ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಸದಾ ತಮಗೆ ಸ್ಫೂರ್ತಿ, ಅರಿವು, ಸನ್ಮಾರ್ಗ ತೋರುವ ದಿವ್ಯ ಚೇತನವಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಹೇಳಿದರು. ಅಲ್ಲದೆ, ರಾಷ್ಟ್ರದ ಎರಡನೇ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಸಜ್ಜನಿಕೆ ಹಾಗೂ ದಕ್ಷತೆ ಪ್ರಾಮಾಣಿಕತೆಯ ಮೇರು ಸದೃಶ್ಯ ನಾಯಕರಾಗಿದ್ದರು. ಸಂಕಷ್ಟ ಕಾಲದಲ್ಲಿ ರಾಷ್ಟ್ರವನ್ನು ಮುನ್ನಡೆಸಿದ್ದ ಮಹಾಪುರುಷರು. ಎಲ್ಲಾ ಕಾಲಕ್ಕೂ ಸಲ್ಲುವ ಕಾಲಾತೀತ ಆದರ್ಶ ನಾಯಕರು ಅವರು ಇಂದು ಅವರು ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಕಚೇರಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಕಚೇರಿಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಲಾಯಿತು.
ಬಾಪೂಜಿ ಅವರು ಸತ್ಯ ಅಹಿಂಸೆಯ ಮೂಲಕ ಜಗತ್ತಿಗೆ ಸಂದೇಶವನ್ನು ನೀಡಿದವರು. ಅವರು ಹಿಂದೆಂದಿಗಿಂತ ಇವತ್ತು ಹೆಚ್ಚು ಪ್ರಸ್ತುತರಾಗಿದ್ದಾರೆ. ಪ್ರಕ್ಷುಬ್ಧವಾಗಿರುವ ಜಾಗತಿಕ ಪರಿಸ್ಥಿತಿಗಳಿಗೆ ಗಾಂಧೀ ಮಾರ್ಗವೇ ಶಾಂತಿ ಮಾರ್ಗವಾಗಿದೆ ಎಂದು ರಮೇಶ್ ಗೌಡ ಅವರು ಹೇಳಿದರು.Also Read: IAF Chief Reveals: 4-5 Pakistani F-16s Destroyed in Ground Strikes During Operation Sindoor
ಈ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಗಾಂಧೀ ಗೀತೆಗಳ ಗಾಯನ ಹಾಗೂ ಭಗವದ್ಗೀತೆ, ಖುರಾನ್, ಬೈಬಲ್ ಪಠಣ ಹಾಗೂ ವೇದ ಮಂತ್ರಗಳನ್ನು ಪಠಿಸಲಾಯಿತು.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ಮಾಜಿ ಶಾಸಕರಾದ ಎಂ. ಎಸ್. ನಾರಾಯಣ್, ಪಕ್ಷದ ಬೆಂಗಳೂರು ನಗರ ಮಹಾಪ್ರಧಾನ ಕಾರ್ಯದರ್ಶಿ ಎಸ್. ರಮೇಶ, ಬಿಬಿಎಂಪಿಯ ವಿರೋಧ ಪಕ್ಷದ ಮಾಜಿ ನಾಯಕರಾದ ಟಿ. ತಿಮ್ಮೇಗೌಡ, ಪಕ್ಷದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಧ್ಯಕ್ಷ ಎ.ಎಂ. ಪ್ರವೀಣ್ ಕುಮಾರ್, ಬೆಂಗಳೂರು ನಗರ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಾ ಸಂತೋಜಿ ರಾವ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಜಿ. ವೇಲು, ಯುವ ಘಟಕದ ಅಧ್ಯಕ್ಷ ಸ್ಯಾಮುಯಲ್, ಕಾರ್ಮಿಕ ವಿಭಾಗದ ಅಧ್ಯಕ್ಷ ಎಂ. ಗೋಪಾಲ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಜನಾರ್ಧನ್, ಬಿಬಿಎಂಪಿ ಮಾಜಿ ಸದಸ್ಯರಾದ ರಜಿನಿ ಮೂರ್ತಿ, ಸಿ.ವಿ. ರಾಮನಗರ ಕ್ಷೇತ್ರದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯ ಸೇವಾದಳ ವಿಭಾಗದ ಅಧ್ಯಕ್ಷ ಬಸವರಾಜ ಪಾದಯಾತ್ರಿ ಹಾಗೂ ಪಕ್ಷದ ಇನ್ನಿತರ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.