Skip to main content
ವಿಡಿಯೋ
1/2
globalnews

ಮ್ಯಾಂಚೆಸ್ಟರ್‌ನಲ್ಲಿ ಭಯೋತ್ಪಾದಕ ದಾಳಿ: ಉಗ್ರತ್ವ ಖಂಡಿಸಿದ ಭಾರತ, ಪೊಲೀಸ್ ತನಿಖೆ ಚುರುಕು

By Shravanthi R
ಮ್ಯಾಂಚೆಸ್ಟರ್‌ನಲ್ಲಿ ಭಯೋತ್ಪಾದಕ ದಾಳಿ: ಉಗ್ರತ್ವ ಖಂಡಿಸಿದ ಭಾರತ, ಪೊಲೀಸ್ ತನಿಖೆ ಚುರುಕು

ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ಯಹೂದಿಗಳ ಪ್ರಾರ್ಥನಾ ಮಂದಿರದ ಮೇಲೆ ದಾಳಿ ಸಂಭವಿಸಿದೆ. ಇಬ್ಬರನ್ನು ಇರಿದು, ಮೂವರನ್ನು ಗಾಯಗೊಳಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಭಾರತವು ಖಂಡನೆ ವ್ಯಕ್ತಪಡಿಸಿ, ಜಾಗತಿಕವಾಗಿ ಭಯೋತ್ಪಾದಕ ದಾಳಿ ವಿರುದ್ಧ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದೆ.

ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ನ ಮ್ಯಾಂಚೆಸ್ಟರ್ ನಲ್ಲಿ ಯಹೂದಿಗಳನ್ನು ಗುರಿ ಮಾಡಿಕೊಂಡು ಉಗ್ರರು ಭಯಾನಕ ದಾಳಿ ನಡೆಸಿದ್ದಾರೆ. ಅಲ್ಲಿನ ಹೀಟನ್‌ ಪಾರ್ಕ್ ನಲ್ಲಿರುವ ಯಹೂದಿಗಳ ಪೂಜಾ ಮಂದಿರ ಸಿನಗೋಗ್‌ ಬಳಿ, ಕಾರು ನುಗ್ಗಿಸಿ ಬಳಿಕ ಮಾರಕಾಸ್ತ್ರಗಳಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದಾರೆ. ಇನ್ನುಳಿದ ಮೂವರು ಗಾಯಗೊಂಡಿದ್ದು, ಉಗ್ರರ ಕುಪಿತದ ಬಗ್ಗೆ ಪೊಲೀಸರು ಮಾಹಿತಿ ಒದಗಿಸಿದ್ದಾರೆ. ಈ ಘಟನೆಯನ್ನು ಭಾರತವು ಈ ಘಟನೆಯನ್ನು ಖಂಡಿಸಿ ಈ ಬಗ್ಗೆ ಅಲ್ಲಿನ ಜನರೊಟ್ಟಿಗೆ ನಿಲ್ಲುತ್ತೇವೆ ಎಂದು ತಿಳಿಸಿದೆ ಎನ್ನಲಾಗಿದೆ. 

ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಯಹೂದಿಗಳ ಪವಿತ್ರ ದಿನವಾದ, ಅಂತರಾಷ್ಟ್ರೀಯ ಅಹಿಂಸಾ ದಿನದಂದು ಈ ಹೇಯ ಕೃತ್ಯ ನಡೆಸಿರುವುದು ದುಃಖಕರ ಹಾಗೂ ಅಪರಾಧ ಎಂದು ಬರೆದುಕೊಂಡಿದ್ದಾರೆ. ಇದನ್ನು ಜಾಗತಿಕವಾಗಿ ಖಂಡಿಸಿ ಭಯೋತ್ಪಾದನೆಯ ದುಷ್ಟ ಶಕ್ತಿಗಳ ವಿರುದ್ದ ನಾವು ಸಂಘಟಿತ ಮತ್ತು ಒಗ್ಗಟ್ಟಿನ ಕೆಲಸಗಳ ಮೂಲಕ ಅವನ್ನು ಮಣಿಸಬೇಕು ಎಂದು ತಿಳಿಸಿದ್ದಾರೆ. ಇದರೊಟ್ಟಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಖಂಡಿಸಿದ್ದಾರೆ ಎನ್ನಲಾಗಿದೆ.  Samsung Galaxy A55 5G (Awesome Iceblue, 8GB RAM, 128GB Storage) | AI | Metal Frame | 50 MP Main Camera (OIS) | Super HDR Video| Nightography | IP67 | Corning Gorilla Glass Victus+ | sAMOLED Display

ಸಿರಿಯನ್ ಮೂಲದ ಬ್ರಿಟಿಷ್ ಪ್ರಜೆಯೋರ್ವನು ದಾಳಿ ನಡೆಸಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಈಗಾಗಲೇ ಭಯೋತ್ಪಾದಕ ಕೃತ್ಯಗಳ ಸಂಖ್ಯೆಯಿಂದ ಮೂವರನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ. ಇದೇ ರೀತಿ ದಾಳಿಯ ಹಿಂದಿನ ಉದ್ದೇಶವನ್ನು ತಿಳಿಯಲು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುವಕ ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ನೀಡಿದ ಆರೋಪದಲ್ಲಿ ಖ್ಯಾತ ಯೂಟ್ಯೂಬರ್ ಅರೆಸ್ಟ್! ಯಾರವನು?