ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ತಮ್ಮ "ಬ್ಯಾಲೆನ್ಸ್‌ಡ್ ಮತ್ತು ಬುದ್ಧಿವಂತ" ಸ್ನೇಹಿತ ಎಂದು ಕೊಂಡಾಡಿದರು. ರಷ್ಯಾದಿಂದ ಭಾರತಕ್ಕೆ ಕಚ್ಚಾ ತೈಲ ಆಮದಿನಿಂದಾಗಿ ಯುಎಸ್ ತೆರಿಗೆಗಳಿಂದ ಉಂಟಾಗಬಹುದಾದ ಭಾರತದ ಆರ್ಥಿಕ ನಷ್ಟವನ್ನು ಸರಿದೂಗಿಸಲು, ರಷ್ಯಾ ಭಾರತದಿಂದ ಹೆಚ್ಚಿನ ಕೃಷಿ ಮತ್ತು ಔಷಧ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಿದೆ ಎಂದು ಘೋಷಿಸಿದರು.
ಸೋಚಿಯಲ್ಲಿ ನಡೆದ ವಾಲ್ದೈ ಡಿಸ್ಕಶನ್ ಕ್ಲಬ್ನ ಪ್ಲೀನರಿ ಸೆಷನ್ನಲ್ಲಿ ಮಾತನಾಡಿದ ಪುಟಿನ್, ರಷ್ಯಾ-ಭಾರತದ "ವಿಶೇಷ" ಮತ್ತು "ವಿಶೇಷಾಧಿಕಾರಯುತ ಕಾರ್ಯತಂತ್ರದ ಪಾಲುದಾರಿಕೆ"ಯ 15ನೇ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿದರು. ಈ ಸಂಬಂಧವನ್ನು "ಸ್ನೇಹಪೂರ್ಣ ಮತ್ತು ವಿಶ್ವಾಸಾರ್ಹ" ಎಂದು ವಿವರಿಸಿದ ಅವರು, ಮೋದಿಯೊಂದಿಗಿನ ಸಂವಾದದಲ್ಲಿ ತಾವು "ಆರಾಮದಾಯಕ"ವಾಗಿರುವುದಾಗಿ ಹೇಳಿದರು. ಮೋದಿಯವರು "ರಾಷ್ಟ್ರೀಯ ಆದ್ಯತೆ"ಯನ್ನು ಮೊದಲು ಪ್ರಸ್ತುತ ಪಡಿಸುವ ನಾಯಕ ಎಂದು ಕೊಂಡಾಡಿದರು.ಇದನ್ನು ಓದಿ: ಕಾಂತಾರ: ಚಾಪ್ಟರ್ 1 ಮೊದಲ ದಿನ ₹60 ಕೋಟಿ: ಭಾರತದಲ್ಲಿ ಒಟ್ಟಾರೆ ಎಷ್ಟು ಕಲೆಕ್ಷನ್?
ಪುಟಿನ್ರ ಮಾತುಗಳ ಪ್ರಮುಖಾಂಶಗಳು:
ಯುಎಸ್ ಒತ್ತಡದ ವಿರುದ್ಧ ತೈಲ ಆಮದು: ಭಾರತವು ರಷ್ಯಾದಿಂದ ರಿಯಾಯಿತಿ ದರದ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದ್ದಕ್ಕೆ ಪುಟಿನ್ ಬೆಂಬಲ ಸೂಚಿಸಿದರು. ಟ್ರಂಪ್ ಆಡಳಿತವು ಭಾರತವು ಉಕ್ರೇನ್ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ನೀಡುತ್ತಿದೆ ಎಂದು ಆರೋಪಿಸಿ ಎಚ್ಚರಿಕೆ ನೀಡಿತ್ತು.BULLMER Striped Textured Printed Polo Neck Fullsleeve T-Shirt with Rib for Men
-ಈ ವ್ಯಾಪಾರದಲ್ಲಿ ರಾಜಕೀಯ ಉದ್ದೇಶವಿಲ್ಲ, ಇದು "ಸಂಪೂರ್ಣ ಆರ್ಥಿಕ ಲೆಕ್ಕಾಚಾರ" ಎಂದು ಪುಟಿನ್ ಹೇಳಿದರು. "ಭಾರತವು ನಮ್ಮ ಶಕ್ತಿ ಸಂಪನ್ಮೂಲಗಳನ್ನು ತಿರಸ್ಕರಿಸಿದರೆ, ಅದು $9-10 ಬಿಲಿಯನ್ಗಿಂತಲೂ ಹೆಚ್ಚಿನ ನಷ್ಟವನ್ನು ಎದುರಿಸಬೇಕಾಗುತ್ತದೆ" ಎಂದು ಅವರು ತಿಳಿಸಿದರು.
-ಭಾರತದ ಜನರು "ಯಾರ ಮುಂದೆಯೂ ಅವಮಾನವನ್ನು ಸಹಿಸದಿರುವ" ಧೈರ್ಯವನ್ನು ಕೊಂಡಾಡಿದರು. "ನಾನು, ಪ್ರಧಾನಿ ಮೋದಿಯವರನ್ನು ಚೆನ್ನಾಗಿ ತಿಳಿದಿದ್ದೇನೆ; ಅವರು ಇಂತಹ ಕ್ರಮಗಳನ್ನು ಎಂದಿಗೂ ತೆಗೆದುಕೊಳ್ಳುವುದಿಲ್ಲ" ಎಂದರು.
- ತೆರಿಗೆ ನಷ್ಟವನ್ನು ಸರಿದೂಗಿಸುವುದು: ಡೊನಾಲ್ಡ್ ಟ್ರಂಪ್ ಘೋಷಿಸಿರುವಂತಹ ಯುಎಸ್ನ ಭಾರೀ ತೆರಿಗೆಗಳಿಂದ ಭಾರತಕ್ಕೆ ಆಗಬಹುದಾದ ಆರ್ಥಿಕ ನಷ್ಟವನ್ನು "ರಷ್ಯಾದಿಂದ ಕಚ್ಚಾ ತೈಲ ಆಮದು" ಮತ್ತು ಭಾರತದ ಸಾರ್ವಭೌಮತೆಯ ಘನತೆಯನ್ನು ಉನ್ನತೀಕರಿಸುವ ಮೂಲಕ ಸರಿದೂಗಿಸಲಾಗುವುದು ಎಂದು ಪುಟಿನ್ ಭರವಸೆ ನೀಡಿದರು.