Skip to main content
ವಿಡಿಯೋ
1/2
general

ನೂರು ವರ್ಷಗಳ ದೇಶಸೇವೆ - ಆರ್‌ಎಸ್ಎಸ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಲೇಖನ

By Shravanthi R
ನೂರು ವರ್ಷಗಳ ದೇಶಸೇವೆ - ಆರ್‌ಎಸ್ಎಸ್ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶೇಷ ಲೇಖನ

ಆರ್‌ಎಸ್ಎಸ್ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿಶೇಷ ಲೇಖನ ಹಂಚಿಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಶತಮಾನೋತ್ಸವದ ಅಂಗವಾಗಿ ವಿಶೇಷ ಲೇಖನದಲ್ಲಿ ಸಂಘದ ರಾಷ್ಟ್ರಸೇವೆಯ ಶತಮಾನ ಪಯಣವನ್ನು; ಸಮಾಜಸೇವೆಯ ನಿಟ್ಟಿನಲ್ಲಿ ಸಂಘವು ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಗುರಿ ಸಾಧಿಸಿದೆ ಎಂದು ಅವರು ಪ್ರಶಂಸಿಸಿದ್ದಾರೆ.

RSS ಸಂಘಟನೆಯು ಈ ಶುಭ ವಿಜಯದಶಮಿಯಂದು ತನ್ನ ಶತಮಾನೋತ್ಸವ ನಿಮಿತ್ತ ಇತಿಹಾಸ ನಿರ್ಮಿಸಿದೆ. ಈ ಬಗ್ಗೆ ತಮ್ಮ ಸುದೀರ್ಘವಾದ ಲೇಖನದಲ್ಲಿ ಆರ್‌ಎಸ್‌ಎಸ್‌ನ ಮೈಲಿಗಲ್ಲು ಸ್ಮರಣಿಕೆ ಬಗ್ಗೆ ಪ್ರಸ್ತಾಪಿಸಿರುವ ಪ್ರಧಾನಿ ಮೋದಿಯವರು ಈ ಪರಿಯಾಗಿ ಲೇಖನವನ್ನು ಮಂಡಿಸಿದ್ದಾರೆ. ಈ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ.

ಸಂಘವನ್ನು ಹತ್ತಿಕ್ಕಲು ಪಿತೂರಿಗಳು ಪ್ರಯತ್ನಗಳು ನಡೆದವು. ಆದರೂ ಸಂಚಾಲಕನಾಗಿ ಸಂಘವು ಎಂದಿಗೂ ಕಹಿ ಭಾವನೆಗಳನ್ನು ಬೇರೂರಲು ಬಿಡಲಿಲ್ಲ. ಏಕೆಂದರೆ ಸ್ವಯಂಸೇವಕರು ತಾವು ಸಮಾಜದಿಂದ ಬೇರ್ಪಟ್ಟಿಲ್ಲ ಸಮಾಜವು ನಮ್ಮಿಂದಲೇ ರೂಪಿತಗೊಂಡಿದೆ ಎಂದು ನಂಬುತ್ತಾರೆ. 

ಸತತ ನೂರು ವರ್ಷಗಳ ಹಿಂದೆ ವಿಜಯದಶಮಿಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಗೊಂಡಿತು. ಇದು ಪ್ರಾಚೀನ ಪರಂಪರೆಯ ಅಭಿವ್ಯಕ್ತಿ ಹಾಗೂ ಭಾರತದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಕಾಲದ ಸವಾಲುಗಳನ್ನು ಎದುರಿಸಿದ ವಿಭಿನ್ನ ರೂಪಕಗಳು ಪ್ರಕಟವಾಗಿವೆ. ಸಂಘದ ಶತಮಾನೋತ್ಸವಕ್ಕೆ ನಮ್ಮ ಪೀಳಿಗೆಯ ಸ್ವಯಂಸೇವಕರು ಸಾಕ್ಷಿಯಾಗಿರುವುದು ಸೌಭಾಗ್ಯವಾಗಿದೆ.  

ಈ ಐತಿಹಾಸಿಕ ಸಂದರ್ಭದಲ್ಲಿ ರಾಷ್ಟ್ರ ಮತ್ತು ಜನರ ಸೇವೆಗಾಗಿ ಅಸಂಖ್ಯಾತ ಸ್ವಯಂಸೇವಕರು ಸಮರ್ಪಿತರಾಗಿರುವುದಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು ಕೋರುತ್ತೇನೆ. ಸಂಘದ ಸಂಸ್ಥಾಪಕರು ಹಾಗೂ ಆದರ್ಶ ಮಾರ್ಗದರ್ಶಕರಾದ ಪರಮಪೂಜ್ಯ ಡಾ. ಹೆಗ್ಡೆವಾಡ್ಕರ್‌ ಜಿ ಅವರಿಗೆ ನನ್ನ ಗೌರವಯುತ ನಮನ. ನೂರು ವರ್ಷಗಳ ಈ ಅದ್ಭುತ ಪ್ರಯಾಣದ ಸ್ಮರಣಾರ್ಥ ಭಾರತ ಸರ್ಕಾರವು ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದೆ. POCO C71, Cool Blue (6GB, 128GB)

