Skip to main content
ವಿಡಿಯೋ
1/3
general

ಇಸಿಎಂಎಸ್ ಯೋಜನೆಯಿಂದ 1.41 ಲಕ್ಷ ಉದ್ಯೋಗ ನಿರೀಕ್ಷೆ, 10 ಲಕ್ಷ ಕೋಟಿ ಉತ್ಪಾದನೆ ಗುರಿ

By Vinutha U
ಇಸಿಎಂಎಸ್ ಯೋಜನೆಯಿಂದ 1.41 ಲಕ್ಷ ಉದ್ಯೋಗ ನಿರೀಕ್ಷೆ, 10 ಲಕ್ಷ ಕೋಟಿ ಉತ್ಪಾದನೆ ಗುರಿ

12 ವಿವಿಧ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ಒಟ್ಟು 249 ಅರ್ಜಿಗಳು ಸಲ್ಲಿಕೆಯಾಗಿದ್ದು, 1.15 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ನಿರೀಕ್ಷಿಸಲಾಗಿದೆ. ಈ ಅರ್ಜಿಗಳನ್ನು ಸರ್ಕಾರ ಪರಿಶೀಲಿಸುತ್ತಿದ್ದು, ಯೋಗ್ಯ ಕಂಪನಿಗಳಿಗೆ ಗುತ್ತಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ: ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ ತಯಾರಿಕೆ ಯೋಜನೆ (ECMS)ಗೆ ಭಾರೀ ಸ್ಪಂದನೆ ದೊರೆಯುತ್ತಿದೆ. ಸರ್ಕಾರದ ಯೋಜನೆಯ ನಿರೀಕ್ಷೆಗೂ ಮೀರಿದ ಹೂಡಿಕೆ ಪ್ರಸ್ತಾಪಗಳು ಬಂದಿವೆ. 12 ವಿವಿಧ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ಒಟ್ಟು 249 ಅರ್ಜಿಗಳು ಸಲ್ಲಿಕೆಯಾಗಿದ್ದು, 1.15 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ನಿರೀಕ್ಷಿಸಲಾಗಿದೆ. ಅರ್ಜಿಗಳನ್ನು ಸರ್ಕಾರ ಪರಿಶೀಲಿಸುತ್ತಿದ್ದು, ಯೋಗ್ಯ ಕಂಪನಿಗಳಿಗೆ ಗುತ್ತಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಸಿಎಂಎಸ್ ಯೋಜನೆಗೆ ಅರ್ಜಿ ಸಲ್ಲಿಸಲು 2025 ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಸರ್ಕಾರ 59,350 ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಿತ್ತಾದರೂ, ಸಲ್ಲಿಕೆಯಾದ ಅರ್ಜಿಗಳಿಂದ 1,15,351 ಕೋಟಿ ರೂ. ಹೂಡಿಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ 1,41,801 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ, ಜೊತೆಗೆ 10 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಉತ್ಪಾದನಾ ಮೌಲ್ಯ ಸಾಧಿಸುವ ನಿರೀಕ್ಷೆ ಇದೆ. ಕಾಂತಾರ: ಚಾಪ್ಟರ್ 1 ಮೊದಲ ದಿನ ₹60 ಕೋಟಿ: ಭಾರತದಲ್ಲಿ‌ ಒಟ್ಟಾರೆ ಎಷ್ಟು ಕಲೆಕ್ಷನ್?

ಇಸಿಎಂಎಸ್ ಯೋಜನೆಯಡಿ ಡಿಸ್ಪ್ಲೇ ಮಾಡ್ಯೂಲ್ ಸಬ್ ಅಸೆಂಬ್ಲಿ, ಕ್ಯಾಮರಾ ಮಾಡ್ಯೂಲ್ ಸಬ್ ಅಸೆಂಬ್ಲಿ, ಎಲೆಕ್ಟ್ರೋ ಮೆಕ್ಯಾನಿಕಲ್ಸ್, ಮಲ್ಟಿಲೇಯರ್ ಪಿಸಿಬಿ, ಆಪ್ಟಿಕಲ್ ಟ್ರಾನ್ಸೀವರ್ ಸೇರಿದಂತೆ 12 ವಿಭಾಗಗಳನ್ನು ಗುರಿಯಾಗಿಸಲಾಗಿದೆ. ಇವುಗಳಲ್ಲಿ ಎಲೆಕ್ಟ್ರೋ ಮೆಕ್ಯಾನಿಕಲ್ಸ್ ಮತ್ತು ಮಲ್ಟಿಲೇಯರ್ ಪಿಸಿಬಿಗಳ ತಯಾರಿಕೆಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಎಸ್ಎಂಡಿ ಪಾಸಿವ್ ಕಾಂಪೊನೆಂಟ್ಗಳಿಗೆ ಕಡಿಮೆ ಅರ್ಜಿಗಳು ಬಂದಿವೆ.

ಎಸ್ಎಂಡಿ ಪಾಸಿವ್ಸ್, ಲ್ಯಾಮಿನೇಟ್ಸ್, ಫ್ಲೆಕ್ಸಿಬಲ್ ಪಿಸಿಬಿ, ಮತ್ತು ಕ್ಯಾಪಿಟಲ್ ಎಕ್ವಿಪ್ಮೆಂಟ್ನಂತಹ ವಿಭಾಗಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹೂಡಿಕೆಗಳು ಆಕರ್ಷಿತವಾಗಿವೆ. ಇವು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆಗೆ ದೃಢವಾದ ಇಕೋಸಿಸ್ಟಂ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿವೆ. 2030-31 ವೇಳೆಗೆ ಭಾರತದಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ ಸಾಕಾರಗೊಳಿಸುವ ನಿರೀಕ್ಷೆ ಇದೆ. DUPATTA BAZAAR Women's Multicolour Mirror Work Digitally Printed Dupatta

ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಯೋಜನೆಗಳಿಗೂ ಉತ್ತಮ ಸ್ಪಂದನೆ ದೊರೆತಿದೆ. ಸೆಮಿಕಾನ್ ಯೋಜನೆಯಡಿ 10 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 1.60 ಲಕ್ಷ ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. 23 ಡಿಸೈನ್ ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಮೊಬೈಲ್ ತಯಾರಿಕೆ ಪಿಎಲ್ಐ ಯೋಜನೆಯಡಿ 12,612 ಕೋಟಿ ರೂ. ಹೂಡಿಕೆ ಬಂದಿದೆ. ಕಳೆದ ದಶಕದಲ್ಲಿ ಮೊಬೈಲ್ ಉತ್ಪಾದನೆ ವಾರ್ಷಿಕ ಶೇ. 24 ಸಿಎಜಿಆರ್ನಲ್ಲಿ ಬೆಳೆದಿದೆ. ಐಟಿ ಹಾರ್ಡ್ವೇರ್ ಪಿಎಲ್ಐ ಯೋಜನೆಯಡಿ 2,439 ಕೋಟಿ ರೂ. ಹೂಡಿಕೆ ನಿರೀಕ್ಷಿಸಲಾಗಿದೆ. ಯೋಜನೆಗಳು ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರವನ್ನಾಗಿ ಪರಿವರ್ತಿಸಲು ಬಲವಾದ ಅಡಿಪಾಯ ಹಾಕಲಿವೆ.