಪಿಸಿದ್ದಾರೆ ಎನ್ನಲಾಗಿದೆ.
ಅವರ ಬಂಧನವು, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಕಾನೂನುಬಾಹಿರ ನಿಯಮಗಳ ಅಡಿಯಲ್ಲಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಕಾರ್ಯವಿಧಾನದ ಉಲ್ಲಂಘನೆ ಎಂದು ಹೇಳಲಾಗಿದೆ. ಸೆ. 26 ರಂದು ಅವರನ್ನು ಔಪಚಾರಿಕವಾಗಿ ಬಂಧಿಸಲಾಗಿದ್ದರೂ ನನಗೆ ಈ ವರೆಗೂ ಅವರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಿಲ್ಲ ಎಂದು ಅವರು ತಿಳಿಸಿದ್ದಾರೆ. Samsung Galaxy M05 (Mint Green, 4GB RAM, 64 GB Storage) | 50MP Dual Camera | Bigger 6.7" HD+ Display | 5000mAh Battery | 25W Fast Charging | 2 Gen OS Upgrade & 4 Year Security Update | Without Charger
ಸೆ. 24 ರಂದು ಉಂಟಾದ ಲಡಾಕ್‌ನಲ್ಲಿನ ಪ್ರತಿಭಟನೆಯು ಹಿಂಸಾಚಾರಕ್ಕೆ ಮಾರ್ಪಟ್ಟು, 4 ಮಂದಿ ಸಾವನ್ನಪ್ಪಿದರು ಹಾಗೂ ಬಹುಮಂದಿ ಗಾಯಗೊಂಡಿದ್ದಾರೆ. ವಾಂಗ್‌ಚುಕ್ ಅವರು ಈ ಪ್ರತಿಭಟನೆಗೆ ಪ್ರಚೋದಿಸಿದ್ದಾರೆ ಹಾಗೂ ಪಾಕಿಸ್ಥಾನ ಪಿಐಒ ( ಗುಪ್ತಚರ ಅಧಿಕಾರಿ) ಯೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ಆಧಾರಿಸಿ ಆರೋಪಿಸಲಾಗಿದೆ. ಈ ಮಧ್ಯೆ ಅಂಗ್‌ಮೊ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಮಧ್ಯಪ್ರವೇಶಿಸುವಂತೆ ಕೋರಿ ಪತ್ರ ಬರೆದಿರುವರು ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ - ಮುಂದಿನ ವಾರದವರೆಗೆ ಮಳೆಯ ಅಬ್ಬರ - ಹವಾಮಾನ ಇಲಾಖೆ ಎಚ್ಚರಿಕೆ