ರಾಷ್ಟ್ರ ನಿರ್ಮಾಣದ ಗುರಿ -

ಸಂಘವು ಆರಂಭದಿಂದ ಸತತ ರಾಷ್ಟ್ರ ನಿರ್ಮಾಣಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿದೆ. ಇದನ್ನು ಸಾಧಿಸಲು ವ್ಯಕ್ತಿತ್ವ ನಿರ್ಮಾಣದ ಮಾರ್ಗವನ್ನು ಆರಿಸಿಕೊಂಡಿದೆ. ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಸಂಘದ ಮಾರ್ಗವಾಗಿದೆ. ಈ ಉದ್ದೇಶಕ್ಕಾಗಿ ವ್ಯವಸ್ಥೆಯನ್ನು, ದೈನಂದಿನ ಶಾಖೆಯ ಪ್ರತಿಯೊಬ್ಬ ಸ್ವಯಂಸೇವಕನು ʻನಾನುʼ ಇಂದ ʻನಾವುʼ ಗೆ ಪ್ರಯಾಣ ಆರಂಭಿಸುವ ಪರಿವರ್ತನೆಯ ಪ್ರಕ್ರಿಯೆಗೆ ಒಳಗಾಗುವ ಸ್ಪೂರ್ತಿದಾಯಕ ಸ್ಥಳವಾಗಿದೆ.

ಕಡುಕಷ್ಟಕ್ಕೆ ನಿಲ್ಲುವ ಸಂಘ -

ಸಂಘವು ಯಾವಾಗಲೂ ದೇಶಭಕ್ತಿ ಮತ್ತು ಸೇವೆಗೆ ಸಮಾನವಾಗಿ ದುಡಿದಿದೆ. ನಿರಾಶ್ರಿತರಿಗೆ ಸೇವೆ ಸಲ್ಲಿಸಲು ಮುಂದಾಗಿದೆ. ಸ್ವಯಂಸೇವಕರು ಮೊದಲು ಸ್ಪಂದಿಸುವವರಾಗಿರುತ್ತಾರೆ ಹಾಗೂ ಮುಂಚೂಣಿಯಲ್ಲಿ ಕೆಲಸ ಮಾಡುತ್ತಾರೆ, ರಾಷ್ಟ್ರದ ಆತ್ಮವನ್ನು ಬಲಪಡಿಸುವ ಕೆಲಸವಾಗಿ ವೈಯಕ್ತಿಕ ಕಷ್ಟಗಳನ್ನು ಸಹಿಸಿಕೊಂಡು ಇತರರ ಕಷ್ಟ ಕಡಿಮೆ ಮಾಡುವುದು ಸ್ವತಃ ಪ್ರತಿಯೊಬ್ಬ ಸ್ವಯಂಸೇವಕನ ಧ್ಯೇಯವಾಗಿದೆ.

ದೇಶ ಕಟ್ಟಲು ಮಾರ್ಗದರ್ಶನ -

ಸಂಘದ ʻಪಂಚಪರಿವರ್ತನೆʼ ಪ್ರತಿಯೊಬ್ಬ ಸ್ವಯಂಸೇವಕರಿಗೂ ಇವತ್ತಿನ ಸವಾಲುಗಳನ್ನು ಜಯಿಸಲು ಹಾದಿಯನ್ನು ತೋರಿದೆ. ಅವುಗಳೆಂದರೆ -

  • ಸ್ವಭೋದ - ಸ್ವಯಂ ಅರಿವು 

  • ಸಾಮಾಜಿಕ ಸಮರಸ - ಸಾಮಾಜಿಕ ನ್ಯಾಯ, ಸಾಮಾಜಿಕ ಸಾಮರಸ್ಯ

  • ಕುಟುಂಬ ಪ್ರಭೋಧನ್‌ - ಕೌಟುಂಬಿಕ ಮೌಲ್ಯಗಳು

  •  ನಾಗರಿಕ ಶಿಷ್ಟಾಚಾರ್‌ - ನಾಗರಿಕ ಪ್ರಜ್ಞೆ

  •  ಪರ್ಯಾವರಣ್‌ - ಮುಂಬರುವ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವುದು

ಈ ಎಲ್ಲ ಸಂಕಲ್ಪಗಳ ಮಾರ್ಗದರ್ಶನದೊಂದಿಗೆ ಸಂಭವ ಶತಮಾನದತ್ತ ಪ್ರಯಾಣ ಬೆಳೆಸಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಮುನ್ನಡೆಸಲು ಸಂಘದ ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಮತ್ತು ಅವರ ಕೊಡುಗೆಗೆ ಹೃತ್ಪೂರ್ವಕ ಶುಭಾಶಯಗಳು. ಇದನ್ನೂ ಓದಿ: PM-SETU ಸೇರಿದಂತೆ 62,000 ಕೋಟಿ ಮೌಲ್ಯದ ಯುವ ಪ್ರೋತ್ಸಾಹ ಯೋಜನೆಗಳಿಗೆ ಚಾಲನೆ - ಪ್ರಧಾನಿ ಮೋದಿ