ಚಿಕ್ಕಮಗಳೂರು: ಗಣೇಶ ಬಿಡುವ ವೇಳೆ ಡಿಜೆಗೆ ಅವಕಾಶ ಕೊಡಲಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಡುರಸ್ತೆಯಲ್ಲೇ ಗಣೇಶನನ್ನು ನಿಲ್ಲಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಚಿಕ್ಕಮಗಳೂರಿನ ಬೀರೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಈ ಘಟನೆ ನಡೆದಿದೆ. ನಾವು ಪ್ರತಿ ಸರಿಯೂ ಗಣೇಶ ಬಿಡುವ ವೇಳೆಗೆ ಡಿಜೆ ಹಾಕಿಕೊಂಡು ಎಲ್ಲರೂ ಕುಣಿದಾಡಿಕೊಂಡು ಸಂಭ್ರಮದಿಂದ ಅದ್ದೂರಿಯಾಗಿ ಗಣೇಶನನ್ನು ಬಿಡುತ್ತಾ ಇದ್ದೆವು.ಇದನ್ನೂ ಓದಿ: ಅಶ್ವಿನಿ ಹಿಂದೆ ಬಿದ್ದು ಮೂಲೆ ಗುಂಪಾದ್ರಾ ಅಭಿಷೇಕ್? ಶುರುವಾಯ್ತಾ ಬಿಗ್‌ಬಾಸ್‌ನಲ್ಲಿ ಹೊಸ ಲವ್ ಸ್ಟೋರಿ?
ಆದರೆ ಈ ಭಾರೀ ಮಾತ್ರ ಪೊಲೀಸರು ಡಿಜೆಗೆ ಅವಕಾಶ ನೀಡಿಲ್ಲ ಎಂದು ನಡುರಸ್ತೆಯಲ್ಲಿ ಗಣೇಶನಿರುವ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿ ಕಿಡಿ ಕಾರಿದ್ದಾರೆ. ಸಾರ್ವಜನಿಕರು ಈ ವರ್ತನೆಯಿಂದ ಪೊಲೀಸರಿಗೆ ತಲೆಬಿಸಿಯಾಗಿದೆ. ಗಣೇಶನನ್ನು ತೆಗೆದುಕೊಂಡು ಹೋಗುವ ದಾರಿ ಮಧ್ಯೆ ಮಸೀದಿ ಇರುವ ಕಾರಣದಿಂದ ಪೊಲೀಸರು ಈ ಬಾರಿಯ ಡಿಜೆಗೆ ಅವಕಾಶ ನೀಡಿಲ್ಲ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕಾಂತಾರ: ಚಾಪ್ಟರ್ 1 ಮೊದಲ ದಿನ ₹60 ಕೋಟಿ: ಭಾರತದಲ್ಲಿ ಒಟ್ಟಾರೆ ಎಷ್ಟು ಕಲೆಕ್ಷನ್?
ನಮಗೆ ನ್ಯಾಯ ಸಿಗುವವರೆಗೂ ಗಣೇಶನ ವಿಸರ್ಜನೆ ಮಾಡೋದಿಲ್ಲ ಅಂತ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಈ ಗಣಪತಿ ಬೀರೂರು ಪಟ್ಟಣದಲ್ಲಿ ದೊಡ್ಡ ಗಣಪತಿ ಎಂದೇ ಖ್ಯಾತಿ ಪಡೆದಿತ್ತು. ಆದರೆ ನಿನ್ನೆಗೆ ಡಿಜೆ ಹಾಕಲು ಪೊಲೀಸ್‌ನವರೇ ಅನುಮತಿ ನೀಡಿದ್ದರು ಆದರೆ ಏಕಾಏಕಿ ಗಣೇಶ ಮೆರವಣಿಗೆ ತೆರಳುವ ವೇಳೆಯೇ ಬಂದು ಡಿಜೆ ಆಫ್ ಮಾಡಿಸಿ ಡಿಜೆ ಹಾಕುವ ಹಾಗಿಲ್ಲ ಎಂದು ಹೇಳಿದರು. ಯಾಕ್ ಅವರು ಈ ತರಹ ಮಾಡಿದರೂ ಅಂತ ನಮಗೆ ಗೊತ್ತಾಗಬೇಕಿದೆ ಅಲ್ಲಿಯವರೆಗೂ ಗಣೇಶನನ್ನು ವಿಸರ್ಜನೆ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.SWORNOF Women's Patola Silk Saree With Unstitched Boluse Piece